ಹಾಕಿ ಫೈವ್ಸ್‌ ವಿಶ್ವಕಪ್‌: ಭಾರತ ಸೆಮಿಫೈನಲ್‌ಗೆ

| Published : Jan 27 2024, 01:16 AM IST

ಸಾರಾಂಶ

ಚೊಚ್ಚಲ ಆವೃತ್ತಿ ಹಾಕಿ ಫೈವ್ಸ್‌ ವಿಶ್ವಕಪ್‌ನಲ್ಲಿ ಭಾರತ ಸೆಮಿಫೈನಲ್‌ ಪ್ರವೇಶಿಸಿದೆ. ಶುಕ್ರವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತಕ್ಕೆ ನ್ಯೂಜಿಲೆಂಡ್‌ ವಿರುದ್ಧ 11-1 ಗೋಲುಗಳ ಭರ್ಜರಿ ಗೆಲುವು ಲಭಿಸಿತು.

ಮಸ್ಕಟ್‌(ಒಮಾನ್‌): ಚೊಚ್ಚಲ ಆವೃತ್ತಿ ಹಾಕಿ ಫೈವ್ಸ್‌ ವಿಶ್ವಕಪ್‌ನಲ್ಲಿ ಭಾರತ ಸೆಮಿಫೈನಲ್‌ ಪ್ರವೇಶಿಸಿದೆ. ಶುಕ್ರವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಭಾರತಕ್ಕೆ ನ್ಯೂಜಿಲೆಂಡ್‌ ವಿರುದ್ಧ 11-1 ಗೋಲುಗಳ ಭರ್ಜರಿ ಗೆಲುವು ಲಭಿಸಿತು. 2ನೇ ನಿಮಿಷದಲ್ಲೇ ಗೋಲು ಬಾರಿಸಿ ನ್ಯೂಜಿಲೆಂಡ್‌ ಮುನ್ನಡೆ ಸಾಧಿಸಿತಾದರೂ, ಬಳಿಕ ಭಾರತದ ಓಟಕ್ಕೆ ತಡೆ ನೀಡಲು ನ್ಯೂಜಿಲೆಂಡ್‌ಗೆ ಸಾಧ್ಯವಾಗಲಿಲ್ಲ. ಋತಜಾ 4, ದೀಪಿಕಾ 3, ಮುಮ್ತಾಜ್‌ ಹಾಗೂ ಕುಜೂರ್‌ ತಲಾ 2 ಗೋಲು ಬಾರಿಸಿದರು. ಸೆಮೀಸ್‌ನಲ್ಲಿ ಭಾರತಕ್ಕೆ ದ.ಆಫ್ರಿಕಾ ಸವಾಲು ಎದುರಾಗಲಿದೆ. ಇಂಡೋನೇಷ್ಯಾ ಮಾಸ್ಟರ್ಸ್:ಭಾರತದ ಸವಾಲು ಅಂತ್ಯಜಕಾರ್ತ: ಇಂಡೋನೆಷ್ಯಾ ಮಾಸ್ಟರ್ಸ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. ಪುರುಷರ ಸಿಂಗಲ್ಸ್‌ 3ನೇ ಸುತ್ತಿನಲ್ಲಿ ವಿಶ್ವ ನಂ.36 ಕಿರಣ್‌ ಜಾರ್ಜ್‌, ಥಾಯ್ಲೆಂಡ್‌ನ ಕುನ್ಲಾವುಟ್‌ ವಿಟಿಡ್ಸ್‌ರನ್‌ ವಿರುದ್ಧ 14-21, 6-21ರಲ್ಲಿ ಹೀನಾಯವಾಗಿ ಸೋಲುಂಡರು.