ಈಗಿರುವ ತಂಡದಲ್ಲಿ 8-10 ಮಂದಿ ಟಿ20 ವಿಶ್ವಕಪ್‌ನಲ್ಲಿ ಆಡ್ತಾರೆ: ರೋಹಿತ್‌ ಶರ್ಮಾ

| Published : Jan 19 2024, 01:51 AM IST / Updated: Jan 19 2024, 01:04 PM IST

Rohith Sharma

ಸಾರಾಂಶ

ಜೂನ್‌ನಲ್ಲಿ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್‌ಗೆ ಭಾರತ ತಂಡ ಇನ್ನೂ ಅಂತಿಮವಾಗಿಲ್ಲ, ಆದರೆ ಆಯ್ಕೆಯಾಗಲಿರುವ 8-10 ಆಟಗಾರರ ಕುರಿತು ಎಲ್ಲರಿಗೂ ತಿಳಿದಿದೆ ಎಂದು ನಾಯಕ ರೋಹಿತ್‌ ಶರ್ಮಾ ತಿಳಿಸಿದ್ದಾರೆ.

ಬೆಂಗಳೂರು: ಜೂನ್‌ನಲ್ಲಿ ಆರಂಭವಾಗಲಿರುವ ಐಸಿಸಿ ಟಿ20 ವಿಶ್ವಕಪ್‌ಗೆ ಭಾರತ ತಂಡ ಇನ್ನೂ ಅಂತಿಮವಾಗಿಲ್ಲ, ಆದರೆ ಆಯ್ಕೆಯಾಗಲಿರುವ 8-10 ಆಟಗಾರರ ಕುರಿತು ಎಲ್ಲರಿಗೂ ತಿಳಿದಿದೆ ಎಂದು ನಾಯಕ ರೋಹಿತ್‌ ಶರ್ಮಾ ತಿಳಿಸಿದ್ದಾರೆ. 

ಈ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಕೆಲ ಉತ್ತಮ ಆಟಗಾರರು ವಿಶ್ವಕಪ್‌ನಿಂದ ಹೊರಗುಳಿಯಲಿದ್ದಾರೆ, ಅದು ಕ್ರೀಡೆಯಲ್ಲಿ ಸಹಜ. ನಾವು ಏಕದಿನ ವಿಶ್ವಕಪ್‌ ಆಡುವಾಗ ಬಹಷ್ಟು ಯುವ ಆಟಗಾರರನ್ನು ಟಿ20 ಯಲ್ಲಿ ಪ್ರಯತ್ನಿಸಿದ್ದೇವೆ, ಅವರು ಉತ್ತಮವಾಗಿ ಆಡಿದ್ದಾರೆ. 

ಆದರೆ ತಂಡ ಘೋಷಣೆಯಾದಾಗ ಕೆಲವರು ಹೊರಗಿಡುವುದು ಅನಿವಾರ್ಯ. ಸದ್ಯ 25 ರಿಂದ 30 ಆಟಗಾರರ ಮೇಲೆ ಆಯ್ಕೆ ಸಮಿತಿ ಕಣ್ಣಿಟ್ಟಿದೆ ಎಂದು ತಿಳಿಸಿದ್ದಾರೆ. 

ಅನಧಿಕೃತ ಟೆಸ್ಟ್‌: ಲಯನ್ಸ್‌ವಿರುದ್ಧ ಭಾರತ ‘ಎ’ಗೆ ಹಿನ್ನಡೆ

ಅಹಮದಾಬಾದ್‌: ಇಲ್ಲಿ ನಡೆಯುತ್ತಿರುವ 2ನೇ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ಭಾರತ ‘ಎ’ ವಿರುದ್ಧ ಇಂಗ್ಲೆಂಡ್‌ ಲಯನ್ಸ್‌ ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್‌ ಮೊತ್ತ ಕಲೆಹಾಕಿದೆ.

 ಕಿಟೋನ್‌ ಜೆನ್ನಿಂಗ್ಸ್‌(154), ಜೋಶ್‌ ಬೊಹನಾನ್‌(125) ಶತಕದಾಟದ ನೆರವಿನಿಂದ 8 ವಿಕೆಟ್‌ಗೆ 553 ರನ್‌ ಗಳಿಸಿ ಇನ್ನಿಂಗ್ಸ್‌ ಡಿಕ್ಲೇರ್‌ ಘೋಷಿಸಿದೆ. 

ಬಳಿಕ ಮೊದಲ ಇನ್ನಿಂಗ್ಸ್‌ ಆರಂಭಿಸಿರುವ ಭಾರತ ‘ಎ’ 2ನೇ ದಿನದಂತ್ಯಕ್ಕೆ 8 ವಿಕೆಟ್‌ಗೆ 215 ರನ್‌ ಗಳಿಸಿದ್ದು, ಇನ್ನೂ 338 ರನ್‌ ಹಿನ್ನಡೆಯಲ್ಲಿದೆ. ರಜತ್‌ ಪಾಟೀದಾರ್‌ ಔಟಾಗದೆ 140 ರನ್‌ ಗಳಿಸಿದ್ದು, 3ನೇ ದಿನಕ್ಕೆ ಕ್ರೀಸ್‌ ಕಾಯ್ದುಕೊಂಡಿದ್ದಾರೆ.