ಐಪಿಎಲ್‌ ಪಂದ್ಯ ಎತ್ತಂಗಡಿ ಆಗಲು ಬಿಡಲ್ಲ. ಪುನಃ ದುರ್ಘಟನೆ ಆಗದಂತೆ ಎಚ್ಚರ. ಕಳೆದ ಬಾರಿಯ ಐಪಿಎಲ್‌ ಟೂರ್ನಿಯನ್ನು ಆರ್‌ಸಿಬಿ ಗೆದ್ದಿತ್ತು. ಬಳಿಕ ನಡೆದ ವಿಜಯೋತ್ಸವ ವೇಳೆ ಭಾರಿ ಕಾಲ್ತುಳಿತ, 11 ಬಲಿ. ಹೀಗಾಗಿ ಚಿನ್ನಸ್ವಾಮಿಯಲ್ಲಿ ಇತ್ತೀಚೆಗೆ ಪಂದ್ಯ ನಡೆದಿರಲಿಲ್ಲ

ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಪಂದ್ಯಗಳನ್ನು ನಡೆಸುವ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸುಳಿವು ನೀಡಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಆಜೀವ ಸದಸ್ಯರಾಗಿರುವ ಶಿವಕುಮಾರ್‌ ಅವರು, ಭಾನುವಾರ ನಡೆದ ಕೆಎಸ್‌ಸಿಎ ಪದಾಧಿಕಾರಿಗಳ ಚುನಾವಣೆಯಲ್ಲಿ ಮತ ಚಲಾಯಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು.

ಐಪಿಎಲ್‌ ಬೆಂಗಳೂರಿಂದ ಸ್ಥಳಾಂತರ ಆಗಲು ಬಿಡುವುದಿಲ್ಲ

‘ಐಪಿಎಲ್‌ ಬೆಂಗಳೂರಿಂದ ಸ್ಥಳಾಂತರ ಆಗಲು ಬಿಡುವುದಿಲ್ಲ. ಇದು ಕರ್ನಾಟಕ ಹಾಗೂ ಬೆಂಗಳೂರಿನ ಗೌರವದ ವಿಚಾರ. ಮುಂದಿನ ಐಪಿಎಲ್ ಪಂದ್ಯಗಳನ್ನು ಇಲ್ಲೇ ನಡೆಸುವಂತೆ ಕ್ರಮ ಕೈಗೊಳ್ಳುತ್ತೇವೆ. ನಾನು ಕ್ರಿಕೆಟ್ ಅಭಿಮಾನಿ. ಕಾನೂನು ಚೌಕಟ್ಟಿನಲ್ಲಿ ಜನದಟ್ಟಣೆ ನಿಭಾಯಿಸಿಕೊಂಡು ಕ್ರೀಡಾಂಗಣ ಬೆಳೆಸಲಾಗುವುದು’ ಎಂದು ಶಿವಕುಮಾರ್‌ ತಿಳಿಸಿದರು.

ಪ್ರತಿಷ್ಠಿತ ಟೂರ್ನಿಗಳ ಪಂದ್ಯ ನಡೆದಿಲ್ಲ

ಕಳೆದ ಜೂ.4ರಂದು ಆರ್‌ಸಿಬಿ ಟ್ರೋಫಿ ಗೆಲುವಿನ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತ ಘಟನೆ ಬಳಿಕ ಕ್ರೀಡಾಂಗಣದಲ್ಲಿ ಯಾವುದೇ ಪ್ರತಿಷ್ಠಿತ ಟೂರ್ನಿಗಳ ಪಂದ್ಯ ನಡೆದಿಲ್ಲ. ಕಾಲ್ತುಳಿತದಲ್ಲಿ 11 ಜನ ಬಲಿಯಾಗಿದ್ದರು.- ಐಪಿಎಲ್‌ ಪಂದ್ಯ ಎತ್ತಂಗಡಿ ಆಗಲು ಬಿಡಲ್ಲ- ಪುನಃ ದುರ್ಘಟನೆ ಆಗದಂತೆ ಎಚ್ಚರ: ಡಿಸಿಎಂ- ಕಳೆದ ಬಾರಿಯ ಐಪಿಎಲ್‌ ಟೂರ್ನಿಯನ್ನು ಆರ್‌ಸಿಬಿ ಗೆದ್ದಿತ್ತು- ಬಳಿಕ ನಡೆದ ವಿಜಯೋತ್ಸವ ವೇಳೆ ಭಾರಿ ಕಾಲ್ತುಳಿತ, 11 ಬಲಿ- ಹೀಗಾಗಿ ಚಿನ್ನಸ್ವಾಮಿಯಲ್ಲಿ ಇತ್ತೀಚೆಗೆ ಪಂದ್ಯ ನಡೆದಿರಲಿಲ್ಲ- ಮುಂದಿನ ಐಪಿಎಲ್‌ ಚಿನ್ನಸ್ವಾಮಿಯಲ್ಲಿ ನಡೆವುದು ಡೌಟ್ ಇತ್ತು- ಈ ಅನುಮಾಣಕ್ಕೆ ತೆರೆ ಎಳೆಯುಲು ಈಗ ಡಿಕೆಶಿ ಯತ್ನ