ಏಷ್ಯಾಕಪ್‌ ಟಿ 20: ಇಂದು ನೇಪಾಳ ಸವಾಲು ಗೆದ್ದು ಸೆಮಿಫೈನಲ್‌ ಪ್ರವೇಶಿಸಲು ಭಾರತ ಕಾತರ

| Published : Jul 23 2024, 12:41 AM IST / Updated: Jul 23 2024, 04:56 AM IST

ಸಾರಾಂಶ

ಮಹಿಳಾ ಏಷ್ಯಾಕಪ್‌ನಲ್ಲಿ ಟೀಂ ಇಂಡಿಯಾಗೆ ಇಂದು ನೇಪಾಳ ಸವಾಲು. ಸೆಮಿಫೈನಲ್‌ ಸ್ಥಾನದ ಮೇಲೆ ಕಣ್ಣಿಟ್ಟಿದೆ ಹರ್ಮನ್‌ಪ್ರೀತ್‌ ಕೌರ್‌ ಪಡೆ.

ದಾಂಬುಲಾ: ಸತತ 2 ಗೆಲುವುಗಳೊಂದಿಗೆ ಮಹಿಳಾ ಏಷ್ಯಾಕಪ್‌ ಟಿ20 ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಿರುವ ಹಾಲಿ ಚಾಂಪಿಯನ್‌, ಗುಂಪು ಹಂತದ 3ನೇ ಹಾಗೂ ಕೊನೆಯ ಪಂದ್ಯದಲ್ಲಿ ಮಂಗಳವಾರ ನೇಪಾಳ ವಿರುದ್ಧ ಸೆಣಸಲಿದೆ. ತಂಡ ಈಗಾಗಲೇ ಸೆಮಿಫೈನಲ್‌ ಪ್ರವೇಶವನ್ನು ಬಹುತೇಕ ಖಚಿತಪಡಿಸಿಕೊಂಡಿದ್ದರೂ, ಈ ಪಂದ್ಯದಲ್ಲೂ ಜಯಿಸಿ ಅಧಿಕೃತವಾಗಿ ಅಂತಿಮ-4ರ ಸುತ್ತಿಗೇರಲು ಎದುರು ನೋಡುತ್ತಿದೆ. 

ಮೊದಲ ಪಂದ್ಯದಲ್ಲಿ ಯುಎಇ ವಿರುದ್ಧ ಗೆದ್ದಿದ್ದ ನೇಪಾಳ, 2ನೇ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಶರಣಾಗಿತ್ತು. ಈ ಪಂದ್ಯದಲ್ಲಿ ಭಾರತಕ್ಕೆ ಆಘಾತ ನೀಡಿದರೆ, ತಂಡ ಸೆಮೀಸ್‌ಗೇರುವ ಸಾಧ್ಯತೆ ಇರಲಿದೆ. ಪಂದ್ಯ: ಸಂಜೆ 7ಕ್ಕೆ, ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

---ಶ್ರೀಲಂಕಾ, ಬಾಂಗ್ಲಾದೇಶಕ್ಕೆ ಗೆಲುವುದಾಂಬುಲಾ: ಮಹಿಳಾ ಏಷ್ಯಾಕಪ್‌ ಟಿ20 ಟೂರ್ನಿಯಲ್ಲಿ ಸೋಮವಾರ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳು ಜಯ ಸಾಧಿಸಿ, ಸೆಮಿಫೈನಲ್‌ ಹೊಸ್ತಿಲು ತಲುಪಿದವು. ‘ಬಿ’ ಗುಂಪಿನ ಪಂದ್ಯದಲ್ಲಿ ಮಲೇಷ್ಯಾ ವಿರುದ್ಧ ಶ್ರೀಲಂಕಾ 114 ರನ್‌ಗಳ ಗೆಲುವು ಪಡೆದರೆ, ಥಾಯ್ಲೆಂಡನ್ನು ಬಾಂಗ್ಲಾ 7 ವಿಕೆಟ್‌ಗಳಿಂದ ಸೋಲಿಸಿತು. ಲಂಕಾ 4 ವಿಕೆಟ್‌ಗೆ 184 ರನ್‌ ಗಳಿಸಿತು. ಚಾಮರಿ ಅಟಪಟ್ಟು (119*) ಮಹಿಳಾ ಏಷ್ಯಾಕಪ್‌ ಇತಿಹಾಸದಲ್ಲೇ ಶತಕ ಬಾರಿಸಿದ ಮೊದಲ ಆಟಗಾರ್ತಿ ಎನ್ನುವ ದಾಖಲೆ ಬರೆದರು. ಮಲೇಷ್ಯಾ 40 ರನ್‌ಗೆ ಆಲೌಟ್‌ ಆಯಿತು. ಮತ್ತೊಂದು ಪಂದ್ಯದಲ್ಲಿ ಥಾಯ್ಲೆಂಡ್‌ 9 ವಿಕೆಟ್‌ಗೆ 96 ರನ್‌ ಗಳಿಸಿದರೆ, ಬಾಂಗ್ಲಾ 17.3 ಓವರಲ್ಲಿ 3 ವಿಕೆಟ್‌ಗೆ 100 ರನ್‌ ಗಳಿಸಿ ಜಯಿಸಿತು.