ರೋಜರ್ ಫೆಡರರ್ ಭೇಟಿಯಾಗುವ ಕನಸು ನನಸು:ನೀರಜ್‌ ಚೋಪ್ರಾ

| Published : Jan 26 2024, 01:51 AM IST

ರೋಜರ್ ಫೆಡರರ್ ಭೇಟಿಯಾಗುವ ಕನಸು ನನಸು:ನೀರಜ್‌ ಚೋಪ್ರಾ
Share this Article
  • FB
  • TW
  • Linkdin
  • Email

ಸಾರಾಂಶ

ಸ್ವಿಟ್ಜರ್ಲೆಂಡ್‌ಗೆ ಕಿರು ರಜೆಗಾಗಿ ತೆರಳಿರುವ ನೀರಜ್‌ ಚೋಪ್ರಾ ಜುರಿಚ್‌ನಲ್ಲಿ ಟೆನಿಸ್ ದಂತಕಥೆ ರೋಜರ್ ಫೆಡರರ್ ಅವರನ್ನು ಭೇಟಿಯಾಗಿದ್ದಾರೆ.

ನವದೆಹಲಿ: ರೋಜರ್ ಫೆಡರರ್ ಅವರನ್ನು ಭೇಟಿಯಾಗುವ ಕನಸು ನನಸಾಗಿದೆ. ಅವರ ಕೌಶಲ್ಯ, ಕ್ರೀಡಾ ಮನೋಭಾವ ಮತ್ತು ಲಕ್ಷಾಂತರ ಜನರನ್ನು ಪ್ರೇರೇಪಿಸುವ ಅವರ ಸಾಮರ್ಥ್ಯ ನನಗೆ ಇಷ್ಟವಾಗುತ್ತದೆ ಎಂದು ಭಾರತದ ಗೋಲ್ಡನ್‌ ಬಾಯ್‌ ಖ್ಯಾತಿಯ ನೀರಜ್‌ ಚೋಪ್ರಾ ಹೇಳಿದ್ದಾರೆ.ಸ್ವಿಟ್ಜರ್ಲೆಂಡ್‌ಗೆ ಕಿರು ರಜೆಗಾಗಿ ತೆರಳಿರುವ ಚೋಪ್ರಾ ಜುರಿಚ್‌ನಲ್ಲಿ ಟೆನಿಸ್ ದಂತಕಥೆ ರೋಜರ್ ಫೆಡರರ್ ಅವರನ್ನು ಭೇಟಿಯಾಗಿದ್ದಾರೆ. ಜಾಗತಿಕ ಅಥ್ಲೆಟಿಕ್ಸ್ ಕೂಟಗಳನ್ನು ಆಯೋಜಿಸುವ ಮೂಲಕ ಭಾರತ ಉನ್ನತ ಸ್ಥಾನದಲ್ಲಿ ಗುರುತಿಸಿಕೊಳ್ಳಬೇಕೆಂದು ಒಲಿಂಪಿಕ್ಸ್‌ ಪದಕ ವಿಜೇತ ಕ್ರೀಡಾಪಟು ನೀರಜ್‌ ಚೋಪ್ರಾ ಹೇಳಿದ್ದಾರೆ. ಭಾರತ 2029ರ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ ಆಯೋಜನೆಗೆ ಬಿಡ್‌ ಸಲ್ಲಿಸಲು ತಯಾರಿಯಲ್ಲಿದ್ದು, ಅದಕ್ಕೂ ಮುನ್ನ ಮುಂಬರುವ 3/4 ವರ್ಷಗಳಲ್ಲಿ ಸಣ್ಣ ಪ್ರಮಾಣದ ಜಾಗತಿಕ ಕ್ರೀಡಾಕೂಟಗಳನ್ನು ಆಯೋಜಿಸಬೇಕು ಎಂದು ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಿಳಿಸಿದ್ದಾರೆ.2029ರ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ ಆಯೋಜನೆಯಿಂದ ಒಳ್ಳೆಯದಾಗಲಿದೆ. ಅದಕ್ಕೆ ಹಲವು ವರ್ಷಗಳ ಕಾಲಾವಕಾಶ ಇರುವದರಿಂದ ಸಣ್ಣ ಪ್ರಮಾಣ ಕೂಟ ಆಯೋಜಿಸಬೇಕು ಎಂದು ಹೇಳಿದ್ದಾರೆ. ದೊಡ್ಡ ಮಟ್ಟದ ಕೂಟಗಳು ಭಾರತೀಯ ಅಭಿಮಾನಿಗಳನ್ನು ಅಥ್ಲೆಟಿಕ್ಸ್‌ನಲ್ಲಿ ಆಸಕ್ತರಾಗು ವಂತೆ ಮಾಡುತ್ತವೆ. ಅಂತಾರಾಷ್ಟ್ರೀಯ ಮಟ್ಟದ ದಿಗ್ಗಜ ಕ್ರೀಡಾಪಟುಗಳು ಭಾರತದ ಕ್ರೀಡಾಪಟುಗಳೊಂದಿಗೆ ಸೆಣಸುವುದು ಉತ್ತಮ ಬೆಳವಣಿಗೆ ಎಂದಿದ್ದಾರೆ.

