156.7 ಕಿ.ಮೀ. ಎಸೆತ: ಐಪಿಎಲ್‌ನ 4ನೇ ಅತಿವೇಗದ ಎಸೆತ!

| Published : Apr 03 2024, 01:39 AM IST / Updated: Apr 03 2024, 04:04 AM IST

ಸಾರಾಂಶ

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಭಿಮಾನಿಗಳನ್ನು ಬೆರಗಾಗಿಸಿದ ಪ್ರಚಂಡ ವೇಗಿ ಮಯಾಂಕ್‌ ಯಾದವ್‌. ಗಂಟೆಗೆ 156.7 ಕಿ.ಮೀ. ವೇಗದಲ್ಲಿ ಬೌಲ್‌ ಮಾಡಿ ಈ ಐಪಿಎಲ್‌ನ ಅತಿವೇಗದ ಎಸೆತ ಎನ್ನುವ ದಾಖಲೆ ಬರೆದ ಲಖನೌ ತಂಡದ ವೇಗಿ.

 ಬೆಂಗಳೂರು : ಐಪಿಎಲ್‌ನಲ್ಲಿ ಅತಿವೇಗದ ಎಸೆತ ಬೌಲ್‌ ಮಾಡಿದ ಟಾಪ್‌-5 ಬೌಲರ್‌ಗಳ ಪಟ್ಟಿಯಲ್ಲಿ ಮಯಾಂಕ್‌ ಯಾದವ್‌ ಸೇರ್ಪಡೆಗೊಂಡಿದ್ದಾರೆ. 

ಮಂಗಳವಾರ ಮಯಾಂಕ್‌ ಯಾದವ್‌ ತಮ್ಮ ಮೊದಲ ಓವರಲ್ಲೇ ಗಂಟೆಗೆ 156.7 ಕಿ.ಮೀ. ವೇಗದ ಎಸೆತವನ್ನು ಬೌಲ್‌ ಮಾಡಿದರು. ಇದು ಈ ಐಪಿಎಲ್‌ಗೆ ಅತಿವೇಗದ ಎಸೆತ. 

 ಒಟ್ಟಾರೆ ಐಪಿಎಲ್‌ನಲ್ಲಿ 4ನೇ ಅತಿವೇಗದ ಎಸೆತ ಎನಿಸಿದೆ. ಇನ್ನು ಅವರ 4 ಓವರ್‌ ಸ್ಪೆಲ್‌ನಲ್ಲಿ 10ಕ್ಕೂ ಹೆಚ್ಚು ಎಸೆತಗಳು ಗಂಟೆಗೆ 153 ಕಿ.ಮೀ.ಗಿಂತ ಹೆಚ್ಚಿನ ವೇಗದ್ದಾಗಿದ್ದವು. ಅವರ ಸರಾಸರಿ ವೇಗವೇ 148.1 ಕಿ.ಮೀ. ಇತ್ತು ಎನ್ನುವುದು ವಿಶೇಷ. ಐಪಿಎಲ್‌ನಲ್ಲಿ ಅತಿವೇಗದ ಎಸೆತಗಳ ಪಟ್ಟಿ ಈ ರೀತಿ ಇದೆ: ಶಾನ್‌ ಟೈಟ್‌(2011) 157.7 ಕಿ.ಮೀ., ಲಾಕಿ ಫರ್ಗ್ಯೂಸನ್‌(2022) 157.3 ಕಿ.ಮೀ., ಉಮ್ರಾನ್‌ ಮಲಿಕ್‌ (2022) 157.0 ಕಿ.ಮೀ., ಮಯಾಂಕ್‌ ಯಾದವ್‌ (2024) 156.7 ಕಿ.ಮೀ., ಏನ್ರಿಕ್‌ ನೋಕಿಯ (2020) 156.2 ಕಿ.ಮೀ.