2 ಬಾರಿ ಗ್ರ್ಯಾನ್‌ಸ್ಲಾಂ ವಿಜೇತೆ ಸ್ಪೇನ್‌ನ ಮುಗುರುಜಾ ಟೆನಿಸ್‌ಗೆ ಗುಡ್‌ಬೈ

| Published : Apr 21 2024, 02:32 AM IST / Updated: Apr 21 2024, 04:09 AM IST

2 ಬಾರಿ ಗ್ರ್ಯಾನ್‌ಸ್ಲಾಂ ವಿಜೇತೆ ಸ್ಪೇನ್‌ನ ಮುಗುರುಜಾ ಟೆನಿಸ್‌ಗೆ ಗುಡ್‌ಬೈ
Share this Article
  • FB
  • TW
  • Linkdin
  • Email

ಸಾರಾಂಶ

ವೃತ್ತಿಪರ ಟೆನಿಸ್‌ಗೆ ಗುಡ್‌ಬೈ ಹೇಳಿದ ಸ್ಪೇನ್‌ರ 30 ವರ್ಷದ, ಮಾಜಿ ವಿಶ್ವ ನಂ.1 ಗಾರ್ಬಿನ್‌ ಮುಗುರುಜಾ. ಗ್ರ್ಯಾನ್‌ ಸ್ಲಾಂ ಫೈನಲ್‌ಗಳಲ್ಲಿ ವಿಲಿಯಮ್ಸ್‌ ಸಹೋದರಿಯರಿಬ್ಬರನ್ನು ಸೋಲಿಸಿರುವ ಏಕೈಕ ಆಟಗಾರ್ತಿ.

ಮ್ಯಾಡ್ರಿಡ್‌: 2 ಬಾರಿ ಗ್ರ್ಯಾನ್‌ ಸ್ಲಾಂ ಪ್ರಶಸ್ತಿ ಗೆದ್ದಿದ್ದ ಸ್ಪೇನ್‌ನ ಗಾರ್ಬಿನ್‌ ಮುಗುರುಜಾ ಶನಿವಾರ ವೃತ್ತಿಪರ ಟೆನಿಸ್‌ನಿಂದ ನಿವೃತ್ತಿ ಪಡೆಯುತ್ತಿರುವುದಾಗಿ ಘೋಷಿಸಿದ್ದಾರೆ. 30 ವರ್ಷದ ಮುಗುರುಜಾ, ತಮ್ಮ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯುವ ಉದ್ದೇಶದಿಂದ ನಿವೃತ್ತಿ ಪಡೆಯುತ್ತಿರುವುದಾಗಿ ಹೇಳಿದ್ದಾರೆ.

 2016ರ ಫ್ರೆಂಚ್‌ ಓಪನ್‌ ಫೈನಲ್‌ನಲ್ಲಿ ಸೆರೆನಾ ವಿಲಿಯಮ್ಸ್‌ ವಿರುದ್ಧ ಗೆದ್ದಿದ್ದ ಸ್ಪೇನ್‌ ಆಟಗಾರ್ತಿ, 2017ರ ವಿಂಬಲ್ಡನ್‌ ಫೈನಲ್‌ನಲ್ಲಿ ವೀನಸ್ ವಿಲಿಯಮ್ಸ್‌ ವಿರುದ್ಧ ಗೆದ್ದಿದ್ದರು. ಗ್ರ್ಯಾನ್‌ಸ್ಲಾಂ ಫೈನಲ್‌ಗಳಲ್ಲಿ ವಿಲಿಯಮ್ಸ್‌ ಸಹೋದರಿಯಬ್ಬಿರನ್ನೂ ಸೋಲಿಸಿದ ಏಕೈಕ ಆಟಗಾರ್ತಿ ಎನ್ನುವ ಹಿರಿಮೆಗೆ ಮುಗುರುಜಾರದ್ದು. ಒಟ್ಟಾರೆ 10 ಪ್ರಶಸ್ತಿಗಳನ್ನು ಗೆದ್ದಿರುವ ಅವರು, 2015ರ ವಿಂಬಲ್ಡನ್‌, 2020ರ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ರನ್ನರ್‌-ಅಪ್‌ ಸ್ಥಾನ ಪಡೆದಿದ್ದರು.