ಸಾರಾಂಶ
ಕಾನ್ಪುರ: ಬಾಂಗ್ಲಾದೇಶ ವಿರುದ್ಧ ಟೆಸ್ಟ್‌ನಲ್ಲಿ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ನೋಡಲು ಉತ್ತರ ಪ್ರದೇಶದ ಉನ್ನಾವೊ ಎಂಬಲ್ಲಿನ 15 ವರ್ಷದ ಬಾಲಕನೋರ್ವ 58 ಕಿ.ಮೀ. ದೂರದ ಕಾನ್ಪುರಕ್ಕೆ ಸೈಕಲ್‌ನಲ್ಲೇ ಆಗಮಿಸಿದ್ದಾನೆ.
ಕಾರ್ತಿಕೇಯ ಎಂಬ ಬಾಲಕ ಶುಕ್ರವಾರ ಮುಂಜಾನೆ 4 ಗಂಟೆಗೆ ಸೈಕಲ್ ಹತ್ತಿದ್ದು, 11 ಗಂಟೆ ವೇಳೆ ಕಾನ್ಪುರದ ಕ್ರೀಡಾಂಗಣ ತಲುಪಿದ್ದಾನೆ. ಇದರ ಫೋಟೋ, ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ಭಾರಿ ವೈರಲ್ ಆಗಿದೆ.
ಕುಂಬ್ಳೆಯ ಮತ್ತೊಂದು ದಾಖಲೆ ಮುರಿದ ಅಶ್ವಿನ್
ಭಾರತದ ಹಿರಿಯ ಸ್ಪಿನ್ನರ್ ಆರ್.ಅಶ್ವಿನ್ ಮತ್ತೊಂದು ದಾಖಲೆ ಬರೆದಿದ್ದಾರೆ. ಏಷ್ಯಾದಲ್ಲೇ ಟೆಸ್ಟ್‌ನಲ್ಲಿ ಗರಿಷ್ಠ ವಿಕೆಟ್ ಕಿತ್ತ ಭಾರತೀಯ ಸಾಧಕರ ಪಟ್ಟಿಯಲ್ಲಿ ಅಶ್ವಿನ್ ಅಗ್ರಸ್ಥಾನಕ್ಕೇರಿದ್ದಾರೆ. ಒಟ್ಟಾರೆ ವಿಶ್ವದ ಬೌಲರ್‌ಗಳ ಪಟ್ಟಿಯಲ್ಲಿ ಅವರಿಗೆ ಈಗ 2ನೇ ಸ್ಥಾನ. ಶುಕ್ರವಾರ ಅಶ್ವಿನ್, ನಜ್ಮುಲ್ ಹೊಸೈನ್ ವಿಕೆಟ್ ಪಡೆದರು. ಇದು ಏಷ್ಯಾದಲ್ಲಿ ಅಶ್ವಿನ್ ಕಿತ್ತ 420ನೇ ಟೆಸ್ಟ್ ವಿಕೆಟ್.
ಈ ಮೂಲಕ ಅನಿಲ್ ಕುಂಬ್ಳೆ(419 ವಿಕೆಟ್)ರನ್ನು ಹಿಂದಿಕ್ಕಿದರು. ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ 612 ವಿಕೆಟ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದಾರೆ. ಲಂಕಾದ ರಂಗನಾ ಹೆರಾತ್ 354, ಭಾರತದ ಹರ್ಭಜನ್ ಸಿಂಗ್ 300 ವಿಕೆಟ್ ಪಡೆದಿದ್ದಾರೆ.