ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಆಲ್ಕರಜ್‌ ಸವಾಲು ಅಂತ್ಯ!

| Published : Jan 25 2024, 02:00 AM IST

ಸಾರಾಂಶ

ಟೆನಿಸ್‌ ಲೋಕದ ಯುವ ತಾರೆ, ಹಾಲಿ ವಿಂಬಲ್ಡನ್‌ ಚಾಂಪಿಯನ್‌ ಕಾರ್ಲೊಸ್‌ ಆಲ್ಕರಜ್‌ಗೆ ಕ್ವಾರ್ಟರ್‌ ಫೈನಲ್‌ನಲ್ಲಿ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ಶಾಕ್‌ ನೀಡಿದ್ದು, ಆಸ್ಟ್ರೇಲಿಯನ್‌ ಓಪನ್‌ನಲ್ಲಿ ತಮ್ಮ ಅಭಿಯಾನ ಅಂತ್ಯಗೊಳಿಸಿದ್ದಾರೆ.

ಮೆಲ್ಬರ್ನ್‌: ಟೆನಿಸ್‌ ಲೋಕದ ಯುವ ತಾರೆ, ಹಾಲಿ ವಿಂಬಲ್ಡನ್‌ ಚಾಂಪಿಯನ್‌ ಕಾರ್ಲೊಸ್‌ ಆಲ್ಕರಜ್‌ರ ಚೊಚ್ಚಲ ಆಸ್ಟ್ರೇಲಿಯನ್‌ ಓಪನ್‌ ಗ್ರ್ಯಾನ್‌ಸ್ಲಾಂ ಗೆಲ್ಲುವ ಕನಸು ಭಗ್ನಗೊಂಡಿದೆ.ಬುಧವಾರ ವಿಶ್ವ ನಂ.2, ಸ್ಪೇನ್‌ನ 19ರ ಆಲ್ಕರಜ್‌ ವಿರುದ್ಧ ಕ್ವಾರ್ಟರ್‌ ಫೈನಲ್‌ನಲ್ಲಿ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ವಿರುದ್ಧ 6-1, 6-3, 6-7 (2), 6-4 ಅಂತರದಲ್ಲಿ ಗೆಲುವು ಸಾಧಿಸಿದರು. 6ನೇ ಶ್ರೇಯಾಂಕಿತ ಜ್ವೆರೆವ್‌ 2020ರ ಬಳಿಕ ಮತ್ತೊಮ್ಮೆ ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಸೆಮೀಸ್‌ಗೇರಿದ್ದು, ಚೊಚ್ಚಲ ಪ್ರಶಸ್ತಿ ನಿರೀಕ್ಷೆಯಲ್ಲಿದ್ದಾರೆ.

ಮತ್ತೊಂದು ಕ್ವಾರ್ಟರ್‌ನಲ್ಲಿ 2 ಬಾರಿ ರನ್ನರ್‌-ಅಪ್‌, ರಷ್ಯಾದ ಡ್ಯಾನಿಲ್‌ ಮೆಡ್ವೆಡೆವ್‌ ಅವರು 9ನೇ ಶ್ರೇಯಾಂಕಿತ ಪೋಲೆಂಡನ್‌ನ ಹ್ಯೂಬರ್ಟ್‌ ಹರ್ಕಜ್‌ರನ್ನು 7-6(4), 2-6, 6-3, 5-7, 6-4 ಸೆಟ್‌ಗಳಲ್ಲಿ ರೋಚಕವಾಗಿ ಮಣಿಸಿ, 3ನೇ ಬಾರಿ ಟೂರ್ನಿಯಲ್ಲಿ ಸೆಮಿಫೈನಲ್‌ಗೇರಿದರು.

-

ಝೆಂಗ್‌, ಡಯಾನ

ಸೆಮಿಫೈನಲ್‌ಗೆ

ಮಹಿಳಾ ಸಿಂಗಲ್ಸ್‌ನಲ್ಲಿ 12ನೇ ಶ್ರೇಯಾಂಕಿತೆ, ಚೀನಾದ ಕ್ವಿನ್‌ವೆನ್‌ ಝೆಂಗ್ ಅವರು ರಷ್ಯಾದ ಅನ್ನಾ ಕಲಿನ್ಸ್‌ಕಯಾ ವಿರುದ್ಧ ಗೆದ್ದು ಚೊಚ್ಚಲ ಬಾರಿ ಗ್ರ್ಯಾನ್‌ಸ್ಲಾಂ ಸೆಮಿಫೈನಲ್‌ ಪ್ರವೇಶಿಸಿದರು. ಉಕ್ರೇನ್‌ನ ಶ್ರೇಯಾಂಕ ರಹಿತೆ ಡಯಾನ ಯಾಸ್ಟ್ರೆಮಸ್ಕ ಅವರು ಚೆಕ್‌ ಗಣರಾಜ್ಯದ ಲಿಂಡಾ ನೊಸ್ಕೋವಾ ಅವರನ್ನು ಸೋಲಿಸಿ ಅಂತಿಮ 4 ಘಟ್ಟ ಪ್ರವೇಶಿಸಿದರು.