ಸಾರಾಂಶ
ಅನಂತಪುರ: ತಾರಾ ಬ್ಯಾಟರ್ ಇಶಾನ್ ಕಿಶನ್ ಭರ್ಜರಿ ಶತಕದೊಂದಿಗೆ ಪ್ರಥಮ ದರ್ಜೆ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡಿದ್ದಾರೆ. ಗುರುವಾರ ಆರಂಭಗೊಂಡ ಭಾರತ ‘ಬಿ’ ತಂಡದ ವಿರುದ್ಧದ ದುಲೀಪ್ ಟ್ರೋಫಿ ಕ್ರಿಕೆಟ್ ಪಂದ್ಯದಲ್ಲಿ ಇಶಾನ್ ಭಾರತ ‘ಸಿ’ ಪರ 111 ರನ್ ಬಾರಿಸಿದರು. ಇದರಿಂದಾಗಿ ‘ಸಿ’ ತಂಡದ ಮೊದಲ ದಿನದಂತ್ಯಕ್ಕೆ 5 ವಿಕೆಟ್‌ಗೆ 357 ರನ್ ಕಲೆಹಾಕಿದೆ.
ನಾಯಕ, ಆರಂಭಿಕ ಆಟಗಾರ ಋತುರಾಜ್ 2 ಎಸೆತಗಳ ಬಳಿಕ ಗಾಯದಿಂದಾಗಿ ನಿವೃತ್ತಿ ಪಡೆದರು. ಬಳಿಕ ಸಾಯಿ ಸುದರ್ಶನ್ 43, ರಜತ್ ಪಾಟೀದಾರ್ 40 ರನ್ ಸಿಡಿಸಿದರು. 4ನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಇಶಾನ್ 126 ಎಸೆತಗಳಲ್ಲಿ 111 ರನ್ ಸಿಡಿಸಿದರು.
ಅವರು 3ನೇ ವಿಕೆಟ್‌ಗೆ ಬಾಬಾ ಇಂದ್ರಜಿತ್(78) 189 ರನ್ ಜೊತೆಯಾಟವಾಡಿದರು. ಇಶಾನ್ ನಿರ್ಗಮನದ ಬಳಿಕ ಮತ್ತೆ ಕ್ರೀಸ್‌ಗೆ ಬಂದ ಗಾಯಕ್ವಾಡ್ ಔಟಾಗದೆ 46 ರನ್ ಗಳಿಸಿದ್ದಾರೆ. ‘ಡಿ’ ತಂಡದ ಪರ ಮುಕೇಶ್ ಕುಮಾರ್ 3 ವಿಕೆಟ್ ಪಡೆದರು. ಸ್ಕೋರ್: ಭಾರತ ‘ಸಿ’ 357/5 (ಮೊದಲ ದಿನದಂತ್ಯಕ್ಕೆ) (ಇಶಾನ್ 111, ಇಂದ್ರಜಿತ್ 78, ಗಾಯಕ್ವಾಡ್ 46*, ಮುಕೇಶ್ 3-76)
;Resize=(128,128))
;Resize=(128,128))
;Resize=(128,128))