ರಾಜ್ಯ ಅಥ್ಲೆಟಿಕ್ಸ್‌: ಶಾಟ್‌ಪುಟ್‌ನಲ್ಲಿ ಅಂಬಿಕಾ ಹೊಸ ಕೂಟ ದಾಖಲೆ

| Published : Jun 07 2024, 12:33 AM IST / Updated: Jun 07 2024, 04:22 AM IST

ರಾಜ್ಯ ಅಥ್ಲೆಟಿಕ್ಸ್‌: ಶಾಟ್‌ಪುಟ್‌ನಲ್ಲಿ ಅಂಬಿಕಾ ಹೊಸ ಕೂಟ ದಾಖಲೆ
Share this Article
  • FB
  • TW
  • Linkdin
  • Email

ಸಾರಾಂಶ

ಉಡುಪಿಯಲ್ಲಿ ರಾಜ್ಯ ಸೀನಿಯರ್‌ ಅಥ್ಲೆಟಿಕ್ಸ್‌ ಕೂಟ. ಮೊದಲ ದಿನ ಶಾಟ್‌ಪುಟ್‌ನಲ್ಲಿ ಕೂಟ ದಾಖಲೆ ಬರೆದ ಮೈಸೂರಿನ ಅಂಬಿಕಾ. ಇಂದು ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ ಮುಕ್ತಾಯ.

ಬೆಂಗಳೂರು: ಉಡುಪಿಯಲ್ಲಿ ನಡೆಯುತ್ತಿರುವ ರಾಜ್ಯ ಮಟ್ಟದ ಹಿರಿಯರ ಹಾಗೂ ಅಂಡರ್‌-18 ಅಥ್ಲೆಟಿಕ್ಸ್‌ ಕೂಟದ ಮೊದಲ ದಿನ ಮಹಿಳೆಯರ ಶಾಟ್‌ಪುಟ್‌ ಸ್ಪರ್ಧೆಯಲ್ಲಿ ಮೈಸೂರಿನ ಅಂಬಿಕಾ ನೂತನ ಕೂಟ ದಾಖಲೆ ಬರೆದರು.

14.70 ಮೀ. ದೂರಕ್ಕೆ ಗುಂಡು ಎಸೆದ ಅಂಬಿಕಾ, ತಮ್ಮ ಹೆಸರಲ್ಲೇ ಇದ್ದ ದಾಖಲೆ (14.04 ಮೀ.)ಯನ್ನು ಉತ್ತಮಗೊಳಿಸಿಕೊಂಡರು. ಇನ್ನು ಮಹಿಳೆಯರ 200 ಮೀ. ಓಟದಲ್ಲಿ ಬೆಂಗಳೂರು ನಗರದ ಜ್ಯೋತಿಕಾ, ಪುರುಷರ 200 ಮೀ. ಓಟದಲ್ಲಿ ಉಡುಪಿಯ ಅಭಿನ್‌ ದೇವಾಡಿಗ ಚಿನ್ನ ಜಯಿಸಿದರು. ಶುಕ್ರವಾರ ಕೂಟ ಮುಕ್ತಾಯಗೊಳ್ಳಲಿದೆ.