ಸೂರ್ಯಕುಮಾರ್‌ ಯಾದವ್‌ಗೆ ಟಿ20 ತಂಡದ ನಾಯಕನ ಸ್ಥಾನ ನೀಡಿದ್ದೇಕೆ? : 3 ಕಾರಣ ಕೊಟ್ಟ ಅಗರ್ಕರ್‌

| Published : Jul 23 2024, 12:42 AM IST / Updated: Jul 23 2024, 04:55 AM IST

ಸಾರಾಂಶ

ಸೂರ್ಯಕುಮಾರ್‌ ಯಾದವ್‌ಗೆ ಟಿ20 ತಂಡದ ನಾಯಕನ ಸ್ಥಾನ ನೀಡಿದ್ದೇಕೆ? ಹಾರ್ದಿಕ್‌ ಪಾಂಡ್ಯಗೆ ನಾಯಕತ್ವ ಕೈತಪ್ಪಿದ್ದೇಕೆ. ಕಾರಣ ಬಿಚ್ಚಿಟ್ರು ಪ್ರಧಾನ ಆಯ್ಕೆಗಾರ ಅಜಿತ್‌ ಅಗರ್ಕರ್‌.

ಮುಂಬೈ: ಟಿ20 ತಂಡಕ್ಕೆ ಹಾರ್ದಿಕ್‌ ಪಾಂಡ್ಯ ಬದಲು ಸೂರ್ಯಕುಮಾರ್‌ ಯಾದವ್‌ರನ್ನು ನಾಯಕನನ್ನಾಗಿ ನೇಮಿಸಿದ್ದಕ್ಕೆ ಪ್ರಧಾನ ಆಯ್ಕೆಗಾರ ಅಜಿತ್‌ ಅಗರ್ಕರ್‌ 3 ಕಾರಣಗಳನ್ನು ನೀಡಿದ್ದಾರೆ. ಬಹಳಷ್ಟು ಚರ್ಚೆ, ಲೆಕ್ಕಾಚಾರದೊಂದಿಗೆ ಹಾರ್ದಿಕ್‌ಗೆ ನಾಯಕತ್ವ ನೀಡದಿರಲು ನಿರ್ಧರಿಸಲಾಯಿತು ಎಂದು ಅಗರ್ಕರ್‌ ತಿಳಿಸಿದರು.

ಕಾರಣ 1: ಹಾರ್ದಿಕ್‌ ಪದೇಪದೇ ಫಿಟ್ನೆಸ್‌ ಸಮಸ್ಯೆ ಎದುರಿಸುತ್ತಾರೆ. ಸೂರ್ಯ ಫಿಟ್‌ ಇದ್ದಾರೆ.ಕಾರಣ 2: ಡ್ರೆಸ್ಸಿಂಗ್‌ ರೂಂನ ಅಭಿಪ್ರಾಯ ಸಂಗ್ರಹಿಸಲಾಗಿದೆ. ಬಹುತೇಕ ಆಟಗಾರರು ಸೂರ್ಯ ಪರವಾಗಿ ಪ್ರತಿಕ್ರಿಯಿಸಿದ್ದಾರೆ.

ಕಾರಣ 3: ಈ ಹಿಂದೆ ಹಲವು ಬಾರಿ ಹಾರ್ದಿಕ್‌ ವೈಯಕ್ತಿಕ ಕಾರಣಗಳನ್ನು ನೀಡಿ ಆಯ್ಕೆಗೆ ಲಭ್ಯರಿರಲಿಲ್ಲ. ನಾಯಕನಾದವನು ಎಲ್ಲಾ ಪಂದ್ಯಗಳನ್ನು ಆಡಬೇಕು ಎನ್ನುವುದನ್ನು ಆಯ್ಕೆ ಸಮಿತಿ ನಿರೀಕ್ಷಿಸುತ್ತದೆ. ಜೊತೆಗೆ ಸೂರ್ಯರನ್ನು ಕೇವಲ ಟಿ20ಗಷ್ಟೇ ಪರಿಗಣಿಸಲಾಗಿದ್ದು, ಏಕದಿನ ಹಾಗೂ ಟೆಸ್ಟ್‌ಗೆ ಆಯ್ಕೆ ಸದ್ಯಕ್ಕಿಲ್ಲ. ಹೀಗಾಗಿ, ಸೂರ್ಯ ಎಲ್ಲಾ ಪಂದ್ಯಗಳಲ್ಲೂ ಆಡಲಿದ್ದಾರೆ ಎನ್ನುವ ಕಾರಣಕ್ಕೆ ಅವರನ್ನು ನಾಯಕನನ್ನಾಗಿ ನೇಮಿಸಲಾಗಿದೆ.