ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಶ್ರೀರಾಮ್‌ ಜತೆ ರೋಹನ್‌ ಬೋಪಣ್ಣ ಕಣಕ್ಕೆ

| Published : Jun 05 2024, 12:30 AM IST

ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಶ್ರೀರಾಮ್‌ ಜತೆ ರೋಹನ್‌ ಬೋಪಣ್ಣ ಕಣಕ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಬಾಲಾಜಿ ಇತ್ತೀಚೆಗಷ್ಟೆ ಫ್ರೆಂಚ್‌ ಓಪನ್‌ನ ಪುರುಷರ ಡಬಲ್ಸ್‌ನಲ್ಲಿ ರೋಹನ್‌ ಬೋಪಣ್ಣ ಹಾಗೂ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಜೋಡಿ ವಿರುದ್ಧ ಸೋಲನುಭವಿಸಿ 3ನೇ ಸುತ್ತಿನಲ್ಲಿ ಸೋಲನುಭವಿಸಿದ್ದರು.

ನವದೆಹಲಿ: ಪ್ಯಾರಿಸ್‌ ಒಲಿಂಪಿಕ್ಸ್‌ ಪುರುಷರ ಡಬಲ್ಸ್‌ನಲ್ಲಿ ಕನ್ನಡಿಗ ರೋಹನ್‌ ಬೋಪಣ್ಣ ಅವರು ತಮಿಳುನಾಡಿನ ಶ್ರೀರಾಮ್‌ ಬಾಲಾಜಿ ಜೊತೆ ಕಣಕ್ಕಿಳಿಯಲಿದ್ದಾರೆ. ಒಲಿಂಪಿಕ್ಸ್‌ನಲ್ಲಿ ತಮ್ಮ ಸಹ ಆಟಗಾರನ ಆಯ್ಕೆ ಮಾಡಲು ಭಾರತೀಯ ಟೆನಿಸ್‌ ಸಂಸ್ಥೆ(ಎಐಟಿಎ) ಬೋಪಣ್ಣಗೆ ಅವಕಾಶ ನೀಡಿತ್ತು. ಬೋಪಣ್ಣ ಅವರ ಮುಂದೆ ಯೂಕಿ ಭಾಂಬ್ರಿ ಹಾಗೂ ಶ್ರೀರಾಮ್‌ ಬಾಲಾಜಿಯ ಆಯ್ಕೆಗಳಿದ್ದವು. ಬೋಪಣ್ಣ ಅವರು ಯೂಕಿ ಬದಲು ಬಾಲಾಜಿಯನ್ನು ಆಯ್ಕೆ ಮಾಡಿದ್ದಾರೆ.ಬಾಲಾಜಿ ಅವರು ಸದ್ಯ ನಡೆಯುತ್ತಿರುವ ಫ್ರೆಂಚ್‌ ಓಪನ್‌ನ ಪುರುಷರ ಡಬಲ್ಸ್‌ನಲ್ಲಿ 3ನೇ ಸುತ್ತಿನಲ್ಲಿ ಪರಾಭವಗೊಂಡಿದ್ದರು. ಮೆಕ್ಸಿಕೋದ ರೆಯಾಸ್‌ ವೆರೆಲಾ ಜೊತೆಗೂಡಿ ಕಣಕ್ಕಿಳಿದಿದ್ದ ಬಾಲಾಜಿ, ರೋಹನ್‌ ಬೋಪಣ್ಣ ಹಾಗೂ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಜೋಡಿ ವಿರುದ್ಧ ಸೋಲನುಭವಿಸಿದ್ದರು.2ನೇ ಸುತ್ತಿಗೆ ಲಕ್ಷ್ಯ ಸೇನ್‌

ಜಕಾರ್ತ: ಇಂಡೋನೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಲಕ್ಷ್ಯ ಸೇನ್‌, ಪ್ರಿಯಾನ್ಶು ರಾಜಾವತ್‌ 2ನೇ ಸುತ್ತಿಗೇರಿದ್ದಾರೆ. ಮಂಗಳವಾರ ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಸೇನ್‌, ಜಪಾನ್‌ನ ಕೆಂಟಾ ಸುನೆಯಮಾ ವಿರುದ್ಧ 21-12, 21-17ರಲ್ಲಿ ಗೆದ್ದರೆ, ಪ್ರಿಯಾನ್ಶು ಭಾರತದವರೇ ಆದ ಎಚ್‌.ಎಸ್‌.ಪ್ರಣಯ್‌ ವಿರುದ್ಧ 21-17, 21-12ರಲ್ಲಿ ಜಯಭೇರಿ ಬಾರಿಸಿದರು. ಮಹಿಳಾ ಡಬಲ್ಸ್‌ನಲ್ಲಿ ತ್ರೀಸಾ-ಗಾಯತ್ರಿ, ಮಿಶ್ರ ಡಬಲ್ಸ್‌ನಲ್ಲಿ ಸುಮಿತ್‌-ಸಿಕ್ಕಿ ರೆಡ್ಡಿ ದಂಪತಿ ಗೆದ್ದು 2ನೇ ಸುತ್ತಿಗೇರಿತು.