ಆಸ್ಟ್ರೇಲಿಯನ್‌ ಓಪನ್‌ ಟೆನ್ನಿಸ್‌: 3ನೇ ಸುತ್ತಿಗೆ ಜೋಕೋವಿಚ್‌

| Published : Jan 18 2024, 02:01 AM IST

ಸಾರಾಂಶ

ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ 10 ಬಾರಿ ಚಾಂಪಿಯನ್‌ ನೋವಾಕ್‌ ಜೋಕೋವಿಚ್‌ 3ನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ.ಆಸ್ಟ್ರೇಲಿಯಾದ ಅಲೆಕ್ಸಿ ಪಾಪಿರಿನ್‌ ವಿರುದ್ಧ 6-3, 4-6, 7-6(7/4), 6-3 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು.

ಮೆಲ್ಬರ್ನ್‌: 10 ಬಾರಿ ಚಾಂಪಿಯನ್‌ ನೋವಾಕ್‌ ಜೋಕೋವಿಚ್‌ ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ 3ನೇ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಪುರುಷರ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ವಿಶ್ವ ನಂ.1 ಜೋಕೋ ಬುಧವಾರ ಆಸ್ಟ್ರೇಲಿಯಾದ ಅಲೆಕ್ಸಿ ಪಾಪಿರಿನ್‌ ವಿರುದ್ಧ 6-3, 4-6, 7-6(7/4), 6-3 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಕಳೆದ ಬಾರಿ ರನ್ನರ್‌-ಅಪ್‌, ಗ್ರೀಕ್‌ನ ಸ್ಟೆಫಾನೊಸ್‌ ಸಿಟ್ಸಿಪಾಸ್‌, ರಷ್ಯಾದ ಆ್ಯಂಡ್ರೆ ರುಬ್ಲೆವ್‌, ಇಟಲಿಯ ಜಾನಿಕ್‌ ಸಿನ್ನರ್‌, 15ನೇ ಶ್ರೇಯಾಂಕಿತ, ರಷ್ಯಾದ ಕರೇನ್‌ ಕಚನೋವ್‌ ಕೂಡಾ 2ನೇ ಸುತ್ತಿನ ಗೆಲುವು ಸಾಧಿಸಿ, ಮುಂದಿನ ಸುತ್ತಿಗೇರಿದರು.

-ಜಬುರ್‌ಗೆ ಸೋಲು

ಮಹಿಳಾ ಸಿಂಗಲ್ಸ್‌ನಲ್ಲಿ 3 ಬಾರಿ ಗ್ರ್ಯಾನ್‌ಸ್ಲಾಂ ರನ್ನರ್‌-ಅಪ್‌, 6ನೇ ಶ್ರೇಯಾಂಕಿತೆ ಒನ್ಸ್‌ ಜಬುರ್‌ಗೆ ಆಘಾತಕಾರಿ ಸೋಲು ಎದುರಾಯಿತು. ಟ್ಯುನೀಶಿಯಾದ ಜಬುರ್‌ ರಷ್ಯಾದ 16 ವರ್ಷದ ಮಿರ್ರಾ ಆ್ಯಂಡ್ರೀವಾ ವಿರುದ್ಧ 0-6, 2-6 ಸೆಟ್‌ಗಳಲ್ಲಿ ಸೋಲನುಭವಿಸಿದರು. 2018ರ ಚಾಂಪಿಯನ್‌, ಡೆನ್ಮಾರ್ಕ್‌ನ ಕ್ಯಾರೊಲಿನಾ ವೋಜ್ನಿಯಾಕಿ ರಷ್ಯಾದ ಮರಿಯಾ ಟೊಮಫೀವಾ ವಿರುದ್ಧ ಸೋಲನಭವಿಸಿದರು. ಆದರೆ 2ನೇ ಶ್ರೇಯಾಂಕಿತೆ ಅರೈನಾ ಸಬಲೆಂಕಾ, 4ನೇ ಶ್ರೇಯಾಂಕಿತೆ ಕೊಕೊ ಗಾಫ್‌, 9ನೇ ಶ್ರೇಯಾಂಕಿತೆ ಬಾರ್ಬೊರಾ ಕ್ರೆಜಿಕೋವಾ 3ನೇ ಸುತ್ತಿಗೇರಿದರು.