ಸಾರಾಂಶ
Chess: Pragyananda overtaking Anand is now India''s No.1
ಭಾರತದ ಯುವ ಚೆಸ್ ತಾರೆ ಆರ್.ಪ್ರಜ್ಞಾನಂದ ವಿಶ್ವ ಚಾಂಪಿಯನ್ ಡಿಂಗ್ ಲಿರೆನ್ ವಿರುದ್ಧ ಗೆಲುವು ಸಾಧಿಸಿದ್ದು, ಈ ಮೂಲಕ ದಿಗ್ಗಜ ಚೆಸ್ ಪಟು ವಿಶ್ವನಾಥನ್ ಆನಂದ್‌ರನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದರುಆಮ್ಸ್ಟೆರ್ಡಾಮ್(ನೆದರ್‌ಲೆಂಡ್ಸ್): ಭಾರತದ ಯುವ ಚೆಸ್ ತಾರೆ ಆರ್.ಪ್ರಜ್ಞಾನಂದ ತಮ್ಮ ಅಭೂತಪೂರ್ವ ಪ್ರದರ್ಶನ ಮುಂದುವರಿಸಿದ್ದು, ಮಂಗಳವಾರ ರಾತ್ರಿ ಹಾಲಿ ವಿಶ್ವ ಚಾಂಪಿಯನ್, ಚೀನಾದ ಡಿಂಗ್ ಲಿರೆನ್‌ರನ್ನು ಟಾಟಾ ಸ್ಟೀಲ್ ಚೆಸ್ ಮಾಸ್ಟರ್ಸ್ ಟೂರ್ನಿಯಲ್ಲಿ ಮಣಿಸುವ ಮೂಲಕ ಫಿಡೆ ಲೈವ್ ರ್‍ಯಾಂಕಿಂಗ್‌ನಲ್ಲಿ ಭಾರತದ ನಂ.1 ಆಗಿ ಹೊರಹೊಮ್ಮಿದ್ದಾರೆ.18ರ ಪ್ರಜ್ಞಾನಂದ ಟೂರ್ನಿಯ 4ನೇ ಸುತ್ತಿನಲ್ಲಿ ಲಿರೆನ್ ವಿರುದ್ಧ ಜಯಗಳಿಸಿದರು. ಈ ಮೂಲಕ ದಿಗ್ಗಜ ಚೆಸ್ ಪಟು ವಿಶ್ವನಾಥನ್ ಆನಂದ್‌ರನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೇರಿದರು. ಸದ್ಯ ಪ್ರಜ್ಞಾನಂದ 2748.3, ವಿಶ್ವನಾಥನ್ 2748 ಅಂಕ ಹೊಂದಿದ್ದಾರೆ. ಅಲ್ಲದೆ ಕ್ಲಾಸಿಕಲ್ ವಿಭಾಗದಲ್ಲಿ ಹಾಲಿ ವಿಶ್ವ ಚಾಂಪಿಯನ್‌ನ್ನು ಮಣಿಸಿದ 2ನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಮೊದಲು ವಿಶ್ವನಾಥನ್ ಕೂಡಾ ಈ ಸಾಧನೆ ಮಾಡಿದ್ದರು. ಸದ್ಯ ಟೂರ್ನಿಯಲ್ಲಿ ಪ್ರಜ್ಞಾನಂದ 2.5 ಅಂಕಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ. ಒಟ್ಟು 13 ಸುತ್ತಿನ ಪಂದ್ಯಗಳು ನಡೆಯಲಿವೆ.