ಸಾರಾಂಶ
3000 ಮೀ. ಸ್ಟೀಪಲ್ ಚೇಸ್‌ನಲ್ಲಿ 9ನೇ ಸ್ಥಾನ ಪಡೆದ ಭಾರತದ ಅವಿನಾಶ್ ಸಾಬ್ಳೆ. ಮೊದಲ ಬಾರಿಗೆ ಡೈಮಂಡ್ ಲೀಗ್ ಫೈನಲ್ಸ್‌ನಲ್ಲಿ ಸ್ಪರ್ಧಿಸಿದ್ದ ಸಾಬ್ಳೆ.
ಬ್ರುಸೆಲ್ಸ್ (ಬೆಲ್ಜಿಯಂ): 3000 ಮೀ. ಸ್ಟೀಪಲ್ ಚೇಸ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಭಾರತದ ಅವಿನಾಶ್ ಸಾಬ್ಳೆ, ಡೈಮಂಡ್ ಲೀಗ್ ಫೈನಲ್ಸ್‌ನಲ್ಲಿ 9ನೇ ಸ್ಥಾನ ಪಡೆದಿದ್ದಾರೆ.
ಶುಕ್ರವಾರ ಮಧ್ಯರಾತ್ರಿ ನಡೆದ ಸ್ಪರ್ಧೆಯಲ್ಲಿ ಸಾಬ್ಳೆ, 8 ನಿಮಿಷ 17.09 ಸೆಕೆಂಡ್‌ಗಳಲ್ಲಿ ಗುರಿ ತಲುಪಿ, 10 ಜನ ಸ್ಪರ್ಧಿಗಳ ಪೈಕಿ 9ನೇ ಸ್ಥಾನ ಪಡೆದರು. ಕೀನ್ಯಾದ ಅಮೊಸ್ ಸೆರೆಮ್ 8 ನಿಮಿಷ 6.90 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಡೈಮಂಡ್ ಲೀಗ್ ಚಾಂಪಿಯನ್ ಆಗಿ ಹೊರಹೊಮ್ಮಿದರು.