ಇಂದು ಬೆಂಗಳೂರಿನ ಅಂಜು ಬಾಬಿ ಜಾರ್ಜ್‌ ಅಕಾಡೆಮಿಯಲ್ಲಿ 3ನೇ ರಾಷ್ಟ್ರೀಯ ಜಂಪ್ಸ್‌ ಕೂಟ

| Published : Mar 20 2024, 01:24 AM IST

ಇಂದು ಬೆಂಗಳೂರಿನ ಅಂಜು ಬಾಬಿ ಜಾರ್ಜ್‌ ಅಕಾಡೆಮಿಯಲ್ಲಿ 3ನೇ ರಾಷ್ಟ್ರೀಯ ಜಂಪ್ಸ್‌ ಕೂಟ
Share this Article
  • FB
  • TW
  • Linkdin
  • Email

ಸಾರಾಂಶ

3ನೇ ರಾಷ್ಟ್ರೀಯ ಜಂಪ್ಸ್‌ (ನೆಗೆತ/ಜಿಗಿತ) ಚಾಂಪಿಯನ್‌ಶಿಪ್‌ ಬುಧವಾರ ನಡೆಯಲಿದೆ. ಮಾಜಿ ಅಥ್ಲೀಟ್‌ ಅಂಜು ಬಾಬಿ ಜಾರ್ಜ್‌ ಅವರ ಅಕಾಡೆಮಿ ಈ ಕೂಟಕ್ಕೆ ಆತಿಥ್ಯ ವಹಿಸಲಿದ್ದು, ಹೈಜಂಪ್‌, ಲಾಂಗ್‌ ಜಂಪ್‌, ಟ್ರಿಪಲ್‌ ಜಂಪ್‌ ಹಾಗೂ ಪೋಲ್‌ ವಾಲ್ಟ್‌ ಸ್ಪರ್ಧೆಗಳು ನಡೆಯಲಿವೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

3ನೇ ರಾಷ್ಟ್ರೀಯ ಜಂಪ್ಸ್‌ (ನೆಗೆತ/ಜಿಗಿತ) ಚಾಂಪಿಯನ್‌ಶಿಪ್‌ ಬುಧವಾರ ನಡೆಯಲಿದೆ. ಮಾಜಿ ಅಥ್ಲೀಟ್‌ ಅಂಜು ಬಾಬಿ ಜಾರ್ಜ್‌ ಅವರ ಅಕಾಡೆಮಿ ಈ ಕೂಟಕ್ಕೆ ಆತಿಥ್ಯ ವಹಿಸಲಿದ್ದು, ಹೈಜಂಪ್‌, ಲಾಂಗ್‌ ಜಂಪ್‌, ಟ್ರಿಪಲ್‌ ಜಂಪ್‌ ಹಾಗೂ ಪೋಲ್‌ ವಾಲ್ಟ್‌ ಸ್ಪರ್ಧೆಗಳು ನಡೆಯಲಿವೆ. ಹಿರಿಯ ಪುರುಷ, ಮಹಿಳೆಯರು, ಅಂಡರ್‌-20 ಪುರುಷ ಹಾಗೂ ಮಹಿಳೆಯರ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿವೆ. ಕರ್ನಾಟಕ ಸೇರಿ ಹಲವು ರಾಜ್ಯಗಳ ಒಟ್ಟು 42 ಅಥ್ಲೀಟ್‌ಗಳು ಈ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಜೆಸ್ಸಿ ಸಂದೇಶ್‌, ಪಾವನಾ ನಾಗರಾಜ್‌ ಕರ್ನಾಟಕದ ಸವಾಲು ಮುನ್ನಡೆಸಲಿದ್ದು, ಅಂತಾರಾಷ್ಟ್ರೀಯ ಕೂಟಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಟ್ರಿಪಲ್‌ ಜಂಪ್‌ ಪಟು ಎಲ್ಡೋಸ್‌ ಪೌಲ್‌, ಲಾಂಗ್‌ಜಂಪ್‌ ಪಟುಗಳಾದ ನಯನಾ ಜೇಮ್ಸ್‌, ಶೈಲಿ ಸಿಂಗ್‌, ಪೋಲ್‌ ವಾಲ್ಟ್‌ ಪಟು ಪವಿತ್ರಾ ವೆಂಕಟೇಶ್‌ ಪ್ರಮುಖ ಆಕರ್ಷಣೆ ಎನಿಸಿದ್ದಾರೆ.