ಸಾರಾಂಶ
ಒಮಾನ್‌ನ ಮಸ್ಕಟ್‌ನಲ್ಲಿ ಬುಧವಾರ ಆರಂಭಗೊಂಡ ಚೊಚ್ಚಲ ಆವೃತ್ತಿಯ ಹಾಕಿ ಫೈವ್ಸ್ ವಿಶ್ವಕಪ್‌ನಲ್ಲಿ ಭಾರತ ಮಹಿಳಾ ತಂಡ ಶುಭಾರಂಭ ಮಾಡಿದೆ.
ಮಸ್ಕಟ್(ಒಮಾನ್): ಇಲ್ಲಿ ಬುಧವಾರ ಆರಂಭಗೊಂಡ ಚೊಚ್ಚಲ ಆವೃತ್ತಿಯ ಹಾಕಿ ಫೈವ್ಸ್ ವಿಶ್ವಕಪ್‌ನಲ್ಲಿ ಭಾರತ ಮಹಿಳಾ ತಂಡ ಶುಭಾರಂಭ ಮಾಡಿದೆ. ಆರಂಭಿಕ ಪಂದ್ಯದಲ್ಲಿ ಭಾರತಕ್ಕೆ ಪೋಲೆಂಡ್ ವಿರುದ್ಧ 5-4 ಗೋಲುಗಳ ಗೆಲುವು ಲಭಿಸಿತು. ಭಾರತದ ಪರ ಮುಮ್ತಾಜ್ ಖಾನ್ ಹಾಗೂ ದೀಪಿಕಾ ತಲಾ 2 ಗೋಲು ಬಾರಿಸಿದರೆ, ಮತ್ತೊಂದು ಗೋಲನ್ನು ಕುಜುರ್ ಮರಿಯಾನ ಹೊಡೆದರು. ಬುಧವಾರವೇ ನಡೆದ ಮತ್ತೊಂದು ಪಂದ್ಯದಲ್ಲಿ ಭಾರತ ತಂಡ, ಅಮೆರಿಕ ವಿರುದ್ಧ 000 ಗೆಲುವು ಸಾಧಿಸಿತು. ‘ಸಿ’ ಗುಂಪಿನಲ್ಲಿರುವ ಭಾರತ, ಗುಂಪು ಹಂತದ ಕೊನೆ ಪಂದ್ಯದಲ್ಲಿ ಗುರುವಾರ ನಮೀಬಿಯಾ ವಿರುದ್ಧ ಆಡಲಿದೆ.
ಯೂತ್ ಗೇಮ್ಸ್: ಮತ್ತೆ 2 ಪದಕ ಗೆದ್ದ ಕರ್ನಾಟಕಚೆನ್ನೈ: ಇಲ್ಲಿ ನಡೆಯುತ್ತಿರುವ 6ನೇ ಆವೃತ್ತಿಯ ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ ಕರ್ನಾಟಕದ ಅಥ್ಲೀಟ್‌ಗಳು ಮತ್ತೆರಡು ಪದಕ ಗೆದ್ದಿದ್ದಾರೆ. ಅಂಡರ್-15 ಬಾಲಕರ ಹ್ಯಾಮರ್ ಎಸೆತದಲ್ಲಿ ಯಶಸ್ ಕುರ್ಬಾರ್ 64.12 ಮೀ. ದೂರ ದಾಖಲಿಸಿ ಬೆಳ್ಳಿ ತಮ್ಮದಾಗಿಸಿಕೊಂಡರು. ಬಾಲಕಿಯರ 800 ಮೀ. ಓಟದ ಸ್ಪರ್ಧೆಯಲ್ಲಿ ಪ್ರಿಯಾಂಕಾ ಓಲೇಕಾರ್ 2 ನಿಮಿಷ 12.12 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.