ಸಾರಾಂಶ
ಬೆಂಗಳೂರು: ಇಲ್ಲಿನ ಕೆಎಸ್‌ಎಲ್‌ಟಿಎ ಕ್ರೀಡಾಂಗಣದಲ್ಲಿಗುರುವಾರ ನಡೆದ ಕೆಪಿಬಿ ಟ್ರಸ್ಟ್ ಐಟಿಎಫ್ ಮಹಿಳಾ ಓಪನ್‌ನ ಸಿಂಗಲ್ಸ್‌ನಲ್ಲಿ ಪ್ರಧಾನ ಘಟ್ಟದಲ್ಲಿ ಸ್ಥಾನ ಪಡೆದಿದ್ದ ಐವರು ಪೈಕಿ ಏಷ್ಯನ್ ಗೇಮ್ಸ ಚಿನ್ನದ ಪದಕ ವಿಜೇತೆ ರುತುಜಾ ಭೋಸಲೆ ಕ್ವಾರ್ಟರ್ ಫೈನಲ್‌ಗೆ ಅರ್ಹತೆ ಗಳಿಸಿದ ಏಕೈಕ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.27 ವರ್ಷದ ರುತುಜಾ, ಭಾರತದ ಅಗ್ರಮಾನ್ಯ ಆಟಗಾರ್ತಿ ಅಂಕಿತಾ ರೈನಾ ಗಾಯದ ಸಮಸ್ಯೆಯಿಂದಾಗಿ ಹಿಂದೆ ಸರಿದ ಕಾರಣ ಹೆಚ್ಚಿನ ಪ್ರಯಾಸದ ಪಡೆದೆ ಮುಂದಿನ ಸುತ್ತಿಗೆ ತೇರ್ಗಡೆ ಹೊಂದಿದರು. ಮತ್ತೊಂದು ಪಂದ್ಯದಲ್ಲಿ ಆರನೇ ಶ್ರೇಯಾಂಕಿತ ಫ್ರಾನ್ಸ್‌ನ ಕರೋಲ್ ಮೊನೆಟ್ ವಿರುದ್ಧ ಮೊದಲ ಸೆಟ್ ಗೆದ್ದ ನಂತರ ಸ್ಥಿರತೆ ಉಳಿಸಿಕೊಳ್ಳಲು ಸಾಧ್ಯವಾಗದೇ ವೈದೇಹಿ ಚೌಧರಿ ಕೂಡ 7-6 (5), 4-6, 4-6 ಸೆಟ್‌ಗಳಿಂದ ಸೋತು ನಿರ್ಗಮಿಸಿದರು.ಶರ್ಮದಾ ಬಾಲು ಮತ್ತು ಶ್ರಾವ್ಯ ಶಿವಾನಿ ಚಿಲಕಲಪುಡಿ ಜೋಡಿ ಮತ್ತು ಶ್ರೀವಲ್ಲಿ ರಶ್ಮಿಕಾ ಭಮಿಡಿಪತಿ ಮತ್ತು ವೈದೇಹಿ ಚೌಧರಿ ಜೋಡಿ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಸೋತಿದ್ದರಿಂದ ಡಬಲ್ಸ್‌ನಲ್ಲಿ ಭಾರತದ ಸವಾಲು ಕೂಡ ಕೊನೆಗೊಂಡಿತು. ಎರಡನೇ ಶ್ರೇಯಾಂಕಿತ ಜೋಡಿ ಪ್ರಾರ್ಥನಾ ಜಿ.ಥೋಂಬರೆ ಮತ್ತು ಅನಸ್ತಾಸಿಯಾ ಟಿಖೋನೊವಾ ಅವರು ಫ್ರಾನ್ಸ್‌ನ ಅಮಂಡಿನ್ ಹೆಸ್ಸೆ ಮತ್ತು ಸ್ಲೋವಿಯಾದ ದಲಿಲಾ ಜಕುಪೊವಿಕ್ ವಿರುದ್ಧ ಆಘಾತಕಾರಿ ಸೋಲನ್ನು ಅನುಭವಿಸಿದರು.ಏತನ್ಮಧ್ಯೆ, ಅಗ್ರ ಶ್ರೇಯಾಂಕದ ಲಾತ್ವಿಯಾದ ಡಾರ್ಜಾ ಸೆಮೆನಿಸ್ಟಾಜಾ ಅವರು ತಮ್ಮ ಜರ್ಮನಿಯ ಎದುರಾಳಿ ಮತ್ತು ಅರ್ಹತಾ ಸುತ್ತಿನ ವಿಜೇತೆ ಲೆನಾ ಪಾಪಡಾಕಿಸ್ ಅವರನ್ನು 7-6 (5), 3-6, 6-4 ಸೆಟ್ ಗಳಿಂದ ಸೋಲಿಸಿ 8ರ ಘಟ್ಟಕ್ಕೆ ಪ್ರವೇಶಿಸಿದರು. ಕಳೆದ ಋುತುವಿನಲ್ಲಿ ಮೂರು ಡಬ್ಲ್ಯು 60 ಮತ್ತು ಒಂದು ಡಬ್ಲ್ಯು 40 ಪ್ರಶಸ್ತಿಗಳನ್ನು ಗೆದ್ದಿರುವ ದರ್ಜಾ, ಮೊದಲ ಗೇಮ್‌ನಲ್ಲಿ ಸರ್ವ್ ಕಳೆದುಕೊಂಡ ನಂತರ, 2 ಮತ್ತು 4 ನೇ ಗೇಮ್‌ನಲ್ಲಿ ವಿರಾಮದೊಂದಿಗೆ ಮುಂದಿನ ನಾಲ್ಕು ಗೇಮ್‌ಗಳನ್ನು ಗೆಲ್ಲಲು ಪ್ರಚಂಡ ಆಟವಾಡಿದರು.