ಡೇವಿಸ್‌ ಕಪ್‌ ಸಾಧಕರಿಗೆ ಸನ್ಮಾನ

| Published : Feb 13 2024, 12:52 AM IST

ಸಾರಾಂಶ

ಇತ್ತೀಚೆಗಷ್ಟೇ ಡೇವಿಸ್‌ ಕಪ್‌ ವಿಶ್ವ ಗುಂಪು-1ರ ಪ್ಲೇ-ಆಫ್‌ನಲ್ಲಿ ಪಾಕಿಸ್ತಾನ ವಿರುದ್ಧ ಗೆದ್ದ ಭಾರತ ತಂಡದಲ್ಲಿದ್ದ ಟೆನಿಸಿಗರನ್ನು ಸೋಮವಾರ ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆ(ಕೆಎಸ್‌ಎಲ್‌ಟಿಎ) ವತಿಯಿಂದ ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರುಇತ್ತೀಚೆಗಷ್ಟೇ ಡೇವಿಸ್‌ ಕಪ್‌ ವಿಶ್ವ ಗುಂಪು-1ರ ಪ್ಲೇ-ಆಫ್‌ನಲ್ಲಿ ಪಾಕಿಸ್ತಾನ ವಿರುದ್ಧ ಗೆದ್ದ ಭಾರತ ತಂಡದಲ್ಲಿದ್ದ ಟೆನಿಸಿಗರನ್ನು ಸೋಮವಾರ ಕರ್ನಾಟಕ ರಾಜ್ಯ ಲಾನ್‌ ಟೆನಿಸ್‌ ಸಂಸ್ಥೆ(ಕೆಎಸ್‌ಎಲ್‌ಟಿಎ) ವತಿಯಿಂದ ಸನ್ಮಾನಿಸಲಾಯಿತು.ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿಯ ಉದ್ಘಾಟನಾ ಸಮಾರಂಭದ ವೇಳೆ ಕೆಎಸ್‌ಎಲ್‌ಟಿಎ ಅಧ್ಯಕ್ಷ, ವಿಧಾನ ಪರಿಷತ್‌ ವಿಪಕ್ಷ ನಾಯಕ ಆರ್‌.ಅಶೋಕ್‌ ಅವರು ಆಟಗಾರರಾದ ರಾಮ್‌ಕುಮಾರ್‌ ರಾಮನಾಥನ್‌, ಶ್ರೀರಾಮ್‌ ಬಾಲಾಜಿ, ಸಾಕೇತ್‌ ಮೈನೇನಿ ಹಾಗೂ ನಿಕ್ಕಿ ಪೂನಚ್ಚ ಅವರನ್ನು ಸನ್ಮಾನಿಸಿದರು. ಈ ನಾಲ್ವರು ಈ ಬಾರಿ ಬೆಂಗಳೂರು ಓಪನ್‌ನಲ್ಲಿ ಆಡಲಿದ್ದಾರೆ. ಸಮಾರಂಭದಲ್ಲಿ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಂಜುನಾಥ್‌ ಪ್ರಸಾದ್‌ ಉಪಸ್ಥಿತರಿದ್ದರು.

ಬೆಂಗ್ಳೂರು ಓಪನ್‌ ಟೆನಿಸ್‌: ರಾಮ್‌ಕುಮಾರ್‌ಗೆ ಗೆಲುವುಬೆಂಗಳೂರು: ಭಾರತದ ತಾರಾ ಆಟಗಾರ ರಾಮ್‌ಕುಮಾರ್‌ ರಾಮನಾಥನ್‌ ಬೆಂಗಳೂರು ಓಪನ್‌ ಟೆನಿಸ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ. ಸೋಮವಾರ ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ರಾಮ್‌, ಫ್ರಾನ್ಸ್‌ನ ಮ್ಯಾಕ್ಸಿಮ್‌ ಜಾನ್‌ವೀರ್‌ ವಿರುದ್ಧ 6-7(4), 7-5, 6-4 ಅಂತರದಲ್ಲಿ ಗೆಲುವು ಸಾಧಿಸಿದರು. ಇದೇ ವೇಳೆ 3ನೇ ಶ್ರೇಯಾಂಕಿತ, ಕ್ರೊವೇಷಿಯಾದ ಡ್ಯುಜ್‌ ಆಡುಕೋವಿಚ್‌ ವಿರುದ್ಧ ಟ್ಯುನೀಶಿಯಾದ ಶ್ರೇಯಾಂಕ ರಹಿತ ಮೊಯೆಜ್‌ ಎಚಾರ್ಗ್ಯು ಸೋಲಿಸಿ 2ನೇ ಸುತ್ತಿಗೇರಿದರು.