ಕುಂಡ್ಯೋಳಂಡ ಹಾಕಿ ಕಾರ್ನಿವಲ್: ಮೊದಲ ದಿನ ಹಂಚೆಟ್ಟಿರ ತಂಡ ಮುನ್ನಡೆ

| Published : Mar 31 2024, 02:04 AM IST / Updated: Mar 31 2024, 04:43 AM IST

ಕುಂಡ್ಯೋಳಂಡ ಹಾಕಿ ಕಾರ್ನಿವಲ್: ಮೊದಲ ದಿನ ಹಂಚೆಟ್ಟಿರ ತಂಡ ಮುನ್ನಡೆ
Share this Article
  • FB
  • TW
  • Linkdin
  • Email

ಸಾರಾಂಶ

24ನೇ ವರ್ಷದ ಹಾಕಿ ಉತ್ಸವಕ್ಕೆ ಚಾಲನೆ. ನಾ​ಪೋ​ಕ್ಲು​ವಿ​ನಲ್ಲಿ ನ​ಡೆದ ಕುಂಡ್ಯೋ​ಳಂಡ ಹಾಕಿ ಕಾ​ರ್ನಿ​ವ​ಲ್‌ನ ಮೊ​ದಲ ಪಂದ್ಯ​ದಲ್ಲಿ ಹಂಚೆ​ಟ್ಟಿರ ಮತ್ತು ಪೆ​ಮ್ಮಡಿ​ಯಂಡ ತಂಡ​ಗಳ ಸೆಣಸು.

ಮ​ಡಿ​ಕೇ​ರಿ: ಕುಂಡ್ಯೋ​ಳಂಡ ಹಾಕಿ ಕಾ​ರ್ನಿ​ವ​ಲ್‌ನ ಮೊ​ದಲ ಪಂದ್ಯ​ದಲ್ಲಿ ಹಂಚೆಟ್ಟಿರ ತಂಡವು ಪೆ​ಮ್ಮಡಿ​ಯಂಡ ತಂಡದ ವಿರುದ್ಧ ಗೆ​ಲುವು ಸಾಧಿಸಿ ಮುಂದಿನ ಸು​ತ್ತಿಗೆ ಪ್ರ​ವೇಶ ಪ​ಡೆಯಿತು. ಪೆ​ಮ್ಮ​ಡಿ​ಯಂಡ ತಂಡ ಮೊ​ದಲ ಪಂದ್ಯ​ದ​ಲ್ಲಿಯೇ ಪ​ರಾವ​ಗೊಂಡು ಟೂ​ರ್ನಿ​ಯಿಂದ ಹೊ​ರ​ಬಿತ್ತು.

ಹಂಚೆ​ಟ್ಟಿರ ತಂಡದ ಪ​ರ​ವಾಗಿ ಬಿ​ಪಿನ್‌ ಬೋ​ಪಣ್ಣ 10ನೇ ನಿ​ಮಿ​ಷಕ್ಕೆ ಒಂದು ಗೋಲ್‌ ದಾ​ಖ​ಲಿಸಿ ತಂಡದ ಗೆ​ಲು​ವಿಗೆ ಕಾ​ರ​ಣರಾ​ದರು. ಇ​ದಕ್ಕೂ ಮೊ​ದಲು ಇಂಡಿ​ಯನ್‌ ನೇವಿ ಮತ್ತು ಕೂರ್ಗ್‌ 11 ಪು​ರು​ಷರ ತಂಡ​ಗಳ ನ​ಡುವೆ ನ​ಡೆದ ಪ್ರ​ದ​ರ್ಶ​ನ ಪಂದ್ಯ​ದಲ್ಲಿ ಎರಡೂ ತಂಡ​ಗಳು ತಲಾ 2 ಗೋಲ್‌ ದಾ​ಖ​ಲಿಸಿ ಸ​ಮ​ಬಲ ಸಾ​ಧಿ​ಸಿ​ದವು. 

ಆ​ರಂಭ​ದಲ್ಲಿ ಕೂರ್ಕ್‌ 11 ತಂಡ 2 ಗೋ​ಲು​ಗಳನ್ನು ಬಾ​ರಿಸಿ ಮು​ನ್ನ​ಡೆ ಸಾ​ಧಿಸಿತು. ಕೊ​ನೆಯವ​ರೆಗೂ ರ​ಕ್ಷ​ಣಾ​ತ್ಮಕ ಆ​ಟ​ವಾ​ಡಿದ ನೇವಿ ತಂಡ ದ್ವೀ​ತೀ​ಯಾ​ರ್ಧದ ಬ​ಳಿಕ 2 ಗೋ​ಲು​ಗ​ಳನ್ನು ಗ​ಳಿ​ಸುವ ಮೂ​ಲಕ ಸ​ಮ​ಬ​ಲ ಸಾಧಿಸಿತು. ಕೂರ್ಗ್‌ 11 ತಂಡದ ಪರವಾಗಿ ಕೊ​ಡಗು ಜಿ​ಲ್ಲಾ​ಧಿ​ಕಾರಿ ವೆಂಕಟ್‌ ರಾಜಾ ಆ​ಟ​ವಾಡಿ ಗ​ಮನ ಸೆ​ಳೆ​ದರು. ನೇವಿ ಮತ್ತು ಕೂರ್ಗ್‌ 11 ಪಂದ್ಯದ ಮೊ​ದಲು ಸಾಯಿ ಮ​ಡಿ​ಕೇರಿ ಬಾ​ಲ​ಕಿ​ಯರು ಮತ್ತು ಕೂರ್ಗ್‌ 11 ಬಾ​ಲ​ಕಿ​ಯರ ತಂಡ​ಗಳ ನ​ಡುವಿನ ಪ್ರ​ದ​ರ್ಶನ ಪಂದ್ಯದಲ್ಲಿ ಸಾಯಿ ಮ​ಡಿ​ಕೇರಿ ಬಾ​ಲ​ಕಿ​ಯರ ತಂಡ​ವು ಕೂರ್ಗ್‌ 11 ತಂಡ​ವನ್ನು 2- 0 ಗೋ​ಲು​ಗಳ ಅಂತ​ರ​ದಿಂದ ಮ​ಣಿ​ಸಿ​ತು.