ದುಲೀಪ್‌ ಟ್ರೋಫಿ ಕ್ರಿಕೆಟ್‌: ಭಾರತ ‘ಡಿ’ ವಿರುದ್ಧ ಭಾರತ ‘ಎ’ ಗೆ ಭರ್ಜರಿ ಗೆಲುವು!

| Published : Sep 16 2024, 01:49 AM IST / Updated: Sep 16 2024, 04:29 AM IST

ಸಾರಾಂಶ

ಭಾರತ ‘ಡಿ’ ವಿರುದ್ಧ ಭಾರತ ‘ಎ’ಗೆ 186 ರನ್‌ಗಳ ಭರ್ಜರಿ ಗೆಲುವು. 488 ರನ್‌ ಗುರಿ ಬೆನ್ನತ್ತಿದ್ದ ಭಾರತ ‘ಡಿ’ 301 ರನ್‌ಗೆ ಆಲೌಟ್‌. ಭಾರತ ‘ಎ’ಗೆ ಮೊದಲ ಜಯ, ಭಾರತ ‘ಡಿ’ಗೆ ಸತತ 2ನೇ ಸೋಲು. ಭಾರತ ‘ಬಿ’-ಭಾರತ ‘ಸಿ’ ಪಂದ್ಯ ಡ್ರಾನಲ್ಲಿ ಮುಕ್ತಾಯ.  

ಅನಂತಪುರ: ರಿಕಿ ಭುಯಿ ಶತಕ ಸಿಡಿಸಿದರೂ, ದುಲೀಪ್‌ ಟ್ರೋಫಿ ಪಂದ್ಯದಲ್ಲಿ ಭಾರತ ‘ಎ’ ವಿರುದ್ಧ ಭಾರತ ‘ಡಿ’ ಸೋಲುವನ್ನು ತಪ್ಪಿಸಲು ಸಾಧ್ಯವಾಗಲಿಲ್ಲ. ಸ್ಪಿನ್ನರ್‌ಗಳಾದ ಶಮ್ಸ್‌ ಮುಲಾನಿ ಹಾಗೂ ತನುಷ್‌ ಕ್ಯೋಟಾನ್‌ರ ಆಕರ್ಷಕ ಬೌಲಿಂಗ್‌ ಪ್ರದರ್ಶನದ ನೆರವಿನಿಂದ ಭಾರತ ‘ಎ’ 186 ರನ್‌ಗಳ ಗೆಲುವು ದಾಖಲಿಸಿ, ಟ್ರೋಫಿ ಎತ್ತಿಹಿಡಿಯುವ ಆಸೆಯನ್ನು ಜೀವಂತವಾಗಿರಿಸಿಕೊಂಡಿತು. ಸತತ 2ನೇ ಸೋಲು ಅನುಭವಿಸಿದ ಭಾರತ ‘ಡಿ’, ಟ್ರೋಫಿ ರೇಸ್‌ನಿಂದ ಹೊರಬಿತ್ತು.

ಗೆಲ್ಲಲು 488 ರನ್‌ಗಳ ಬೃಹತ್‌ ಗುರಿ ಬೆನ್ನತ್ತಿದ್ದ ಭಾರತ ‘ಡಿ’, 3ನೇ ದಿನದಂತ್ಯಕ್ಕೆ 1 ವಿಕೆಟ್‌ಗೆ 62 ರನ್‌ ಗಳಿಸಿತ್ತು. 4ನೇ ಹಾಗೂ ಅಂತಿಮ ದಿನವಾದ ಭಾನುವಾರ 2ನೇ ಇನ್ನಿಂಗ್ಸಲ್ಲಿ 301 ರನ್‌ಗೆ ಆಲೌಟ್‌ ಆಯಿತು. ರಿಕಿ ಭುಯಿ 113 ರನ್‌ ಗಳಿಸಿದರು. ತನುಷ್‌ 4, ಶಮ್ಸ್‌ 3 ವಿಕೆಟ್ ಕಿತ್ತರು.

ಸ್ಕೋರ್‌: ಭಾರತ ‘ಎ’ 290 ಹಾಗೂ 380/3 ಡಿ., ಭಾರತ ‘ಡಿ’ 183 ಹಾಗೂ 301

ಭಾರತ ‘ಬಿ’- ಭಾರತ ‘ಸಿ’ ನಡುವಿನ ಪಂದ್ಯ ಡ್ರಾ

ಅನಂತಪುರ: ಭಾರತ ‘ಬಿ’ ವಿರುದ್ಧದ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿದ ಭಾರತ ‘ಸಿ’, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಮೊದಲ ಇನ್ನಿಂಗ್ಸಲ್ಲಿ 525 ರನ್‌ ಕಲೆಹಾಕಿದ್ದ ಭಾರತ ‘ಸಿ’, ಆ ಬಳಿಕ ಭಾರತ ‘ಬಿ’ಯನ್ನು 332 ರನ್‌ಗೆ ಕಟ್ಟಿಹಾಕಿತು. 3ನೇ ದಿನದಂತ್ಯಕ್ಕೆ 7 ವಿಎಕಟ್‌ಗೆ 309 ರನ್‌ ಗಳಿಸಿದ್ದ ಭಾರತ ‘ಬಿ’, ಭಾನುವಾರ ಆ ಮೊತ್ತಕ್ಕೆ ಕೇವಲ 23 ರನ್‌ ಸೇರಿಸಿತು. ವೇಗಿ ಅನ್ಶುಲ್‌ ಕಾಂಬೋಜ್‌ 69ಕ್ಕೆ 8 ವಿಕೆಟ್‌ ಕಿತ್ತರು. 2ನೇ ಇನ್ನಿಂಗ್ಸ್‌ ಆರಂಭಿಸಿದ ಭಾರತ ‘ಸಿ’ 4 ವಿಕೆಟ್‌ಗೆ 128 ರನ್‌ ಗಳಿಸಿದ್ದಾಗ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು.

ಸ್ಕೋರ್‌: ಭಾರತ ‘ಸಿ’ 525 ಹಾಗೂ 128/4, ಭಾರತ ‘ಡಿ’ 332ದುಲೀಪ್‌ ಟ್ರೋಫಿ ಅಂಕಪಟ್ಟಿ

---

ತಂಡಪಂದ್ಯಜಯಸೋಲುಡ್ರಾಅಂಕ

ಭಾರತ ‘ಸಿ’0201000109

ಭಾರತ ‘ಬಿ’0201000107

ಭಾರತ ‘ಎ’0201010006

ಭಾರತ ‘ಡಿ’0200020000