ಸಾರಾಂಶ
ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆಯು ದುಬೈನಲ್ಲಿ ಫೆ.22ರಿಂದ ಆರಂಭವಾಗಲಿರುವ ಭಾರತ, ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವಿನ ಅಂಧರ ತ್ರಿಕೋನ ಸರಣಿಗೆ ಭಾರತ ತಂಡ ಪ್ರಕಟಿಸಿದೆ.
ನವದೆಹಲಿ: ಭಾರತೀಯ ಅಂಧರ ಕ್ರಿಕೆಟ್ ಸಂಸ್ಥೆಯು ದುಬೈನಲ್ಲಿ ಫೆ.22ರಿಂದ ಆರಂಭವಾಗಲಿರುವ ಭಾರತ, ಪಾಕಿಸ್ತಾನ ಹಾಗೂ ಶ್ರೀಲಂಕಾ ನಡುವಿನ ಅಂಧರ ತ್ರಿಕೋನ ಸರಣಿಗೆ ಭಾರತ ತಂಡ ಪ್ರಕಟಿಸಲಾಗಿದೆ. ಕರ್ನಾಟಕದ ಸುನಿಲ್ ರಮೇಶ್ ಉಪನಾಯಕರಾಗಿ ಆಯ್ಕೆಯಾಗಿದ್ದು, ಆಂಧ್ರಪ್ರದೇಶದ ದುರ್ಗಾರಾವ್ ತಂಡ ಮುನ್ನಡೆಸಲಿದ್ದಾರೆ. 17 ಸದಸ್ಯರ ತಂಡದಲ್ಲಿ ರಾಜ್ಯದ ಮಗುಂತ್ ಸಾಯಿ, ಲೋಕೇಶ್ ಸ್ಥಾನ ಪಡೆದುಕೊಂಡಿದ್ದಾರೆ. ಫಿಫಾ ರ್‍ಯಾಂಕಿಂಗ್: 15 ಸ್ಥಾನ ಕುಸಿದ ಭಾರತ 117ನೇ ಸ್ಥಾನಕ್ಕೆ!
ನವದೆಹಲಿ: ಗುರುವಾರ ಪ್ರಕಟವಾಗಿರುವ ಫಿಫಾ ರ್‍ಯಾಂಕಿಂಗ್ ಪಟ್ಟಿಯಲ್ಲಿ ಭಾರತ 15 ಸ್ಥಾನ ಕುಸಿತ ಕಂಡಿದ್ದು, 117ನೇ ಸ್ಥಾನ ಪಡೆದುಕೊಂಡಿದೆ. ಎಎಫ್‌ಸಿ ಏಷ್ಯನ್ ಕಪ್ ಟೂರ್ನಿಯಲ್ಲಿ ಗುಂಪು ಹಂತದ ಮೂರು ಪಂದ್ಯಗಳಲ್ಲಿ ಸೋಲನುಭವಿಸಿದ ಭಾರತ, ಕಳೆದ 7 ವರ್ಷಗಳಲ್ಲಿ ಅತ್ಯಂತ ಕಳಪೆ ಮಟ್ಟಕ್ಕೆ ಕುಸಿದಿದೆ. ರ್‍ಯಾಂಕಿಂಗ್ ಪಟ್ಟಿಯಲ್ಲಿ ಹಾಲಿ ಫಿಫಾ ವಿಶ್ವಕಪ್ ಚಾಂಪಿಯನ್ ಅರ್ಜೆಟೀನಾ ಅಗ್ರಸ್ಥಾನದಲ್ಲಿದ್ದು, ಫ್ರಾನ್ಸ್, ಇಂಗ್ಲೆಂಡ್, ಬೆಲ್ಜಿಯಂ, ಬ್ರೆಜಿಲ್ ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ. ಏಷ್ಯಾದ ರಾಷ್ಟ್ರಗಳ ಪೈಕಿ ಭಾರತ 22ನೇ ಸ್ಥಾನ ಪಡೆದುಕೊಂಡಿದೆ.