ಐಪಿಎಲ್‌ನಲ್ಲಿ ನೋಬಾಲ್‌ ನಿರ್ಧರಿಸಲು ಇನ್ನು ಹೊಸ ಐಡಿಯಾ

| Published : Mar 29 2024, 12:47 AM IST

ಐಪಿಎಲ್‌ನಲ್ಲಿ ನೋಬಾಲ್‌ ನಿರ್ಧರಿಸಲು ಇನ್ನು ಹೊಸ ಐಡಿಯಾ
Share this Article
  • FB
  • TW
  • Linkdin
  • Email

ಸಾರಾಂಶ

ನೋಬಾಲ್‌ ವಿಚಾರದಲ್ಲಿನ ಗೊಂದಲಗಳನ್ನು ತಪ್ಪಿಸಲು ಬಿಸಿಸಿಐ ಹೊಸ ಯೋಜನೆ ಜಾರಿಗೊಳಿಸಿದೆ. ಇದರ ಭಾಗವಾಗಿ ಈಗಾಗಲೇ ಹಾಕ್‌-ಐ ಸಂಸ್ಥೆ ಪ್ರತಿ ಆಟಗಾರನ ಕಾಲಿನಿಂದ ಸೊಂಟದ ವರೆಗಿನ ಎತ್ತರ ದಾಖಲಿಸಿಕೊಂಡಿದೆ.

ನವದೆಹಲಿ: ಐಪಿಎಲ್‌ನಲ್ಲಿ ಪ್ರತಿ ಬಾರಿಯೂ ವಿವಿಧ ತಂತ್ರಜ್ಞಾನಗಳನ್ನು ಪರಿಚಯಿಸಲಾಗುತ್ತಿದ್ದು, ಈ ಬಾರಿ ನೋಬಾಲ್‌ ನಿರ್ಧರಿಸಲು ಬಿಸಿಸಿಐ ಹೊಸ ಐಡಿಯಾ ಕಂಡುಹಿಡಿದಿದೆ. ಇನ್ನು ಮುಂದೆ ಬೌಲರ್‌ ನೋಬಾಲ್‌ ಎಸೆದರೆ ಹಾಕ್‌-ಐ ಸಂಸ್ಥೆಯು ಅದು ನೋಬಾಲ್‌ ಹೌದೋ ಅಲ್ಲವೋ ಎಂಬುದನ್ನು ನಿರ್ಧರಿಸಲಿದೆ. ಈಗಾಗಲೇ ಹಾಕ್‌-ಐ ಸಂಸ್ಥೆ ಪ್ರತಿ ಆಟಗಾರನ ಕಾಲಿನಿಂದ ಸೊಂಟದ ವರೆಗಿನ ಎತ್ತರ ದಾಖಲಿಸಿಕೊಂಡಿದೆ. ಬ್ಯಾಟರ್‌ನ ಸೊಂಟಕ್ಕಿಂತ ಮೇಲೆ ಬೌಲರ್‌ ಫುಲ್‌ಟಾಸ್‌ ಎಸೆದರೆ ಹಾಕ್‌-ಐ ಸಂಸ್ಥೆ ಬಳಿ ಇರುವ ದತ್ತಾಂಶ ಪರಿಶೀಲಿಸಿ ನೋಬಾಲ್‌ ತೀರ್ಪು ನೀಡಲಾಗುತ್ತದೆ.

ಹನುಮ ವಿಹಾರಿಗೆ ಆಂಧ್ರ ಕ್ರಿಕೆಟ್‌ ಸಂಸ್ಥೆ ನೋಟಿಸ್‌

ಬೆಂಗಳೂರು: ರಣಜಿ ತಂಡದ ನಾಯಕತ್ವದ ವಿಚಾರಕ್ಕೆ ಸಂಬಂಧಿಸಿದಂತೆ ಆಂಧ್ರ ಕ್ರಿಕೆಟ್‌ ಸಂಸ್ಥೆ(ಎಸಿಎ) ವಿರುದ್ಧ ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದ ಹಿರಿಯ ಕ್ರಿಕೆಟಿಗ ಹನುಮ ವಿಹಾರಿಗೆ ಎಸಿಎ ಶೋಕಾಸ್‌ ನೋಟಿಸ್‌ ನೀಡಿದೆ. ಇದಕ್ಕೆ ಉತ್ತರಿಸಿರುವ ವಿಹಾರಿ, ತಂಡ ತೊರೆಯಲು ನಿರಾಕ್ಷೇಪಣ ಪತ್ರ (ಎನ್‌ಒಸಿ) ನೀಡುವಂತೆ ಸಂಸ್ಥೆಗೆ ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ. ಆಂಧ್ರ ತಂಡದಲ್ಲಿದ್ದ ಸ್ಥಳೀಯ ರಾಜಕಾರಣಿಯೊಬ್ಬರ ಮಗನ ಮೇಲೆ ಕೂಗಾಡಿದ್ದಕ್ಕೆ ತಮ್ಮನ್ನು ನಾಯಕತ್ವದಿಂದ ಕಿತ್ತು ಹಾಕಲಾಗಿತ್ತು ಎಂದು ಇತ್ತೀಚೆಗಷ್ಟೇ ವಿಹಾರಿ ಸಾಮಾಜಿಕ ತಾಣಗಳಲ್ಲಿ ಆರೋಪಿಸಿದ್ದರು. ಅಲ್ಲದೆ ಆಂಧ್ರ ಪರ ಇನ್ನೆಂದೂ ಆಡಲ್ಲ ಎಂದಿದ್ದರು.