ಆಸ್ಟ್ರೇಲಿಯನ್‌ ಓಪನ್‌: ಸುಮಿತ್‌ ಓಟಕ್ಕೆ ಬ್ರೇಕ್‌

| Published : Jan 19 2024, 01:46 AM IST

ಆಸ್ಟ್ರೇಲಿಯನ್‌ ಓಪನ್‌: ಸುಮಿತ್‌ ಓಟಕ್ಕೆ ಬ್ರೇಕ್‌
Share this Article
  • FB
  • TW
  • Linkdin
  • Email

ಸಾರಾಂಶ

ಆಸ್ಟ್ರೇಲಿಯನ್‌ ಓಪನ್‌ನಲ್ಲಿ ಸುಮಿತ್‌ ನಗಾಲ್‌ 2ನೇ ಸುತ್ತಿನಲ್ಲಿ ಸೋಲು ಅನುಭವಿಸಿದ್ದಾರೆ. ಪುರುಷರ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ನಗಾಲ್‌ ಶಾಂಗ್‌ ಜುಂಚೆಂಗ್‌ ವಿರುದ್ಧ 6-2, 3-6, 5-7, 4-6 ಸೆಟ್‌ಗಳಲ್ಲಿ ಸೋತಿದ್ದಾರೆ.

ಮೆಲ್ಬರ್ನ್‌: ಅರ್ಹತಾ ಸುತ್ತಿನಲ್ಲಿ 3 ಪಂದ್ಯಗಳಲ್ಲಿ ಗೆದ್ದು, ಬಳಿಕ ಪ್ರಧಾನ ಸುತ್ತಿನಲ್ಲೂ ಗೆಲುವು ಸಾಧಿಸಿ ಗಮನ ಸೆಳೆದಿದ್ದ ಭಾರತದ ತಾರಾ ಟೆನಿಸಿಗ ಸುಮಿತ್‌ ನಗಾಲ್‌ರ ಆಸ್ಟ್ರೇಲಿಯನ್‌ ಓಪನ್‌ನ ಜಯದ ಓಟಕ್ಕೆ ಬ್ರೇಕ್‌ ಬಿದ್ದಿದೆ. ಗುರುವಾರ ಪುರುಷರ ಸಿಂಗಲ್ಸ್‌ 2ನೇ ಸುತ್ತಿನಲ್ಲಿ ನಗಾಲ್‌ ಶಾಂಗ್‌ ಜುಂಚೆಂಗ್‌ ವಿರುದ್ಧ 6-2, 3-6, 5-7, 4-6 ಸೆಟ್‌ಗಳಲ್ಲಿ ಸೋತು ಹೊರಬಿದ್ದರು.ಇಗಾ, ಕಾರ್ಲೊಸ್‌ಗೆ ಜಯ: ಇದೇ ವೇಳೆ ಪುರುಷರ ಸಿಂಗಲ್ಸ್‌ನಲ್ಲಿ ಕಾರ್ಲೊಸ್‌ ಆಲ್ಕರಜ್‌, ನಾರ್ವೆಯ ಕ್ಯಾಸ್ಪೆರ್‌ ರುಡ್‌, ಅಲೆಕ್ಸಾಂಡರ್‌ ಜ್ವೆರೆವ್‌ 3ನೇ ಸುತ್ತಿಗೆ ಲಗ್ಗೆ ಇಟ್ಟರು. ಮಹಿಳಾ ಸಿಂಗಲ್ಸ್‌ನಲ್ಲಿ ವಿಶ್ವ ನಂ.1 ಇಗಾ ಸ್ವಿಯಾಟೆಕ್‌, ಅಜರೆಂಕಾ 3ನೇ ಸುತ್ತಿಗೇರಿದರೆ, ಎಮ್ಮಾ ರಾಡುಕಾನು, ಎಲೆನಾ ರಬೈಕೆನಾ ಸೋತು ಹೊರಬಿದ್ದರು.ಬೋಪಣ್ಣ ಶುಭಾರಂಭಪುರುಷರ ಡಬಲ್ಸ್‌ನಲ್ಲಿ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಜೊತೆಗೂಡಿ ಕಣಕ್ಕಿಳಿದಿರುವ ಭಾರತದ ರೋಹನ್‌ ಬೋಪಣ್ಣ ಶುಭಾರಂಭ ಮಾಡಿದ್ದಾರೆ. ಆದರೆ ವಿಜಯ್‌ ಪ್ರಶಾಂತ್‌-ಅನಿರುದ್ಧ್‌ ಚಂದ್ರಶೇಕರ್ ಜೋಡಿ ಮೊದಲ ಸುತ್ತಲ್ಲೇ ಸೋತು ಹೊರಬಿತ್ತು.