ಸಾರಾಂಶ
ಪ್ಯಾರಿಸ್: ಭಾರತದ ಪದಕ ಭರವಸೆಗಳಲ್ಲಿ ಒಂದೆನಿಸಿರುವ ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಗುರುವಾರ 3ನೇ ಶ್ರೇಯಾಂಕಿತ ಸ್ವಾತಿಕ್ ಸಾಯಿರಾಜ್ ಹಾಗೂ ಚಿರಾಗ್ ಶೆಟ್ಟಿ ಜೋಡಿ ಕಣಕ್ಕಿಳಿಯಲಿದೆ.
ಗುಂಪು ಹಂತದಲ್ಲಿ ಎಲ್ಲಾ ಪಂದ್ಯಗಳನ್ನು ಗೆದ್ದ ಭಾರತೀಯ ಜೋಡಿಗೆ ಮಲೇಷ್ಯಾದ ಆ್ಯರೊನ್ ಚಿಯಾ ಹಾಗೂ ವೊಯೊ ಯಿಕ್ ಸೊ ಜೋಡಿ ಎದುರಾಗಲಿದೆ. ಕಳೆದ 3 ಮುಖಾಮುಖಿಗಳಲ್ಲೂ ಮಲೇಷ್ಯಾ ಜೋಡಿಯನ್ನು ಭಾರತೀಯ ಜೋಡಿ ಸೋಲಿಸಿದೆ.ಪ್ರಿ ಕ್ವಾರ್ಟರ್ ಪ್ರವೇಶಿಸಿದ ಪಿ.ವಿ.ಸಿಂಧು, ಲಕ್ಷ್ಯ ಸೇನ್
ಪ್ಯಾರಿಸ್: ಭಾರತದ ತಾರಾ ಶಟ್ಲರ್‌ಗಳಾದ ಪಿ.ವಿ.ಸಿಂಧು ಹಾಗೂ ಲಕ್ಷ್ಯ ಸೇನ್ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಮಹಿಳಾ ಸಿಂಗಲ್ಸ್‌ನ ಗುಂಪು ಹಂತದ ಅಂತಿಮ ಪಂದ್ಯದಲ್ಲಿ ಸಿಂಧು, ಇಸ್ಟೋನಿಯಾದ ಕ್ರಿಸ್ಟಿನ್ ಕುಬಾ ವಿರುದ್ಧ 21-5, 21-10ರಲ್ಲಿ ಗೆದ್ದರು. ಪುರುಷರ ಸಿಂಗಲ್ಸ್‌ನ ಗುಂಪು ಹಂತದ ಅಂತಿಮ ಪಂದ್ಯದಲ್ಲಿ ಲಕ್ಷ್ಯ, ವಿಶ್ವ ನಂ.4, ಹಾಲಿ ಏಷ್ಯನ್ ಚಾಂಪಿಯನ್ ಇಂಡೋನೇಷ್ಯಾದ ಜೊನಾಥನ್ ಕ್ರಿಸ್ಟಿ ವಿರುದ್ಧ 21-18, 21-12ರಲ್ಲಿ ಸುಲಭ ಗೆಲುವು ಸಾಧಿಸಿದರು.