ತಾಲಿಬಾಲ್‌ನಿಂದ ಮಹಿಳಾ ಶೋಷಣೆ: ಆಫ್ಘನ್‌ ವಿರುದ್ಧ ಟಿ20 ಸರಣಿಗೆ ಆಸೀಸ್‌ ಬ್ರೇಕ್‌!

| Published : Mar 20 2024, 01:17 AM IST

ಸಾರಾಂಶ

2021ರ ಸೆಪ್ಟೆಂಬರ್‌ನಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಸರ್ಕಾರ ಬಂದ ನಂತರ ಅಲ್ಲಿನ ಮಹಿಳೆಯರಿಗೆ ಕ್ರೀಡೆ ನಿಷೇಧಿಸಲಾಗಿದೆ. ಶಾಲೆ, ಕಾಲೇಜ್‌ಗೆ ಹೋಗುವುದಕ್ಕೂ ಅಲ್ಲಿ ನಿರ್ಬಂಧವಿದೆ.

ಸಿಡ್ನಿ: ಅಫ್ಘಾನಿಸ್ತಾನ ಆಡಳಿತದ ಚುಕ್ಕಾಣಿ ಹಿಡಿದಿರುವ ತಾಲಿಬಾನ್‌ ಮಹಿಳಾ ಶೋಷಣೆ ಮುಂದುವರಿಸಿರುವ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನ ವಿರುದ್ಧ ತವರಿನಲ್ಲಿ ತನ್ನ ಪುರುಷರ ತಂಡ ಆಡಬೇಕಿದ್ದ 3 ಪಂದ್ಯಗಳ ಟಿ20 ಸರಣಿಯನ್ನು ಕ್ರಿಕೆಟ್‌ ಆಸ್ಟ್ರೇಲಿಯಾ ಮುಂದೂಡಿದೆ. ಉಭಯ ತಂಡಗಳ ನಡುವಿನ 3 ಪಂದ್ಯಗಳ ಸರಣಿ ಆಸ್ಟ್ರೇಲಿಯಾದಲ್ಲಿ ಆಗಸ್ಟ್‌ನಲ್ಲಿ ನಿಗದಿಯಾಗಿತ್ತು. ಆದರೆ ತಾಲಿಬಾನ್‌ ಮಹಿಳಾ ಶೋಷಣೆ ಮುಂದುವರಿಸಿರುವ ಕಾರಣಕ್ಕೆ ಆಸ್ಟ್ರೇಲಿಯಾ ಸರಣಿಗೆ ತಡೆ ನೀಡಿದೆ. ಸರಣಿಯನ್ನು ಮುಂದೂಡಿಕೆ ಮಾಡಲಾಗಿದೆ ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ ಘೋಷಿಸಿದೆ.ಆಸ್ಟ್ರೇಲಿಯಾ ತಂಡ ಅಫ್ಘಾನಿಸ್ತಾನ ವಿರುದ್ಧ ಸರಣಿಯಿಂದ ಹಿಂದೆ ಸರಿಯುತ್ತಿರುವುದು ಇದು ಮೊದಲೇನಲ್ಲ. ಈ ಮೊದಲು 2021ರ ನವೆಂಬರ್‌ನಲ್ಲಿ ಆಫ್ಘನ್‌ ವಿರುದ್ಧ ನಿಗದಿಯಾಗಿದ್ದ ಏಕೈಕ ಟೆಸ್ಟ್‌ನಿಂದ ಆಸ್ಟ್ರೇಲಿಯಾ ಹಿಂದೆ ಸರಿದಿತ್ತು. ಬಳಿಕ 3 ಪಂದ್ಯಗಳ ಏಕದಿನ ಸರಣಿಯನ್ನೂ ಆಸ್ಟ್ರೇಲಿಯಾ ಮುಂದೂಡಿತ್ತು. 2021ರ ಸೆಪ್ಟೆಂಬರ್‌ನಲ್ಲಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಸರ್ಕಾರ ಬಂದ ನಂತರ ಅಲ್ಲಿನ ಮಹಿಳೆಯರಿಗೆ ಕ್ರೀಡೆ ನಿಷೇಧಿಸಲಾಗಿದೆ. ಶಾಲೆ, ಕಾಲೇಜ್‌ಗೆ ಹೋಗುವುದಕ್ಕೂ ಅಲ್ಲಿ ನಿರ್ಬಂಧವಿದೆ. ಇನ್ನು ಉದ್ಯೋಗದಿಂದಲೂ ಮಹಿಳೆಯರನ್ನು ನಿಷೇಧಿಸಲಾಗಿದೆ. ಇದೇ ಕಾರಣಕ್ಕೆ ಆಸ್ಟ್ರೇಲಿಯಾ ಈಗ ಮತ್ತೆ ಅಫ್ಘಾನಿಸ್ತಾನ ವಿರುದ್ಧ ಸರಣಿಯನ್ನು ಮುಂದೂಡಿಕೆ ಮಾಡಿದೆ. ಇತ್ತೀಚೆಗೆ ದ.ಆಫ್ರಿಕಾದಲ್ಲಿ ಅಂಡರ್‌-19 ಮಹಿಳಾ ಟಿ20 ವಿಶ್ವಕಪ್‌ ನಡೆದಿತ್ತು. ಆ ಟೂರ್ನಿಯಲ್ಲೂ ಅಫ್ಘಾನಿಸ್ತಾನದ ಮಹಿಳಾ ತಂಡ ಪಾಲ್ಗೊಂಡಿರಲಿಲ್ಲ.