ಸಿಂಗಾಪುರ ಓಪನ್‌ ಬ್ಯಾಡ್ಮಿಂಟನ್‌: ಸಾತ್ವಿಕ್‌-ಚಿರಾಗ್‌ಗೆ ಮೊದಲ ಸುತ್ತಲ್ಲೇ ಶಾಕ್‌!

| Published : May 29 2024, 12:49 AM IST

ಸಿಂಗಾಪುರ ಓಪನ್‌ ಬ್ಯಾಡ್ಮಿಂಟನ್‌: ಸಾತ್ವಿಕ್‌-ಚಿರಾಗ್‌ಗೆ ಮೊದಲ ಸುತ್ತಲ್ಲೇ ಶಾಕ್‌!
Share this Article
  • FB
  • TW
  • Linkdin
  • Email

ಸಾರಾಂಶ

ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಸಿದ್ಧತೆ ನಡೆಸುತ್ತಿರುವ ವಿಶ್ವ ನಂ.1, ಭಾರತದ ಸಾತ್ವಿಕ್‌ ಸಾಯಿರಾಜ್‌-ಚಿರಾಗ್‌ ಶೆಟ್ಟಿಗೆ ಹಿನ್ನಡೆ. ಸಿಂಗಾಪುರ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಮೊದಲ ಸುತ್ತಲ್ಲೇ ಆಘಾತ. ಇಂದು ಕಣಕ್ಕಿಳಿಯಲಿದ್ದಾರೆ ಸಿಂಧು, ಲಕ್ಷ್ಯ, ಪ್ರಣಯ್‌.

ಸಿಂಗಾಪುರ: ವಿಶ್ವ ನಂ.1, ಭಾರತ ಸಾತ್ವಿಕ್‌ ಸಾಯಿರಾಜ್‌ ಹಾಗೂ ಚಿರಾಗ್‌ ಶೆಟ್ಟಿ ಮಂಗಳವಾರದಿಂದ ಇಲ್ಲಿ ಆರಂಭಗೊಂಡ ಸಿಂಗಾಪುರ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಆಘಾತಕಾರಿ ಸೋಲು ಅನುಭವಿಸಿದ್ದಾರೆ. ಪುರುಷರ ಡಬಲ್ಸ್‌ ಮೊದಲ ಸುತ್ತಿನ ಪಂದ್ಯದಲ್ಲಿ ವಿಶ್ವ ನಂ.34, ಡೆನ್ಮಾರ್ಕ್‌ನ ಡೇನಿಯಲ್‌ ಲುಂಗಾರ್ಡ್‌ ಹಾಗೂ ಮ್ಯಾಡ್ಸ್‌ ವೆಸ್ಟರ್‌ಗಾರ್ಡ್‌ ವಿರುದ್ಧ 20-22, 18-21 ನೇರ ಗೇಮ್‌ಗಳಲ್ಲಿ ಭಾರತೀಯ ಜೋಡಿಗೆ ಸೋಲು ಎದುರಾಯಿತು. ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುವ ಫೇವರಿಟ್ಸ್‌ ಎನಿಸಿರುವ ಸಾತ್ವಿಕ್‌-ಚಿರಾಗ್‌ ಕೇವಲ 47 ನಿಮಿಷಗಳಲ್ಲಿ ಪರಾಭವಗೊಂಡರು. ಎರಡು ವಾರಗಳ ಹಿಂದಷ್ಟೇ ಭಾರತೀಯ ಜೋಡಿ ಥಾಯ್ಲೆಂಡ್‌ ಓಪನ್‌ನಲ್ಲಿ ಚಾಂಪಿಯನ್‌ ಆಗಿತ್ತು.ಮಂಗಳವಾರ ಭಾರತೀಯರ ಪಾಲಿಗೆ ದುರದೃಷ್ಟಕರವಾಗಿತ್ತು. ಮಹಿಳಾ ಸಿಂಗಲ್ಸ್‌ನಲ್ಲಿ ಆಕರ್ಷಿ ಕಶ್ಯಪ್‌, ಪುರುಷರ ಸಿಂಗಲ್ಸ್‌ನಲ್ಲಿ ಪ್ರಿಯಾನ್ಶು ರಾಜಾವತ್‌ ಮೊದಲ ಸುತ್ತಿನಲ್ಲೇ ಸೋತ ಹೊರಬಿದ್ದರು.ವಿಶ್ವ ನಂ.41 ಆಕರ್ಷಿ 7-21, 15-21ರಲ್ಲಿ ಥಾಯ್ಲೆಂಡ್‌ನ ಪೊರ್ನ್‌ಪಿಚಾ ಚೊಯಿಕೀವೊಂಗ್‌ ವಿರುದ್ಧ ಸೋತರೆ, ವಿಶ್ವ ನಂ.42 ಪ್ರಿಯಾನ್ಶು 21-23, 19-21ರಲ್ಲಿ ಹಾಂಕಾಂಗ್‌ನ ಲೀ ಚೆಯುಕ್‌ ವಿರುದ್ಧ ಸೋಲುಂಡರು.ಮಹಿಳಾ ಡಬಲ್ಸ್‌ನಲ್ಲಿ ಋತುಪರ್ಣಾ ಪಾಂಡ ಹಾಗೂ ಶ್ವೇತಪರ್ಣಾ ಪಾಂಡ ಸಹ ಮೊದಲ ಸುತ್ತಿನಲ್ಲಿ ಸೋತು ನಿರಾಸೆ ಅನುಭವಿಸಿದರು. ಪಿ.ವಿ.ಸಿಂಧು, ಲಕ್ಷ್ಯ ಸೇನ್‌ ಹಾಗೂ ಎಚ್‌.ಎಸ್‌.ಪ್ರಣಯ್‌ ಬುಧವಾರ ತಮ್ಮ ಅಭಿಯಾನ ಆರಂಭಿಸಲಿದ್ದಾರೆ.