ಆಸ್ಟ್ರೇಲಿಯನ್‌ ಓಪನ್‌: ಆಲ್ಕರಜ್‌, ಮೆಡ್ವೆಡೆವ್‌ ಕ್ವಾರ್ಟರ್‌ಗೆ

| Published : Jan 23 2024, 01:46 AM IST

ಆಸ್ಟ್ರೇಲಿಯನ್‌ ಓಪನ್‌: ಆಲ್ಕರಜ್‌, ಮೆಡ್ವೆಡೆವ್‌ ಕ್ವಾರ್ಟರ್‌ಗೆ
Share this Article
  • FB
  • TW
  • Linkdin
  • Email

ಸಾರಾಂಶ

ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಹಾಲಿ ವಿಂಬಲ್ಡನ್‌ ಚಾಂಪಿಯನ್‌ ಕಾರ್ಲೊಸ್‌ ಆಲ್ಕರಜ್‌ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ಮೆಲ್ಬರ್ನ್‌: ಟೆನಿಸ್‌ ಲೋಕದ ಯುವ ಸೂಪರ್‌ ಸ್ಟಾರ್‌, ಹಾಲಿ ವಿಂಬಲ್ಡನ್‌ ಚಾಂಪಿಯನ್‌ ಕಾರ್ಲೊಸ್‌ ಆಲ್ಕರಜ್‌ ಆಸ್ಟ್ರೇಲಿಯನ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. 2 ಬಾರಿ ರನ್ನರ್‌-ಅಪ್‌ ಡ್ಯಾನಿಲ್‌ ಮೆಡ್ವೆಡೆವ್‌ ಕೂಡಾ ಅಂತಿಮ 8ರ ಘಟ್ಟ ತಲುಪಿದ್ದಾರೆ.ಸೋಮವಾರ ಮಹಿಳಾ ಸಿಂಗಲ್ಸ್‌ ಪ್ರಿ ಕ್ವಾರ್ಟರ್‌ನಲ್ಲಿ ಸ್ಪೇನ್‌ನ 20 ಕಾರ್ಲೊಸ್‌, ಸರ್ಬಿಯಾದ ಮಿಯೊಮಿರ್‌ ಕೆಮನೋವಿಚ್‌ ವಿರುದ್ಧ 6-4, 6-4, 6-0 ಅಂತರದಲ್ಲಿ ಗೆದ್ದು, ಚೊಚ್ಚಲ ಬಾರಿ ಆಸ್ಟ್ರೇಲಿಯನ್‌ ಓಪನ್‌ ಕ್ವಾರ್ಟರ್‌ಗೆ ಲಗ್ಗೆ ಇಟ್ಟರು. 2ನೇ ಶ್ರೇಯಾಂಕಿತ ಆಲ್ಕರಜ್‌ ಕ್ವಾರ್ಟರ್‌ನಲ್ಲಿ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ವಿರುದ್ಧ ಆಡಲಿದ್ದಾರೆ. 6ನೇ ಶ್ರೇಯಾಂಕಿತ ಜ್ವೆರೆವ್‌ ಬ್ರಿಟನ್‌ನ ಕ್ಯಾಮರೂನ್‌ ನೂರಿ ವಿರುದ್ಧ ಗೆದ್ದರು.ಇನ್ನು, 2021ರ ಯುಎಸ್‌ ಓಪನ್‌ ಚಾಂಪಿಯನ್‌, ರಷ್ಯಾದ ಮೆಡ್ವೆಡೆವ್‌ ಪೋರ್ಚುಗಲ್‌ನ ನ್ಯುನೊ ಬೊರ್ಗೆಸ್‌ರನ್ನು ಸೋಲಿಸಿದರು. ಪೋಲೆಂಡ್‌ನ ಶ್ರೇಯಾಂಕ ರಹಿತ ಹ್ಯುಬರ್ಟ್‌ ಹರ್ಕಜ್‌ ಕೂಡಾ ಕ್ವಾರ್ಟರ್‌ಗೇರಿದರು.ಅಜರೆಂಕಾ ಔಟ್‌: 2 ಬಾರಿ ಚಾಂಪಿಯನ್‌, ಬೆಲಾರಸ್‌ನ ವಿಕ್ಟೋರಿಯಾ ಅಜರೆಂಕಾ ಮಹಿಳಾ ಸಿಂಗಲ್ಸ್ ಪ್ರಿ ಕ್ವಾರ್ಟರ್‌ನಲ್ಲಿ ಸೋತು ಹೊರಬಿದ್ದಿದ್ದಾರೆ. ಅವರಿಗೆ ಉಕ್ರೇನ್‌ನ ಶ್ರೇಯಾಂಕ ರಹಿತೆ ಡಯಾನ ಯಸ್ಟ್ರೆಮಕಾ ಸೋಲುಣಿಸಿದರು. ಚೆಕ್ ಗಣರಾಜ್ಯದ ಲಿಂಡಾ ನೊಸ್ಕೋವಾ, ರಷ್ಯಾದ ಅನ್ನಾ ಕಲಿನ್‌ಸ್ಕಯಾ ಕ್ವಾರ್ಟರ್‌ ಪ್ರವೇಶಿಸಿದರು.--ಬೋಪಣ್ಣ-ಎಬ್ಡೆನ್‌ಕ್ವಾರ್ಟರ್‌ ಪ್ರವೇಶಕರ್ನಾಟಕದ ರೋಹನ್‌ ಬೋಪಣ್ಣ-ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಜೋಡಿ ಪುರುಷರ ಡಬಲ್ಸ್‌ನಲ್ಲಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದೆ. ಪ್ರಿ ಕ್ವಾರ್ಟರ್‌ನಲ್ಲಿ 2ನೇ ಶ್ರೇಯಾಂಕಿತ ಇಂಡೋ-ಆಸೀಸ್‌ ಜೋಡಿ ನೆದರ್‌ಲೆಂಡ್ಸ್‌ನ ವೆಸ್ಲಿ ಕೂಲ್‌ಹೊಫ್‌-ಕ್ರೊವೇಷಿಯಅದ ನಿಕೋಲಾ ಮೆಕ್ಟಿಕ್‌ ವಿರುದ್ಧ 7-6, 7-6ರಲ್ಲಿ ಗೆಲುವು ಸಾಧಿಸಿತು.