ಸಾರಾಂಶ
ಮೆಲ್ಬರ್ನ್: ಭಾರತದ ಹಿರಿಯ ಟೆನಿಸಿಗ ರೋಹನ್ ಬೋಪಣ್ಣರ ಅಭೂತಪೂರ್ವ ಗೆಲುವಿನ ಓಟ ಮುಂದುವರಿದಿದೆ. ಕರ್ನಾಟಕದ 43ರ ಬೋಪಣ್ಣ ಆಸ್ಟ್ರೇಲಿಯನ್ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್ ಟೂರ್ನಿಯ ಡಬಲ್ಸ್‌ನಲ್ಲಿ ಚೊಚ್ಚಲ ಬಾರಿ ಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಓಪನ್ ಯುಗದಲ್ಲಿ ಗ್ರ್ಯಾನ್‌ಸ್ಲಾಂ ಫೈನಲ್‌ಗೇರಿದ ಅತಿಹಿರಿಯ ಎನಿಸಿಕೊಂಡಿದ್ದಾರೆ.ಗುರುವಾರ ಪುರುಷರ ಡಬಲ್ಸ್ ಸೆಮಿಫೈನಲ್‌ನಲ್ಲಿ 2ನೇ ಶ್ರೇಯಾಂಕಿತ ಬೋಪಣ್ಣ-ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ ಜೋಡಿಯು ಚೀನಾದ ಝಾಂಗ್ ಝಿಝೆನ್-ಚೆಕ್ ಗಣರಾಜ್ಯದ ಥೋಮಸ್ ಮಚಾಕ್ ವಿರುದ್ಧ 6-3, 3-6, 7-6(10-7) ರೋಚಕ ಗೆಲುವು ಸಾಧಿಸಿತು. 2 ಗಂಟೆ 2 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಇಂಡೋ-ಆಸೀಸ್ ಜೋಡಿಗೆ ಭಾರೀ ಪೈಪೋಟಿ ಎದುರಾಯಿತಾದರೂ, ಟೈ ಬ್ರೇಕರ್‌ನಲ್ಲಿ ಅಸಾಧಾರಣ ಆಟ ಪ್ರದರ್ಶಿಸಿ ಪಂದ್ಯ ತನ್ನದಾಗಿಸಿಕೊಂಡಿತು.ಫೈನಲ್‌ನಲ್ಲಿ ಶನಿವಾರ ಈ ಜೋಡಿಗೆ ಫೈನಲ್‌ನಲ್ಲಿ ಇಟಲಿಯ ಸಿಮೋನ್ ಬೊಲೆಲ್ಲಿ-ಆ್ಯಂಡ್ರಿಯಾ ವಸಸ್ಸೊರಿ ಸವಾಲು ಎದುರಾಗಲಿದೆ.06ನೇ ಫೈನಲ್‌ಬೋಪಣ್ಣ ಗ್ರ್ಯಾನ್‌ಸ್ಲಾಂನಲ್ಲಿ 6ನೇ ಬಾರಿ ಫೈನಲ್ ಪ್ರವೇಶಿಸಿದರು. ಪುರುಷರ ಡಬಲ್ಸ್‌ನಲ್ಲಿ ಯುಎಸ್ ಓಪನ್‌ನಲ್ಲಿ 2 ಬಾರಿ(2010, 2013), ಮಿಶ್ರ ಡಬಲ್ಸ್‌ನಲ್ಲಿ ಆಸ್ಟ್ರೇಲಿಯನ್ ಓಪನ್‌ನಲ್ಲಿ 2(2018, 2023), ಫ್ರೆಂಚ್ ಓಪನ್‌ನಲ್ಲಿ 1 ಬಾರಿ(2017) ಫೈನಲ್‌ಗೇರಿದ್ದಾರೆ.-
ಚೊಚ್ಚಲ ಪ್ರಶಸ್ತಿ ಗುರಿಗ್ರ್ಯಾನ್‌ಸ್ಲಾಂ ಟೂರ್ನಿಯಲ್ಲಿ ಬೋಪಣ್ಣ ಪುರುಷರ ಡಬಲ್ಸ್‌ನಲ್ಲಿ ಚೊಚ್ಚಲ ಪ್ರಶಸ್ತಿ ನಿರೀಕ್ಷೆಯಲ್ಲಿದ್ದಾರೆ. ಮಿಶ್ರ ಡಬಲ್ಸ್‌ನಲ್ಲಿ ಅವರು 2017ರಲ್ಲಿ ಫ್ರೆಂಚ್ ಓಪನ್‌ನಲ್ಲಿ ಚಾಂಪಿಯನ್ ಆಗಿದ್ದಾರೆ. ಕೆನಡಾದ ಗ್ಯಾಬ್ರಿಯೆಲಾ ಡಬ್ರೊವೊಸ್ಕಿ ಜೊತೆಗೂಡಿ ಪ್ರಶಸ್ತಿ ಗೆದ್ದಿದ್ದರು.-ಹಾಲಿ ಚಾಂಪಿಯನ್‌ಸಬಲೆಂಕಾ ಫೈನಲ್ಗೆಹಾಲಿ ಚಾಂಪಿಯನ್ ಅರೈನಾ ಸಬಲೆಂಕಾ ಆಸ್ಟ್ರೇಲಿಯನ್ ಓಪನ್‌ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ. ಸೆಮಿಫೈನಲ್‌ನಲ್ಲಿ ಹಾಲಿ ಯುಎಸ್ ಓಪನ್ ಚಾಂಪಿಯನ್, ಅಮೆರಿಕದ ಕೊಕೊ ಗಾಫ್ ವಿರುದ್ಧ ಬೆಲಾರಸ್‌ನ ಸಬಲೆಂಕಾ 7-6(7/2), 6-4 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಈ ಮೂಲಕ ಸೆರೆನಾ ವಿಲಿಯಮ್ಸ್ ಬಳಿಕ ಟೂರ್ನಿಯಲ್ಲಿ ಸತತ 2ನೇ ಬಾರಿ ಫೈನಲ್‌ಗೇರಿದ ಮೊದಲ ಆಟಗಾರ್ತಿ ಎನಿಸಿಕೊಂಡರು. ಸೆರೆನಾ 2015, 2016, 2017ರಲ್ಲಿ ಸತತವಾಗಿ ಪ್ರಶಸ್ತಿ ಸುತ್ತಿಗೇರಿದ್ದರು. ಟೂರ್ನಿಯಲ್ಲಿ ಒಂದೂ ಸೆಟ್ ಸೋಲದೆ ಫೈನಲ್‌ಗೇರಿರುವ ವಿಶ್ವ ನಂ.2 ಸಬಲೆಂಕಾ, ಶನಿವಾರ ಪ್ರಶಸ್ತಿಗಾಗಿ 12ನೇ ಶ್ರೇಯಾಂಕಿತೆ ಚೀನಾದ ಕಿನ್ವಿನ್ ಝೆಂಗ್ ವಿರುದ್ಧ ಸೆಣಸಾಡಲಿದ್ದಾರೆ.