ಸಾರಾಂಶ
ಭಾರತದ ತಾರಾ ಆಲ್ರೌಂಡರ್ ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆ ಬರೆದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು 3000 ರನ್ ಹಾಗೂ 250 ವಿಕೆಟ್ ಸಾಧನೆ ಮಾಡಿದ ಭಾರತದ ಕೇವಲ 3ನೇ ಹಾಗೂ ವಿಶ್ವದ 12ನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ರಾಜ್‌ಕೋಟ್: ಭಾರತದ ತಾರಾ ಆಲ್ರೌಂಡರ್ ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆ ಬರೆದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅವರು 3000 ರನ್ ಹಾಗೂ 250 ವಿಕೆಟ್ ಸಾಧನೆ ಮಾಡಿದ ಭಾರತದ ಕೇವಲ 3ನೇ ಹಾಗೂ ವಿಶ್ವದ 12ನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಭಾರತದ ಪರ ಈ ಮೊದಲು ಕಪಿಲ್ ದೇವ್(5248 ರನ್, 434 ವಿಕೆಟ್), ಆರ್.ಅಶ್ವಿನ್(3271 ರನ್, 499 ವಿಕೆಟ್) ಈ ಸಾಧನೆ ಮಾಡಿದ್ದಾರೆ. ಇನ್ನು, ಆಸ್ಟ್ರೇಲಿಯಾದ ಶೇನ್ ವಾರ್ನ್, ಇಂಗ್ಲೆಂಡ್‌ನ ಸ್ಟುವರ್ಟ್ ಬ್ರಾಡ್, ನ್ಯೂಜಿಲೆಂಡ್‌ನ ರಿಚರ್ಡ್ ಹಾರ್ಡ್ಲೀ, ದ.ಆಫ್ರಿಕಾದ ಶಾನ್ ಪೊಲಾಕ್, ಇಂಗ್ಲೆಂಡ್‌ನ ಇಯಾನ್ ಬೋಥಂ, ಪಾಕಿಸ್ತಾನದ ಇಮ್ರಾನ್ ಖಾನ್, ನ್ಯೂಜಿಲೆಂಡ್‌ನ ವೆಟೋರಿ, ಶ್ರೀಲಂಕಾದ ಚಾಮಿಂಡಾ ವಾಸ್, ದ.ಆಫ್ರಿಕಾದ ಜ್ಯಾಕ್ ಕಾಲೀಸ್ ಇತರ ಸಾಧಕರು.