ಆಸ್ಟ್ರೇಲಿಯನ್‌ ಓಪನ್‌: ಜೋಕೋ ಪ್ರಿ ಕ್ವಾರ್ಟರ್‌ಗೆ ಎಂಟ್ರಿ

| Published : Jan 20 2024, 02:01 AM IST

ಆಸ್ಟ್ರೇಲಿಯನ್‌ ಓಪನ್‌: ಜೋಕೋ ಪ್ರಿ ಕ್ವಾರ್ಟರ್‌ಗೆ ಎಂಟ್ರಿ
Share this Article
  • FB
  • TW
  • Linkdin
  • Email

ಸಾರಾಂಶ

ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ನೋವಾಕ್‌ ಜೋಕೋವಿಚ್‌ ಪ್ರಿ ಕ್ವಾರ್ಟರ್‌ ಪ್ರವೇಶಿಸಿದ್ದಾರೆ. ಸಬಲೆಂಕಾ, ಗಾಫ್‌ ಕೂಡಾ 4ನೇ ಸುತ್ತಿಗೆ ಮುನ್ನಡೆದಿದ್ದಾರೆ.

ಮೆಲ್ಬರ್ನ್‌: ದಾಖಲೆಯ 24 ಗ್ರ್ಯಾನ್‌ಸ್ಲಾಂ ಪ್ರಶಸ್ತಿಗಳ ಒಡೆಯ ನೋವಾಕ್ ಜೋಕೋವಿಚ್‌ ಆಸ್ಟ್ರೇಲಿಯನ್‌ ಓಪನ್‌ ಟೆನಿಸ್ ಟೂರ್ನಿಯಲ್ಲಿ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಹಾಲಿ ಚಾಂಪಿಯನ್‌ ಅರೈನಾ ಸಬಲೆಂಕಾ ಕೂಡಾ 4ನೇ ಸುತ್ತಿಗೇರಿದ್ದಾರೆ.ಶುಕ್ರವಾರ ನಡೆದ ಪುರುಷರ ಸಿಂಗಲ್ಸ್‌ 3ನೇ ಸುತ್ತಿನಲ್ಲಿ ವಿಶ್ವ ನಂ.1, ಸರ್ಬಿಯಾದ ಜೋಕೋ 30ನೇ ಶ್ರೇಯಾಂಕಿತ, ಅರ್ಜೆಂಟೀನಾದ ಥೋಮಸ್‌ ಮಾರ್ಟಿನ್‌ ವಿರುದ್ಧ 6-3, 6-3, 7-6(7/2) ನೇರ ಸೆಟ್‌ಗಳಲ್ಲಿ ಜಯಭೇರಿ ಬಾರಿಸಿದರು. ಇದರೊಂದಿಗೆ 10 ಬಾರಿ ಚಾಂಪಿಯನ್‌ ಜೋಕೋ 16ನೇ ಬಾರಿ ಆಸ್ಟ್ರೇಲಿಯನ್‌ ಓಪನ್‌ನಲ್ಲಿ 4ನೇ ಸುತ್ತಿಗೇರಿದರು.

ಇದೇ ವೇಳೆ ಸ್ಟೆಫಾನೊಸ್‌ ಸಿಟ್ಸಿಪಾಸ್‌, ಜಾನಿಕ್‌ ಸಿನ್ನರ್‌, ಕರೇನ್‌ ಕಚನೋವ್‌, ಆ್ಯಂಡ್ರೆ ರುಬ್ಲೆವ್‌, ಕೂಡಾ 3ನೇ ಸುತ್ತಿನಲ್ಲಿ ಜಯಗಳಿಸಿದರು.

ಇನ್ನು, ಮಹಿಳಾ ಸಿಂಗಲ್ಸ್‌ನಲ್ಲಿ ಬೆಲಾರಸ್‌ನ ಸಬಲೆಂಕಾ, ಅಮೆರಿಕದ ಕೊಕೊ ಗಾಫ್‌, ರಷ್ಯಾದ 16ರ ಮಿರ್ರಾ ಆ್ಯಂಡ್ರೀವಾ 4ನೇ ಸುತ್ತು ಪ್ರವೇಶಿಸಿದರು.

-

ಬೋಪಣ್ಣ ಜೋಡಿ

3ನೇ ಸುತ್ತಿಗೆ ಲಗ್ಗೆ

ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಜೊತೆಗೂಡಿ ಪುರುಷರ ಡಬಲ್ಸ್‌ನಲ್ಲಿ ಆಡುತ್ತಿರುವ ಕರ್ನಾಟಕದ ರೋಹನ್‌ ಬೋಪಣ್ಣ, ಟೂರ್ನಿಯಲ್ಲಿ 3ನೇ ಸುತ್ತು ಪ್ರವೇಶಿಸಿದರು. ಅವರು 2ನೇ ಸುತ್ತಿನಲ್ಲಿ ಆಸ್ಟ್ರೇಲಿಯಾದ ಜಾನ್‌ ಮಿಲ್ಮನ್‌-ಎಡ್ವರ್ಡ್ ವಿಂಟರ್‌ ವಿರುದ್ಧ 6-2, 6-4ರಲ್ಲಿ ಜಯಗಳಿಸಿದರು. ಭಾರತದ ಶ್ರೀರಾಮ್‌ ಬಾಲಾಜಿ-ರೊಮಾನಿಯಾದ ವಿಕ್ಟರ್‌ ಕಾರ್ನೀ ಕೂಡಾ ಶುಭಾರಂಭ ಮಾಡಿದರು.

-01ನೇ ಟೆನಿಸಿಗ

ಜೋಕೋ ಆಸ್ಟ್ರೇಲಿಯನ್‌ ಓಪನ್‌ನಲ್ಲಿ 100ನೇ ಪಂದ್ಯವಾಡಿದರು. ಎಲ್ಲಾ 4 ಗ್ರ್ಯಾನ್‌ಸ್ಲಾಂಗಳಲ್ಲಿ ತಲಾ 100 ಪಂದ್ಯವಾಡಿದ ಏಕೈಕ ಟೆನಿಸಿಗ ಜೋಕೋ.