ಸಾರಾಂಶ
ಮೆಲ್ಬರ್ನ್: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಮಹತ್ವದ 5 ಪಂದ್ಯಗಳ ಟೆಸ್ಟ್ ಸರಣಿಯು ನವೆಂಬರ್ 22ರಿಂದ ಪರ್ತ್ ಕ್ರೀಡಾಂಗಣದಲ್ಲಿ ಆರಂಭಗೊಳ್ಳಲಿದೆ.
ಮಂಗಳವಾರ ಕ್ರಿಕೆಟ್ ಆಸ್ಟ್ರೇಲಿಯಾ ಸರಣಿಯ ಅಧಿಕೃತ ವೇಳಾಪಟ್ಟಿ ಪ್ರಕಟಿಸಿತು. ಪರ್ತ್ ಜೊತೆ ಅಡಿಲೇಡ್, ಬ್ರಿಸ್ಬೇನ್, ಮೆಲ್ಬರ್ನ್ ಹಾಗೂ ಸಿಡ್ನಿಯಲ್ಲೂ ಪಂದ್ಯಗಳು ನಡೆಯಲಿವೆ ಎಂದು ಮಂಡಳಿ ತಿಳಿಸಿದೆ.
ಅಡಿಲೇಡ್‌ನಲ್ಲಿ ನಿಗದಿಯಾಗಿರುವ 2ನೇ ಟೆಸ್ಟ್ ಹಗಲು-ರಾತ್ರಿ ಪಂದ್ಯವಾಗಿರಲಿದ್ದು. ಡಿ.6ರಿಂದ 10ರ ವರೆಗೆ ನಡೆಯಲಿದೆ. ಡಿ.14ರಿಂದ 18ರ ವರೆಗೆ ಬ್ರಿಸ್ಟೇನ್‌ನಲ್ಲಿ 3ನೇ ಟೆಸ್ಟ್, ಡಿ.26ರಿಂದ 30ರ ವರೆಗೆ ಮೆಲ್ಬರ್ನ್‌ನಲ್ಲಿ ಐತಿಹಾಸಿಕ ಬಾಕ್ಸಿಂಗ್ ಡೇ ಟೆಸ್ಟ್ ಆಯೋಜನೆಗೊಳ್ಳಲಿದೆ. 5ನೇ ಹಾಗೂ ಸರಣಿಯ ಕೊನೆ ಪಂದ್ಯಕ್ಕೆ ಜ.3ರಿಂದ 7ರ ವರೆಗೆ ಸಿಡ್ನಿ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.
ಭಾರತ ತಂಡ 22 ವರ್ಷಗಳ ಬಳಿಕ ಮೊದಲ ಬಾರಿ ಆಸ್ಟ್ರೇಲಿಯಾದಲ್ಲಿ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾಗಿಯಾಗಲಿದೆ. 1991-92ರಲ್ಲಿ ನಡೆದಿದ್ದ ಸರಣಿಯಲ್ಲಿ ಆಸೀಸ್ 4-0 ಅಂತರದಲ್ಲಿ ಗೆದ್ದಿತ್ತು.