ನಮೀಬಿಯಾವನ್ನು ಬಗ್ಗು ಬಡಿದು ಸೂಪರ್‌-8ಗೆ ಲಗ್ಗೆ ಇಟ್ಟ ಆಸ್ಟ್ರೇಲಿಯಾ

| Published : Jun 13 2024, 12:46 AM IST / Updated: Jun 13 2024, 05:05 AM IST

ನಮೀಬಿಯಾವನ್ನು ಬಗ್ಗು ಬಡಿದು ಸೂಪರ್‌-8ಗೆ ಲಗ್ಗೆ ಇಟ್ಟ ಆಸ್ಟ್ರೇಲಿಯಾ
Share this Article
  • FB
  • TW
  • Linkdin
  • Email

ಸಾರಾಂಶ

ನಮೀಬಿಯಾ 17 ಓವರ್‌ಗಳಲ್ಲಿ 72 ರನ್‌ಗೆ ಸರ್ವಪತನ ಕಂಡಿತು. ಸುಲಭ ಗುರಿಯನ್ನು 1 ವಿಕೆಟ್‌ ನಷ್ಟದಲ್ಲಿ ಕೇವಲ 5.4 ಓವರಲ್ಲೇ ಬೆನ್ನತ್ತಿ ಆಸೀಸ್‌ ಜಯಭೇರಿ ಬಾರಿಸಿತು.

ಆ್ಯಂಟಿಗಾ: ಆ್ಯಡಂ ಝಂಪಾ ಮಾರಕ ದಾಳಿ, ಬ್ಯಾಟರ್‌ಗಳ ಸ್ಫೋಟಕ ಆಟದ ನೆರವಿನಿಂದ ನಮೀಬಿಯಾವನ್ನು 9 ವಿಕೆಟ್‌ಗಳಿಂದ ಸೋಲಿಸಿದ ಆಸ್ಟ್ರೇಲಿಯಾ, ಈ ಬಾರಿ ಟಿ20 ವಿಶ್ವಕಪ್‌ನಲ್ಲಿ ಸೂಪರ್‌-8ಗಗೆ ಅಧಿಕೃವಾಗಿ ಪ್ರವೇಶಿಸಿದೆ. 

ಆಸೀಸ್‌ ಹ್ಯಾಟ್ರಿಕ್‌ ಗೆಲುವಿನೊಂದಿಗೆ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನಿಯಾದರೆ, ನಮೀಬಿಯಾ ಸತತ 2ನೇ ಸೋಲು ಕಂಡಿತು.ಮೊದಲು ಬ್ಯಾಟ್‌ ಮಾಡಿದ ನಮೀಬಿಯಾ 17 ಓವರ್‌ಗಳಲ್ಲಿ 72 ರನ್‌ಗೆ ಸರ್ವಪತನ ಕಂಡಿತು. ನಾಯಕ ಎರಾಸ್ಮಸ್‌(36), ಮೈಕಲ್‌ ವ್ಯಾನ್‌ ಲಿಂಗನ್‌(10) ಹೊರತುಪಡಿಸಿ ಬೇರೆ ಯಾರೂ ಎರಡಂಕಿ ಮೊತ್ತ ಗಳಿಸಲಿಲ್ಲ.43ಕ್ಕೆ 8 ವಿಕೆಟ್ ಕಳೆದುಕೊಂಡರೂ 9ನೇ ವಿಕೆಟ್‌ಗೆ ಎರಾಸ್ಮಸ್‌-ಬ್ರಾಸೆಲ್‌(02) 29 ರನ್‌ ಜೊತೆಯಾಟವಾಡಿದರು. 

ಝಂಪಾ 4 ಓವರಲ್ಲಿ12 ರನ್‌ಗೆ 4, ಸ್ಟೋಯ್ನಿಸ್‌ ಹಾಗೂ ಹೇಜಲ್‌ವುಡ್‌ ತಲಾ 2 ವಿಕೆಟ್‌ ಕಿತ್ತರು.ಸುಲಭ ಗುರಿಯನ್ನು ಆಸೀಸ್‌ ಕೇವಲ 5.4 ಓವರ್‌ಗಳಲ್ಲೇ ಬೆನ್ನತ್ತಿ ಜಯಗಳಿಸಿತು. ಟ್ರ್ಯಾವಿಸ್‌ ಹೆಡ್‌ 17 ಎಸೆತಗಳಲ್ಲಿ ಔಟಾಗದೆ 34, ವಾರ್ನರ್‌ 20, ಮಿಚೆಲ್‌ ಮಾರ್ಷ್‌ ಔಟಾಗದೆ 18 ರನ್‌ ಗಳಿಸಿ ತಂಡವನ್ನು ಗೆಲ್ಲಿಸಿದರು.ಸ್ಕೋರ್: ನಮೀಬಿಯಾ 17 ಓವರಲ್ಲಿ 72/10 (ಎರಾಸ್ಮಸ್‌ 36, ಲಿಂಗನ್‌ 10, ಝಂಪಾ 4-12, ಸ್ಟೋಯ್ನಿಸ್‌ 2-9, ಹೇಜಲ್‌ವುಡ್‌ 1-18), ಆಸ್ಟ್ರೇಲಿಯಾ 5.4 ಓವರಲ್ಲಿ 74/1 (ಹೆಡ್‌ 34*, ವಾರ್ನರ್‌ 20, ವೀಸಾ 1-15)

ಪಂದ್ಯಶ್ರೇಷ್ಠ: ಆ್ಯಡಂ ಝಂಪಾ.

86 ಎಸೆತ: ಆಸೀಸ್‌ 86 ಎಸೆತ ಬಾಕಿ ಉಳಿಸಿ ಜಯಗಳಿಸಿತು. ಇದು ಟಿ20 ವಿಶ್ವಕಪ್‌ನಲ್ಲಿ 2ನೇ ಗರಿಷ್ಠ. 2014ರಲ್ಲಿ ನೆದರ್‌ಲೆಂಡ್ಸ್‌ ವಿರುದ್ಧ ಶ್ರೀಲಂಕಾ 90 ಎಸೆತ ಬಾಕಿಯಿಟ್ಟು ಗೆದ್ದಿದ್ದು ದಾಖಲೆ.