ಭಾರತದಲ್ಲಿ ಜಾಗತಿಕ ಕಾರ್ಯಕ್ರಮಗಳನ್ನು ನಡೆಸುವುದು ಅಭಿಮಾನಿಗಳಲ್ಲಿ ಜಾಗೃತಿ ಮೂಡಿಸುತ್ತದೆ. ಭಾರತೀಯ ಕ್ರೀಡಾಪಟುಗಳು ಸ್ಪರ್ಧಿಸುವ ಸ್ಥಳಗಳು ಭಾರತೀಯ ಅಭಿಮಾನಿಗಳಿಗೆ ಸುಲಭವಾಗಿ ಲಭ್ಯವಿರಬೇಕು ಎಂದು ಅವರು ಹೇಳಿದರು. ಈ ವರ್ಷ ಪ್ಯಾರಿಸ್ ಗೇಮ್ಸ್‌ನಲ್ಲಿ ತನ್ನ ಒಲಿಂಪಿಕ್ ಚಿನ್ನದ ಗುರಿಯನ್ನು ಹೊಂದಿರುವ ಚೋಪ್ರಾ, ನಾನು ಇನ್ನೂ ಅಂತಿಮ ಯೋಜನೆ ರೂಪಿಸಿಲ್ಲ. ಬಹುಶಃ, ನಾವು ಅದನ್ನು ಮಾರ್ಚ್‌ನಲ್ಲಿ ಮಾಡುತ್ತೇವೆ. ನಾನು ಮೇ ತಿಂಗಳಲ್ಲಿ ಸ್ಪರ್ಧೆಗೆ ತಯಾರಿ ಪ್ರಾರಂಭಿಸುತ್ತೇನೆ ಎಂದು ಹೇಳಿದರು. ಡೈಮಂಡ್ ಲೀಗ್‌ನ ದೋಹಾ ಆವೃತ್ತಿ ಮೇ 10ರಂದು ನಿಗದಿಯಾಗಿದ್ದು, ಅವರು ಕಳೆದ ವರ್ಷ ಇದೇ ಪ್ರತಿಷ್ಠಿತ ಸ್ಪರ್ಧೆಯ ಮೂಲಕ ತಮ್ಮ ಋತುವನ್ನು ಪ್ರಾರಂಭಿಸಿದ್ದರು.

ಒಲಿಂಪಿಕ್ಸ್‌ಗೂ ಮುನ್ನ ನಿಮ್ಮ ಆಟದ ಯಾವ ಅಂಶಗಳಲ್ಲಿ ಕೆಲಸ ಮಾಡುತ್ತೀರಿ ಎಂಬ ಪ್ರಶ್ನೆಗೆ "ನಾನು ಸ್ವಲ್ಪ ತಂತ್ರ ಮತ್ತು ನಂತರ ಶಕ್ತಿಯ ಮೇಲೆ ಕೆಲಸ ಮಾಡುತ್ತೇನೆ. ಹಾಗೆಯೇ, ಗಾಯದಿಂದ ದೂರ ಉಳಿಯಲು ಬಯಸುತ್ತೇನೆ. ಕಳೆದ ಕೆಲವು ವರ್ಷಗಳಲ್ಲಿ, ನನ್ನ ವೇಳಾಪಟ್ಟಿಯಲ್ಲಿ ಅಡಚಣೆಗಳನ್ನು ಉಂಟುಮಾಡುವ ಸಣ್ಣ ಗಾಯಗಳು ಇದ್ದವು. ಗಾಯಗಳಿಂದ ದೂರವಿರಲು ಸಣ್ಣ ವ್ಯಾಯಾಮಗಳನ್ನು ಸಹ ಮಾಡಬೇಕಾಗಿದೆ.ನಾನು ಸಂಪೂರ್ಣವಾಗಿ ಫಿಟ್ ಆಗಿ ಪ್ಯಾರಿಸ್‌ನಲ್ಲಿ ನನ್ನ ಅತ್ಯುತ್ತಮ ಪ್ರದರ್ಶನ ನೀಡಲು ಬಯಸುತ್ತೇನೆ ಎಂದು ಹೇಳಿದರು.