ಎಡಗೈ ಮುರಿದಿದ್ದರೂ ಡೈಮಂಡ್‌ ಲೀಗ್‌ ಫೈನಲ್ಸ್‌ನಲ್ಲಿ ನೀರಜ್‌ ಚೋಪ್ರಾ ರನ್ನರ್‌-ಅಪ್‌

| Published : Sep 16 2024, 01:57 AM IST / Updated: Sep 16 2024, 04:24 AM IST

ಸಾರಾಂಶ

ಸತತ 2ನೇ ಬಾರಿಗೆ ಡೈಮಂಡ್‌ ಲೀಗ್‌ನಲ್ಲಿ ನೀರಜ್‌ ಚೋಪ್ರಾ ರನ್ನರ್‌-ಅಪ್‌. ಗಾಯದ ನಡುವೆಯೂ 87.86 ಮೀ. ದೂರಕ್ಕೆ ಜಾವೆಲಿನ್‌ ಎಸೆದ ಡಬಲ್‌ ಒಲಿಂಪಿಕ್‌ ಪದಕ ವಿಜೇತ.

ಬ್ರುಸ್ಸೆಲ್ಸ್‌ (ಬೆಲ್ಜಿಯಂ): ಎರಡು ಬಾರಿ ಒಲಿಂಪಿಕ್‌ ಪದಕ ವಿಜೇತ ಭಾರತದ ತಾರಾ ಅಥ್ಲೀಟ್‌ ನೀರಜ್‌ ಚೋಪ್ರಾ, ಋತು ಅಂತ್ಯದ ಡೈಮಂಡ್‌ ಲೀಗ್‌ ಫೈನಲ್ಸ್‌ ಕೂಟದಲ್ಲಿ ಗಾಯದ ನಡುವೆಯೂ ಸ್ಪರ್ಧಿಸಿ 2ನೇ ಸ್ಥಾನ ಪಡೆದಿದ್ದಾರೆ.

ಶನಿವಾರ ಮಧ್ಯರಾತ್ರಿ ನಡೆದ ಸ್ಪರ್ಧೆಯಲ್ಲಿ 87.86 ಮೀ. ದೂರಕ್ಕೆ ಜಾವೆಲಿನ್‌ ಎಸೆದು ಸತತ 2ನೇ ವರ್ಷ ರನ್ನರ್‌-ಅಪ್‌ ಸ್ಥಾನ ಪಡೆದ ನೀರಜ್‌, ಭಾನುವಾರ ತಮ್ಮ ‘ಎಕ್ಸ್‌’(ಟ್ವೀಟರ್‌) ಖಾತೆಯಲ್ಲಿ ಗಾಯದ ವಿಷಯ ಬಹಿರಂಗಪಡಿಸಿದ್ದಾರೆ. ‘ಸೋಮವಾರ ಅಭ್ಯಾಸದ ವೇಳೆ ಎಡಗೈ ಮುರಿತಕ್ಕೊಳಗಾಗಿದ್ದೆ. ತೀವ್ರ ನೋವಿನ ನಡುವೆಯೇ ಸ್ಪರ್ಧಿಸಿದೆ. ನಿರೀಕ್ಷಿತ ಪ್ರದರ್ಶನ ತೋರಲು ಸಾಧ್ಯವಾಗಲಿಲ್ಲ’ ಎಂದು ನೀರಜ್‌ ಕೈ ಮುರಿದಿರುವುದನ್ನು ತೋರಿಸುತ್ತಿರುವ ಎಕ್ಸ್‌-ರೇ ಸಮೇತ ಟ್ವೀಟ್‌ ಮಾಡಿದ್ದಾರೆ.