ಬೆಂಗಳೂರು ಓಪನ್‌ ಟೆನಿಸ್‌ ಪಂದ್ಯಾವಳಿ ಫೆ.10ರಿಂದ ಆರಂಭ

| Published : Jan 25 2024, 02:01 AM IST

ಬೆಂಗಳೂರು ಓಪನ್‌ ಟೆನಿಸ್‌ ಪಂದ್ಯಾವಳಿ ಫೆ.10ರಿಂದ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್‌ ಟೆನಿಸ್‌ ಟೂರ್ನಿಯು ಫೆ.10ರಿಂದ ಆರಂಭವಾಗಲಿದ್ದು, ವಿಶ್ವ ನಂ137 ಶ್ರೇಯಾಂಕದ ಸುಮಿತ್‌ ನಗಾಲ್‌ ಮುಖ್ಯಸುತ್ತಿಗೆ ಅರ್ಹತೆ ಪಡೆದ ಏಕೈಕ ಭಾರತೀಯ ಆಟಗಾರರಾಗಿದ್ದಾರೆ.

ಬೆಂಗಳೂರು: ಫೆ.10ರಿಂದ ಅಲ್ಲಿ ಆರಂಭವಾಗಲಿರುವ ಬೆಂಗಳೂರು ಓಪನ್‌ ಎಟಿಪಿ ಚಾಲೆಂಜರ್‌ ಟೆನಿಸ್‌ ಟೂರ್ನಿಯಲ್ಲಿ ಭಾರತದ ಸವಾಲನ್ನು ವಿಶ್ವ ನಂ137 ಶ್ರೇಯಾಂಕದ ಸುಮಿತ್‌ ನಗಾಲ್‌ ಮುನ್ನಡೆಸಲಿದ್ದಾರೆ. 11 ವಿವಿಧ ದೇಶಗಳ ವಿಶ್ವ ನಂ 257ನೇ ಶ್ರೇಯಾಂಕದೊಳಗಿನ 21 ಆಟಗಾರರು ಮುಖ್ಯ ಸುತ್ತಿಗೆ ಅರ್ಹತೆ ಪಡೆದಿದ್ದಾರೆ. ವಿಶ್ವ ನಂ.106, ಫ್ರಾನ್ಸ್‌ನ ಬೆಂಜಮಿನ್‌ ಬಿಂಜಿ ಟೂರ್ನಿಯಲ್ಲಿ ಆಡಲಿರುವ ಗರಿಷ್ಠ ಶ್ರೇಯಾಂಕದ ಆಟಗಾರ. 2017ರಲ್ಲಿ ಪ್ರಶಸ್ತಿ ಗೆದ್ದಿದ್ದ ಸುಮಿತ್‌ ನಗಾಲ್‌ ಮುಖ್ಯಸುತ್ತಿಗೆ ಅರ್ಹತೆ ಪಡೆದ ಏಕೈಕ ಭಾರತೀಯ ಆಟಗಾರರಾಗಿದ್ದಾರೆ. ಪ್ರಶಸ್ತಿಗಾಗಿ ಆಟಗಾರರ ಮಧ್ಯೆ ತೀವ್ರ ಪೈಪೋಟಿಯ ನಿರೀಕ್ಷೆಯಿದೆ. ಅವರನ್ನು ಬೆಂಗಳೂರಿಗೆ ಸ್ವಾಗತಿಸಲು ನಾವು ಖಾತರರಾಗಿದ್ದೇವೆ ಎಂದು ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಅಸೋಷಿಯೇಶನ್‌ ಉಪಾಧ್ಯಕ್ಷ ಹಾಗೂ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್, ಐಟಿ-ಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ. ಸುನಿಲ್‌ ಯಜಮಾನ್‌ ಪಂದ್ಯಾವಳಿ ನಿರ್ದೇಶಕ ರಾಗಿ ಕಾರ್ಯನಿರ್ವಹಿಸಲಿದ್ದಾರೆ.