900 ಗೋಲುಗಳ ಮೈಲುಗಲ್ಲು : ಫುಟ್ಬಾಲ್‌ ಜಗತ್ತಿನಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಹೊಸ ದಾಖಲೆ

| Published : Sep 07 2024, 01:36 AM IST / Updated: Sep 07 2024, 03:58 AM IST

ಸಾರಾಂಶ

ಫುಟ್ಬಾಲ್‌ನಲ್ಲಿ 900 ಗೋಲುಗಳ ಮೈಲುಗಲ್ಲು ಸಾಧಿಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಲಿಯೋನೆಲ್‌ ಮೆಸ್ಸಿ 842 ಗೋಲು ಬಾರಿಸಿ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.

ಲಿಸ್ಬನ್‌(ಪೋರ್ಚುಗಲ್‌): ಪೋರ್ಚುಗಲ್‌ನ ದಿಗ್ಗಜ ಫುಟ್ಬಾಲ್‌ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಮತ್ತೊಂದು ದಾಖಲೆ ಬರೆದಿದ್ದಾರೆ. ಅವರು ಫುಟ್ಬಾಲ್‌ನಲ್ಲಿ 900 ಗೋಲುಗಳ ಮೈಲುಗಲ್ಲು ಸಾಧಿಸಿದ ವಿಶ್ವದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. 

ಗುರುವಾರ ಲಿಸ್ಬನ್‌ನಲ್ಲಿ ನಡೆದ ಯುಇಎಫ್‌ಎ ನೇಷನ್ಸ್‌ ಲೀಗ್‌ ಫೂಟ್ಬಾಲ್‌ ಟೂರ್ನಿಯಲ್ಲಿ ಕ್ರೊವೇಷಿಯಾ ವಿರುದ್ಧ ಗೋಲು ಬಾರಿಸಿ ಈ ಸಾಧನೆ ಮಾಡಿದರು. ಅರ್ಜೆಂಟೀನಾದ ಲಿಯೋನೆಲ್‌ ಮೆಸ್ಸಿ 842 ಗೋಲು ಬಾರಿಸಿ ಈ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ. 

2003ರಲ್ಲಿ ಪೋರ್ಚುಗಲ್‌ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ರೊನಾಲ್ಡೊ ಈವರೆಗೂ 131 ಗೋಲು ಬಾರಿಸಿದ್ದಾರೆ. 2009ರಿಂದ 2018ರ ವರೆಗೆ ಲಾ ಲಿಗಾ ಲೀಗ್‌ನ ರಿಯಲ್‌ ಮ್ಯಾಡ್ರಿಡ್‌ ತಂಡದಲ್ಲಿದ್ದ ಅವರು, 311 ಗೋಲು ಹೊಡೆದಿದ್ದಾರೆ. ಮ್ಯಾಂಚೆಸ್ಟರ್‌ ಯುನೈಟೆಡ್‌ ಪರ 84, ಜುವೆಂಟಸ್‌ ಪರ 81 ಗೋಲು ಬಾರಿಸಿರುವ 39 ವರ್ಷದ ರೊನಾಲ್ಡೊ ಸದ್ಯ ಸೌದಿ ಅರೇಬಿಯಾದ ಅಲ್ ನಸ್ರ್‌ ತಂಡದ ಪರ ಆಡುತ್ತಿದ್ದಾರೆ.

ಸ್ಕಾಟ್ಲೆಂಡ್‌ ವಿರುದ್ಧ ಟಿ20 ಸರಣಿ ಗೆದ್ದ ಆಸ್ಟ್ರೇಲಿಯಾ

ಎಡಿನ್‌ಬರ್ಗ್‌(ಸ್ಕಾಟ್ಲೆಂಡ್‌): ಸ್ಕಾಟ್ಲೆಂಡ್‌ ವಿರುದ್ಧ 2ನೇ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ 70 ರನ್‌ ಗೆಲುವು ಸಾಧಿಸಿದ್ದು, 3 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಕೈವಶಪಡಿಸಿಕೊಂಡಿದೆ. ಶುಕ್ರವಾರದ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲು ಬ್ಯಾಟ್‌ ಮಾಡಿ 4 ವಿಕೆಟ್‌ಗೆ 196 ರನ್ ಕಲೆಹಾಕಿತು. ಜೋಸ್‌ ಇಂಗ್ಲಿಷ್‌ 103 ರನ್‌ ಗಳಿಸಿದರು. ದೊಡ್ಡ ಗುರಿ ಬೆನ್ನತ್ತಿದ ಸ್ಕಾಟ್ಲೆಂಡ್‌ 16.4 ಓವರ್‌ಗಳಲ್ಲಿ 126ಕ್ಕೆ ಆಲೌಟಾಯಿತು.