ಕನ್ನಡದಲ್ಲೇ ಮಾತನಾಡಿದ ವಿರಾಟ್‌ ಕೊಹ್ಲಿ: ಅಭಿಮಾನಿಗಳು ಫುಲ್‌ ಖುಷ್‌

| Published : Mar 20 2024, 01:21 AM IST / Updated: Mar 20 2024, 08:21 AM IST

ಕನ್ನಡದಲ್ಲೇ ಮಾತನಾಡಿದ ವಿರಾಟ್‌ ಕೊಹ್ಲಿ: ಅಭಿಮಾನಿಗಳು ಫುಲ್‌ ಖುಷ್‌
Share this Article
  • FB
  • TW
  • Linkdin
  • Email

ಸಾರಾಂಶ

‘ಇದು ಆರ್‌ಸಿಬಿಯ ಹೊಸ ಅಧ್ಯಾಯ’ ಎಂದು ಕೊಹ್ಲಿ ಹೇಳುತ್ತಿದ್ದಂತೆಯೇ ನೆರೆದಿದ್ದ ಅಪಾರ ಪ್ರಮಾಣದ ಅಭಿಮಾನಿಳು ಸಂಭ್ರಮದ ಅಲೆಯಲ್ಲಿ ತೇಲಿದರು. ಕೊಹ್ಲಿ, ಕೊಹ್ಲಿ ಎಂದು ಜೋರಾಗಿ ಕೂಗಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಮಂಗಳವಾರ ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ‘ಆರ್‌ಸಿಬಿ ಅನ್‌ಬಾಕ್ಸ್‌’ ಕಾರ್ಯಕ್ರಮದಲ್ಲಿ ಫ್ರಾಂಚೈಸಿಯು ತನ್ನ ಹೆಸರಲ್ಲಿರುವ Bangalore ಅನ್ನು Bengaluru ಎಂದು ಅಧಿಕೃತವಾಗಿ ಬದಲಾಯಿಸಿತು. 

ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ತಂಡದ ದಿಗ್ಗಜ ಆಟಗಾರ ವಿರಾಟ್‌ ಕೊಹ್ಲಿ ಕನ್ನಡದಲ್ಲೇ ಮಾತನಾಡಿ ನೆರೆದಿದ್ದ ಅಪಾರ ಪ್ರಮಾಣದ ಅಭಿಮಾನಿಗಳನ್ನು ಸಂಭ್ರಮದ ಅಲೆಯಲ್ಲಿ ತೇಲುವಂತೆ ಮಾಡಿದರು.

ಕಾರ್ಯಕ್ರಮದಲ್ಲಿ ಆರ್‌ಸಿಬಿಯ ಹೊಸ ಜೆರ್ಸಿ, ಲೋಗೋ ಅನಾವರಣ ಮಾಡಲಾಯಿತು. ನಾರ್ವೆಯ ಸಂಗೀತ ಕಲಾವಿದ ಅಲಾನ್‌ ವಾಕರ್‌, ರಘು ದೀಕ್ಷಿತ್‌ ಸೇರಿದಂತೆ ಪ್ರಮುಖರು ಪ್ರದರ್ಶನ ನೀಡಿದರು. 

ಈ ವೇಳೆ ಮಾತನಾಡಿದ ಕೊಹ್ಲಿ, ‘ಇದು ಆರ್‌ಸಿಬಿಯ ಹೊಸ ಅಧ್ಯಾಯ’ ಎಂದರು. ಇದು ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಯಿತು. ಸಮಾರಂಭಕ್ಕೂ ಮುನ್ನ ವಿರಾಟ್‌ ಕೊಹ್ಲಿ ಸೇರಿದಂತೆ ಎಲ್ಲಾ ಆಟಗಾರರು ಕೆಲ ಗಂಟೆಗಳ ಕಾಲ ನೆಟ್ಸ್‌ ಅಭ್ಯಾಸ ನಡೆಸಿದರು.

ವಿನಯ್‌ಗೆ ಹಾಲ್‌ ಆಫ್‌ ಫೇಮ್: ಆರ್‌ಸಿಬಿಯ ಮಾಜಿ ಆಟಗಾರ, ಕರ್ನಾಟಕದ ವಿನಯ್‌ ಕುಮಾರ್‌ ಅನ್‌ಬಾಕ್ಸ್‌ ಕಾರ್ಯಕ್ರಮದಲ್ಲಿ ಹಾಲ್‌ ಆಫ್‌ ಫೇಮ್‌ ಗೌರವಕ್ಕೆ ಭಾಜನರಾದರು. ಕಳೆದ ವರ್ಷ ತಂಡದ ಇಬ್ಬರು ದಿಗ್ಗಜ ಆಟಗಾರರಾದ ಕ್ರಿಸ್‌ ಗೇಲ್‌ ಹಾಗೂ ಎ ಬಿಡಿ ವಿಲಿಯರ್ಸ್‌ ಹಾಲ್‌ ಆಫ್‌ ಫೇಮ್‌ ಗೌರವಕ್ಕೆ ಪಾತ್ರರಾಗಿದ್ದರು.