ಪ್ಯಾರಿಸ್‌ ಒಲಿಂಪಿಕ್ಸ್‌ ಬಳಿಕ ಹಾಕಿ ವೃತ್ತಿ ಬದುಕಿಗೆ ಗೋಲ್‌ ಕೀಪರ್‌ ಶ್ರೀಜೇಶ್‌ ನಿವೃತ್ತಿ

| Published : Jul 23 2024, 12:32 AM IST / Updated: Jul 23 2024, 04:59 AM IST

ಸಾರಾಂಶ

ಒಲಿಂಪಿಕ್ಸ್‌ ಬಳಿಕ ನಿವೃತ್ತಿ ಪಡೆಯುವುದಾಗಿ ಘೋಷಿಸಿದ ಭಾರತ ಹಾಕಿ ತಂಡದ ಗೋಡೆ ಎಂದೇ ಖ್ಯಾತರಾಗಿರುವ ಗೋಲ್‌ಕೀಪರ್‌ ಶ್ರೀಜೇಶ್‌. ಮತ್ತೊಂದು ಒಲಿಂಪಿಕ್ಸ್‌ ಪದಕ ಗೆದ್ದು ನಿವೃತ್ತಿಯಾಗುವ ಗುರಿ.

ನವದೆಹಲಿ: ಭಾರತ ಹಾಕಿ ತಂಡದ ದಿಗ್ಗಜ ಗೋಲ್‌ಕೀಪರ್ ಪಿ. ಆರ್. ಶ್ರೀಜೇಶ್ ಪ್ಯಾರಿಸ್‌ ಒಲಿಂಪಿಕ್ಸ್ ನಂತರ ತಮ್ಮ 18 ವರ್ಷಗಳ ವೃತ್ತಿಜೀವನ ಕೊನೆಗೊಳಿಸುವುದಾಗಿ ಸೋಮವಾರ ಘೋಷಿಸಿದ್ದಾರೆ.

3 ಒಲಿಂಪಿಕ್ಸ್‌, ಕಾಮನ್‌ವೆಲ್ತ್ ಗೇಮ್‌, ವಿಶ್ವಕಪ್‌ ಸೇರಿದಂತೆ 328 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಶ್ರೀಜೇಶ್‌, ಪ್ಯಾರಿಸ್‌ನಲ್ಲಿ ತಮ್ಮ 4ನೇ ಒಲಿಂಪಿಕ್ಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2006ರಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಶ್ರೀಜೇಶ್‌, 2021ರಲ್ಲಿ ಖೇಲ್‌ ರತ್ನ ಪುರಸ್ಕಾರಕ್ಕೆ ಭಾಜನರಾಗಿದ್ದರು. 2021, 2022ರಲ್ಲಿ ಎಫ್‌ಐಎಚ್‌ ವರ್ಷದ ಶ್ರೇಷ್ಠ ಗೋಲ್‌ಕೀಪರ್‌ ಪ್ರಶಸ್ತಿ ಪಡೆದಿದ್ದ ಶ್ರೀಜೇಶ್‌, ಒಲಿಂಪಿಕ್ಸ್‌ ಕಂಚು, ಏಷ್ಯನ್‌ ಗೇಮ್ಸ್‌ ಚಿನ್ನ ಸೇರಿ ಹಲವು ಪದಕ, ಪ್ರಶಸ್ತಿ ಗೆದ್ದ ಭಾರತ ತಂಡದ ಸದಸ್ಯರಾಗಿದ್ದಾರೆ.

 ಏಷ್ಯಾ ಒಲಿಂಪಿಕ್‌ ಸಮಿತಿ ಅಧ್ಯಕ್ಷರಾಗಿ ರಣ್‌ಧೀರ್‌ ಅವಿರೋಧ ಆಯ್ಕೆ ಪಕ್ಕಾ

ನವದೆಹಲಿ: ಹಿರಿಯ ಕ್ರೀಡಾ ಆಡಳಿತಗಾರ ರಣ್‌ಧೀರ್‌ ಸಿಂಗ್‌, ಏಷ್ಯಾ ಒಲಿಂಪಿಕ್‌ ಸಮಿತಿ (ಒಸಿಎ)ಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುವುದು ಖಚಿತವಾಗಿದೆ. ಈ ಹುದ್ದೆ ಅಲಂಕರಿಸಲಿರುವ ಭಾರತದ ಮೊದಲ ವ್ಯಕ್ತಿ ಎನ್ನುವ ಹಿರಿಮೆಗೆ ಸಿಂಗ್‌ ಪಾತ್ರರಾಗಲಿದ್ದಾರೆ. ಸೆ.8ರಂದು ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಸ್ಪರ್ಧೆಯಲ್ಲಿರುವ ಏಕೈಕ ವ್ಯಕ್ತಿ ರಣ್‌ಧೀರ್‌ ಎಂದು ಒಸಿಎ ಖಚಿತಪಡಿಸಿದೆ.