ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ: ಭಾರತಕ್ಕೆ ಸತತ 2ನೇ ಜಯ

| Published : Nov 13 2024, 12:49 AM IST

ಸಾರಾಂಶ

ಕೊರಿಯಾ ವಿರುದ್ಧ ಭಾರತಕ್ಕೆ 3-2 ಗೋಲುಗಳ ರೋಚಕ ಗೆಲುವು. ಸತತ 2ನೇ ಜಯದೊಂದಿಗೆ ಅಜೇಯ ಓಟ ಮುಂದುವರಿಸಿದ ಭಾರತ ತಂಡ.

ರಾಜ್ಗಿರ್‌ (ಬಿಹಾರ): ಪಂದ್ಯ ಮುಕ್ತಾಯಗೊಳ್ಳಲು 3 ನಿಮಿಷ ಬಾಕಿ ಇದ್ದಾಗ ಸಿಕ್ಕ ಪೆನಾಲ್ಟಿ ಸ್ಟ್ರೋಕ್‌ ಅವಕಾಶದಲ್ಲಿ ಗೋಲು ಬಾರಿಸಿದ ಸ್ಟ್ರೈಕರ್‌ ದೀಪಿಕಾ, ಮಹಿಳೆಯರ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಭಾರತ 3-2ರಲ್ಲಿ ಗೆಲ್ಲಲು ನೆರವಾದರು. ಇದರೊಂದಿಗೆ ಭಾರತ ಸತತ 2ನೇ ಗೆಲುವು ದಾಖಲಿಸಿತು.

ಮೊದಲ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ಗೆದ್ದಿದ್ದ ಭಾರತ, ಮಂಗಳವಾರ ಮೊದಲಾರ್ಧದಲ್ಲೇ 2-0 ಮುನ್ನಡೆ ಪಡೆಯಿತು. 3ನೇ ನಿಮಿಷದಲ್ಲಿ ಸಂಗೀತಾ ಕುಮಾರಿ ಹಾಗೂ 20ನೇ ನಿಮಿಷದಲ್ಲಿ ದೀಪಿಕಾ ಗೋಲು ಬಾರಿಸಿ ಆರಂಭಿಕ ಮುನ್ನಡೆ ಒದಗಿಸಿದರು. ಆದರೆ ಕೊರಿಯಾ 34, 38ನೇ ನಿಮಿಷಗಳಲ್ಲಿ ಗೋಲು ಬಾರಿಸಿ ಸಮಬಲ ಸಾಧಿಸಿತು. 57ನೇ ನಿಮಿಷದಲ್ಲಿ ದೀಪಿಕಾ ಬಾರಿಸಿದ ಗೋಲು, ಭಾರತದ ಗೆಲುವನ್ನು ಖಚಿತಪಡಿಸಿತು.

ಭಾರತ ತನ್ನ 3ನೇ ಪಂದ್ಯವನ್ನು ಗುರುವಾರ ಥಾಯ್ಲೆಂಡ್‌ ವಿರುದ್ಧ ಆಡಲಿದೆ.