ಇದು ಕೂಟದಲ್ಲಿ ಕರ್ನಾಟಕದ ಕ್ರೀಡಾಪಟುಗಳಿಗೆ ಸಿಕ್ಕ 2ನೇ ಪದಕ. ಗುರುವಾರ ಪಾವನ ನಾಗರಾಜ್‌ ಲಾಂಗ್‌ಜಂಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು.

ದುಬೈ: ಇಲ್ಲಿ ನಡೆಯುತ್ತಿರುವ ಏಷ್ಯನ್‌ ಅಂಡರ್‌-20 ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಶ್ರೀಯಾ ರಾಜೇಶ್‌ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಮಹಿಳೆಯರ 400 ಮೀ. ಹರ್ಡಲ್ಸ್‌ನಲ್ಲಿ 59.20 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ ಶ್ರೀಯಾ 3ನೇ ಸ್ಥಾನ ಪಡೆದರು. 

ಇದು ಕೂಟದಲ್ಲಿ ಕರ್ನಾಟಕದ ಕ್ರೀಡಾಪಟುಗಳಿಗೆ ಸಿಕ್ಕ 2ನೇ ಪದಕ. ಗುರುವಾರ ಪಾವನ ನಾಗರಾಜ್‌ ಲಾಂಗ್‌ಜಂಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಕೂಟದಲ್ಲಿ ಭಾರತ 5 ಚಿನ್ನ ಸೇರಿ 15 ಪದಕ ಗೆದ್ದಿದೆ. ಶನಿವಾರ ಕೂಟ ಮುಕ್ತಾಯಗೊಳ್ಳಲಿದೆ.

ಸೇಲಿಂಗ್‌: ಭಾರತದ ನೇತ್ರಾ ಪ್ಯಾರಿಸ್‌ ಒಲಿಂಪಿಕ್ಸ್‌ ಪ್ರವೇಶ

ನವದೆಹಲಿ: ಭಾರತದ ಸೇಲಿಂಗ್‌(ಹಾಯಿ ದೋಣಿ) ಪಟು ನೇತ್ರಾ ಕುಮಾನನ್‌ ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಇದು ಸೇಲಿಂಗ್‌ನಲ್ಲಿ ಭಾರತಕ್ಕೆ ದೊರೆತ 2ನೇ ಒಲಿಂಪಿಕ್ಸ್‌ ಕೋಟಾ.ಫ್ರಾನ್ಸ್‌ನ ಹೇರೆಸ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಯಲ್ಲಿ ನೇತ್ರಾ ಮಹಿಳೆಯರ ಡಿಂಘಿ(ಐಎಲ್‌ಸಿಎ 6) ವಿಭಾಗದಲ್ಲಿ ಒಟ್ಟು 67 ಅಂಕ ಸಂಪಾದಿಸಿ 5ನೇ ಸ್ಥಾನಿಯಾದರು.

ಆದರೆ ಇನ್ನೂ ಒಲಿಂಪಿಕ್ಸ್‌ ಕೋಟಾ ಪಡೆಯದ ಎಮರ್ಜಿಂಗ್‌ ನೇಷನ್ಸ್‌ ಪ್ರೋಗ್ರಾಂ(ಇಎನ್‌ಪಿ) ಸ್ಪರ್ಧಿಗಳ ಪೈಕಿ ಅಗ್ರಸ್ಥಾನ ಪಡೆದ ಕಾರಣ ನೇತ್ರಾ ಒಲಿಂಪಿಕ್ಸ್‌ ಪ್ರವೇಶಿಸಿದರು. ನೇತ್ರಾ ಟೋಕಿಯೋ ಒಲಿಂಪಿಕ್ಸ್‌ನಲ್ಲೂ ಸ್ಪರ್ಧಿಸಿದ್ದರು.