ಸಾರಾಂಶ
ಬೆಂಗಳೂರಿನ ಕೆಎಸ್‌ಎಲ್‌ಟಿಎ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಬೆಂಗಳೂರು ಓಪನ್ ಅಂತಾರಾಷ್ಟ್ರೀಯ ಮಹಿಳಾ ಟೆನಿಸ್ ಟೂರ್ನಿಯ ಫೈನಲ್‌ನಲ್ಲಿ ಡಾರ್ಜಾ ಸೆಮೆನಿಸ್ಟಾಜಾ ಗೆದ್ದು ಸಿಂಗಲ್ಸ್ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಬೆಂಗಳೂರಿನ ಕೆಎಸ್‌ಎಲ್‌ಟಿಎ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಬೆಂಗಳೂರು ಓಪನ್ ಅಂತಾರಾಷ್ಟ್ರೀಯ ಮಹಿಳಾ ಟೆನಿಸ್ ಟೂರ್ನಿಯ ಫೈನಲ್‌ನಲ್ಲಿ ಡಾರ್ಜಾ ಸೆಮೆನಿಸ್ಟಾಜಾ ಗೆದ್ದು ಸಿಂಗಲ್ಸ್ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಬೆಂಗಳೂರು: ಬೆಂಗಳೂರು ಓಪನ್ ಅಂತಾರಾಷ್ಟ್ರೀಯ ಮಹಿಳಾ ಟೆನಿಸ್ ಟೂರ್ನಿಯ ಫೈನಲ್‌ನಲ್ಲಿ ಅಗ್ರ ಶ್ರೇಯಾಂಕದ ಡಾರ್ಜಾ ಸೆಮೆನಿಸ್ಟಾಜಾ ಅವರು ಆರನೇ ಶ್ರೇಯಾಂಕದ ಕರೋಲ್ ಮೊನೆಟ್ ಅವರನ್ನು ಮಣಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.ಇಲ್ಲಿನ ಕೆಎಸ್‌ಎಲ್‌ಟಿಎ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದ ಮೊದಲ ಸೆಟ್‌ನಲ್ಲಿ 6-1ರಿಂದ ಮುನ್ನಡೆ ಸಾಧಿಸಿದ ಲಾತ್ವಿಯಾದ ಆಟಗಾರ್ತಿ ಎರಡನೇ ಸೆಟ್‌ನಲ್ಲಿ 3-0 ಮುನ್ನಡೆ ಸಾಧಿಸಿದ್ದಾಗ ಫ್ರಾನ್ಸ್ ಆಟಗಾರ್ತಿ ಬೆನ್ನು ನೋವಿನಿಂದಾಗಿ ಪಂದ್ಯದ ಮಧ್ಯದಲ್ಲೇ ಹಿಂದೆ ಸರಿದರು.
ಇದು 21 ವರ್ಷದ ದರ್ಜಾ ಅವರ 15ನೇ ಐಟಿಎಫ್ ಪ್ರಶಸ್ತಿಯಾಗಿದ್ದು, ನಿನ್ನೆ ಡಬಲ್ಸ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಇದನ್ನು ಸ್ಮರಣೀಯವಾಗಿ ಸಿದರು. ‘‘ಎರಡು ಪ್ರಶಸ್ತಿಗಳನ್ನು ಮನೆಗೆ ಕೊಂಡೊಯ್ಯಲು ನನಗೆ ತುಂಬಾ ಸಂತೋಷವಾಗಿದೆ. ಬೆಂಗಳೂರು ನನಗೆ ಅದೃಷ್ಟ ಎಂದು ನಾನು ಭಾವಿಸುತ್ತೇನೆ,’’ ಎಂದು ಸಿಂಗಲ್ಸ್ ಮತ್ತು ಡಬಲ್ಸ್ ಗೆಲುವಿಗಾಗಿ ತಲಾ 50 ಡಬ್ಲ್ಯುಟಿಎ ಅಂಕಗಳನ್ನು ಗಳಿಸಿದ ದರ್ಜಾ ಹೇಳಿದರು. ಈ ಗೆಲುವಿ ನೊಂದಿಗೆ ಲಾತ್ವಿಯಾ ಆಟಗಾರ್ತಿ, 6094 ಯುಎಸ್ ಡಾಲರ್ ಚೆಕ್‌ನ್ನು ಜೇಬಿಗಿಳಿಸಿದರು. ರನ್ನರ್ ಅಪ್ ಸ್ಥಾನ ಪಡೆದ ಕರೋಲ್ 3257 ಯುಎಸ್ ಡಾಲರ್ ಬಹುಮಾನ ಮೊತ್ತ ಹಾಗೂ 33 ಡಬ್ಲ್ಯುಟಿಎ ಅಂಕಗಳನ್ನು ಗಿಟ್ಟಿಸಿದರು..