ಏ.28ರಂದು 16ನೇ ಆವೃತ್ತಿಯಬೆಂಗಳೂರು 10ಕೆ ಮ್ಯಾರಥಾನ್‌

| Published : Feb 15 2024, 01:16 AM IST

ಸಾರಾಂಶ

ಬಹುನಿರೀಕ್ಷಿತ 16ನೇ ಆವೃತ್ತಿಯ ಬೆಂಗಳೂರು 10ಕೆ ಮ್ಯಾರಥಾನ್‌ಗೆ ದಿನಾಂಕ ನಿಗದಿಯಾಗಿದೆ. ಆದರೆ ಈ ದಿನಾಂಕ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬದಲಾವಣೆ ಕೂಡಾ ಆಗಬಹುದು.

ಬೆಂಗಳೂರು: 16ನೇ ಆವೃತ್ತಿಯ ಬೆಂಗಳೂರು 10ಕೆ ಮ್ಯಾರಥಾನ್‌ ಏ.28ರಂದು ಭಾನುವಾರ ನಡೆಯಲಿದೆ ಎಂದು ಆಯೋಜಕರು ಬುಧವಾರ ಘೋಷಿಸಿದ್ದಾರೆ. ಆದರೆ ಈ ದಿನಾಂಕ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಬದಲಾವಣೆ ಕೂಡಾ ಆಗಬಹುದು ಆಯೋಜಕರು ತಿಳಿಸಿದ್ದಾರೆ.10ಕೆ ಓಟದ ಜೊತೆಗೆ ಮಜಾ ರನ್‌(5.1 ಕಿ.ಮೀ), ಸಿಲ್ವರ್ಸ್‌ ರನ್‌ ಮತ್ತು ಚಾಂಪಿಯನ್ಸ್ ವಿತ್‌ ಡಿಸೆಬಿಲಿಟ(4.2 ಕಿ.ಮೀ.) ಓಟದ ಸ್ಪರ್ಧೆ ಕೂಡಾ ಇರಲಿದೆ. ಫೆ.15ರಿಂದ ಮಾ.29ರ ವರೆಗೆ ನೋಂದಣಿಗೆ ಅವಕಾಶವಿದೆ. ಆಸಕ್ತರು https://tcsworld10k.procam.in ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಬಹುದು ಎಂದು ಆಯೋಜಕರು ತಿಳಿಸಿದ್ದಾರೆ.ಬೆಂಗ್ಳೂರು ಓಪನ್‌ ಟೆನಿಸ್‌: ರಾಮ್‌ ಕ್ವಾರ್ಟರ್‌ ಪ್ರವೇಶ

ಬೆಂಗಳೂರು: ಭಾರತದ ಅಗ್ರ ಟೆನಿಸಿಗ ರಾಮ್‌ಕುಮಾರ್‌ ರಾಮನಾಥನ್‌ ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಟೂರ್ನಿಗೆ ವೈಲ್ಡ್‌ ಕಾರ್ಡ್‌ ಮೂಲಕ ಪ್ರವೇಶಿಸಿದ್ದ ರಾಮ್‌ಕುಮಾರ್‌, ಬುಧವಾರ ಪುರುಷರ ಸಿಂಗಲ್ಸ್‌ ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ಇಟಲಿಯ ಲ್ಯುಕಾ ನಾರ್ಡಿ ಅವರನ್ನು 1-6, 6-4, 6-4 ಸೆಟ್‌ಗಳಲ್ಲಿ ಸೋಲಿಸಿ ಅಂತಿಮ 8ರ ಘಟ್ಟ ಪ್ರವೇಶಿಸಿದರು. ಇದೇ ವೇಳೆ 4ನೇ ಶ್ರೇಯಾಂಕಿತ, ಫ್ರಾನ್ಸ್‌ನ ಬೆಂಜಮಿನ್‌ ಬೊನ್ಜಿ ಅವರು ಪೋಲೆಂಡ್‌ನ ಮಾರ್ಕ್‌ ಕಾಸ್ನಿಕೊವ್ಸ್ಕಿ ವಿರುದ್ಧ 3-6, 4-6ರಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದರು.