ತೈವಾನ್‌ ಅಥ್ಲೆಟಿಕ್ಸ್‌ ಕೂಟದ ಜಾವೆಲಿನ್‌ನಲ್ಲಿ ಚಿನ್ನ ಗೆದ್ದ ಕರ್ನಾಟಕದ ಮನು

| Published : Jun 02 2024, 01:47 AM IST / Updated: Jun 02 2024, 04:01 AM IST

ತೈವಾನ್‌ ಅಥ್ಲೆಟಿಕ್ಸ್‌ ಕೂಟದ ಜಾವೆಲಿನ್‌ನಲ್ಲಿ ಚಿನ್ನ ಗೆದ್ದ ಕರ್ನಾಟಕದ ಮನು
Share this Article
  • FB
  • TW
  • Linkdin
  • Email

ಸಾರಾಂಶ

5ನೇ ಪ್ರಯತ್ನದಲ್ಲಿ 81.52 ಮೀ. ದೂರ ದಾಖಲಿಸಿದ ಮನು ಕೊನೆ ಪ್ರಯತ್ನದಲ್ಲಿ ಮತ್ತಷ್ಟು ಸುಧಾರಿತ ಪ್ರದರ್ಶನ ನೀಡಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು.

ನವದೆಹಲಿ: ಭಾರತದ ತಾರಾ ಜಾವೆಲಿನ್‌ ಎಸೆತಗಾರ, ಕರ್ನಾಟಕದ ಡಿ.ಪಿ.ಮನು ತೈವಾನ್‌ ಓಪನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಶನಿವಾರ ನಡೆದ ಸ್ಪರ್ಧೆಯ ಕೊನೆ ಪ್ರಯತ್ನದಲ್ಲಿ ಮನು 81.58 ಮೀ. ದೂರಕ್ಕೆ ಜಾವೆಲಿನ್‌ ಎಸೆದು ಅಗ್ರಸ್ಥಾನ ಪಡೆದರು.

 ಮನು ಮೊದಲ 3 ಪ್ರಯತ್ನಗಳಲ್ಲಿ ಕ್ರಮವಾಗಿ 78.32 ಮೀ, 76.80 ಮೀ., 80.59 ಮೀ. ಎಸೆದರೆ, 4ನೇ ಪ್ರಯತ್ನ ಫೌಲ್‌ ಆಯಿತು. 5ನೇ ಪ್ರಯತ್ನದಲ್ಲಿ 81.52 ಮೀ. ದೂರ ದಾಖಲಿಸಿದ ಮನು ಕೊನೆ ಪ್ರಯತ್ನದಲ್ಲಿ ಮತ್ತಷ್ಟು ಸುಧಾರಿತ ಪ್ರದರ್ಶನ ನೀಡಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು.

ತ್ರೀಸಾ-ಗಾಯತ್ರಿಗೆ ಸೋಲು

ಸಿಂಗಾಪುರ: ಸಿಂಗಾಪುರ ಓಪನ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. ಮಹಿಳಾ ಡಬಲ್ಸ್‌ ಸೆಮಿಫೈನಲ್‌ನಲ್ಲಿ ತ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್‌ ಸೋಲುವುದರೊಂದಿಗೆ ಟೂರ್ನಿಯಲ್ಲಿ ಭಾರತದ ಪ್ರಶಸ್ತಿ ಕನಸು ಭಗ್ನಗೊಂಡಿದೆ.

ಶನಿವಾರ 47 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಶ್ರೇಯಾಂಕ ರಹಿತ ಭಾರತೀಯ ಜೋಡಿಗೆ ವಿಶ್ವ ನಂ.4, ಜಪಾನ್‌ನ ನಾಮಿ ಮಟ್ಸುಯಮಾ-ಚಿಹರು ಶಿದಾ ವಿರುದ್ಧ 23-21, 21-11 ಗೇಮ್‌ಗಳಲ್ಲಿ ಸೋಲು ಎದುರಾಯಿತು. ಪ್ರಿ ಕ್ವಾರ್ಟರ್‌ನಲ್ಲಿ ವಿಶ್ವ ನಂ.2, ಕ್ವಾರ್ಟರ್‌ನಲ್ಲಿ ವಿಶ್ವ ನಂ.6 ಜೋಡಿಗಳ ವಿರುದ್ಧ ಗೆದ್ದಿದ್ದ ತ್ರೀಸಾ-ಗಾಯತ್ರಿ ಸೆಮೀಸ್‌ನಲ್ಲಿ ನಿರೀಕ್ಷಿತ ಆಟವಾಡಲು ವಿಫಲವಾಯಿತು.