ಬೆಂಗಳೂರು ಕಾಮಿಕ್ ಕಾನ್ 2025ರಲ್ಲಿ ಯಮಹಾ ಸ್ಕೂಟರ್, ಬೈಕ್‌ಗಳ ಎಕ್ಸ್‌ಪೀರಿಯನ್ಸ್‌ ಜೋನ್‌

| Published : Jan 19 2025, 02:18 AM IST / Updated: Jan 19 2025, 08:44 AM IST

ಸಾರಾಂಶ

ಕಾಮಿಕ್‌ ಜಗತ್ತಿನ ಅತ್ಯಂತ ದೊಡ್ಡ ಉತ್ಸವವಾದ ಕಾಮಿಕ್ ಕಾನ್‌ 2025ರಲ್ಲಿ ಯಮಹಾ ತನ್ನ ಸ್ಕೂಟರ್, ಬೈಕ್‌ಗಳನ್ನು ಪ್ರದರ್ಶನ ಮಾಡುತ್ತಿದೆ.

 ಬೆಂಗಳೂರು : ಬೆಂಗಳೂರಿನ ವೈಟ್‌ ಫೀಲ್ಡ್‌ ನಲ್ಲಿರುವ ಕೆಟಿಪಿಓದಲ್ಲಿ ನಡೆಯುತ್ತಿರುವ ಕಾಮಿಕ್ ಕಾನ್‌ 2025ರಲ್ಲಿ ಯಮಹಾ ತನ್ನ ಸ್ಕೂಟರ್, ಬೈಕ್‌ಗಳನ್ನು ಪ್ರದರ್ಶನ ಮಾಡುತ್ತಿದೆ. ಜೊತೆಗೆ ಯುವ ಗ್ರಾಹಕರಿಗೆ ತನ್ನ ಪರಂಪರೆಯ ಪರಿಚಯ ಮಾಡುತ್ತಿದೆ.

ಈ ಕಾಮಿಕ್ ಕಾನ್ ಕಾರ್ಯಕ್ರಮದಲ್ಲಿ ಕಾಮಿಕ್ ಪುಸ್ತಕ ಅಭಿಮಾನಿಗಳು, ಅನಿಮೆ ಆಸಕ್ತರು, ಮೋಟಾರ್‌ ಸೈಕಲ್ ಪ್ರೇಮಿಗಳು ಮತ್ತು ಟೆಕ್ ಸ್ಯಾವಿ ವ್ಯಕ್ತಿಗಳು ಸೇರಿದಂತೆ ಯುವಪೀಳಿಗೆಯ ಮಂದಿ ಪಾಲ್ಗೊಂಡಿದ್ದರು. ಇದೊಂದು ಕಾಮಿಕ್ ಜಗತ್ತಿನ ಬಹುದೊಡ್ಡ ಉತ್ಸವವಾಗಿದ್ದು, ವಿಶಿಷ್ಟ ಅನುಭವ ಒದಗಿಸುತ್ತದೆ.

ಇಂತಹ ಕಾರ್ಯಕ್ರಮದಲ್ಲಿ ಯಮಹಾ ಎಕ್ಸ್ ಪೀರಿಯನ್ಸ್ ಝೋನ್ ಅನ್ನು ಯಮಹಾ ಸಿದ್ಧಪಡಿಸಿತ್ತು. ಇಲ್ಲಿ ಯಮಹಾ ಉತ್ಪನ್ನಗಳನ್ನು ಪ್ರದರ್ಶನ ಮಾಡಿದ್ದು ಮಾತ್ರವಲ್ಲದೆ, ಆಕರ್ಷಕ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು.

ವಿಶೇಷವಾಗಿ ಯಮಹಾ ಸಂಸ್ಥೆಯು ಮೋಟೋ ಜಿಪಿ ಗೇಮಿಂಗ್ ಸೆಟಪ್ ಅನ್ನು ಸಿದ್ಧಗೊಳಿಸಿದ್ದು, ಆ ಮೂಲಕ ವರ್ಚುವಲ್ ರೇಸಿಂಗ್ ಅನುಭವ ಒದಗಿಸಿತು. ಸಮುರಾಯ್ ಥೀಮ್ ನ ಎಂಟಿ- 03 ಮತ್ತು ವೈಝಡ್‌ಎಫ್‌- ಆರ್15 ಮೋಟಾರ್‌ ಸೈಕಲ್‌ಗಳನ್ನು ಪ್ರದರ್ಶನಕ್ಕೆ ಇಡಲಾಗಿದ್ದು, ಭಾಗವಹಿಸಿದವರು ಖುಷಿಯಿಂದ ಫೋಟೋ ತೆಗೆಸಿಕೊಂಡರು. ರೇ ಝಡ್ ಆರ್ ಸ್ಟ್ರೀಟ್ ರ್‍ಯಾಲಿ ಸ್ಕೂಟರ್ ಅನ್ನೂ ಪ್ರದರ್ಶನಕ್ಕೆ ಇಡಲಾಗಿತ್ತು.