ಸಾರಾಂಶ
ದುಬೈ: 2023ರಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ವಿಶ್ವದೆಲ್ಲೆಡೆಯ ಕ್ರಿಕೆಟಿಗರನ್ನು ಸೇರಿಸಿ ಐಸಿಸಿ 11 ಆಟಗಾರರ ವರ್ಷದ ಶ್ರೇಷ್ಠ ಟಿ20 ತಂಡವನ್ನು ಪ್ರಕಟಿಸಿದ್ದು, ಭಾರತದ ನಾಲ್ವರು ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.
ವಿಶ್ವ ನಂ.1 ಬ್ಯಾಟರ್ ಸೂರ್ಯಕುಮಾರ್ ಯಾದವ್ ನಾಯಕನಾಗಿ ಆಯ್ಕೆಯಾಗಿದ್ದಾರೆ. ಉಳಿದಂತೆ ಬ್ಯಾಟರ್ ಯಶಸ್ವಿ ಜೈಸ್ವಾಲ್, ಸ್ಪಿನ್ನರ್ ರವಿ ಬಿಷ್ಣೋಯ್, ವೇಗಿ ಅರ್ಶ್‌ದೀಪ್ ಕೂಡಾ ತಂಡದಲ್ಲಿದ್ದಾರೆ. ವರ್ಷದ ಮಹಿಳಾ ಟಿ20 ತಂಡದಲ್ಲಿ ದೀಪ್ತಿ ಶರ್ಮಾ ಇದ್ದಾರೆ.
ಪುರುಷರ ತಂಡ: ಜೈಸ್ವಾಲ್, ಫಿಲ್ ಸಾಲ್ಟ್, ಪೂರನ್, ಸೂರ್ಯ(ನಾಯಕ), ಮಾರ್ಕ್ ಚಾಪ್ಮನ್, ಸಿಕಂದರ್ ರಾಜಾ, ಅಲ್ಪೇಶ್ ರಮ್ಜಾನಿ, ಮಾರ್ಕ್ ಅಡೈರ್, ಬಿಷ್ಣೋಯ್, ರಿಚರ್ಡ್ ಎನ್‌ಗರಾವ, ಅರ್ಶ್‌ದೀಪ್.
ರವಿ ಶಾಸ್ತ್ರಿ, ಗಿಲ್‌ಗೆ ಬಿಸಿಸಿಐ ವಾರ್ಷಿಕ ಪ್ರಶಸ್ತಿ: ಇಂದು ಪ್ರದಾನ
ಹೈದರಾಬಾದ್: ಭಾರತದ ಕ್ರಿಕೆಟ್ ತಂಡದ ಮಾಜಿ ಕೋಚ್ ರವಿ ಶಾಸ್ತ್ರಿ ಬಿಸಿಸಿಐ ಜೀವಮಾನ ಸಾಧನೆ ಪುರಸ್ಕಾರಕ್ಕೆ ಪಾತ್ರರಾಗಿದ್ದು, ಶುಭಮನ್ ಗಿಲ್ ವರ್ಷದ ಕ್ರಿಕೆಟ್ ಆಟಗಾರನಾಗಿ ಆಯ್ಕೆಯಾಗಿದ್ದಾರೆ.
2019ರ ನಂತರ ಮೊದಲ ಬಾರಿಗೆ ಬಿಸಿಸಿಐ ಪ್ರಶಸ್ತಿ ಘೋಷಿಸಿದ್ದು, ಮಂಗಳವಾರ ಹೈದರಾಬಾದ್‌ನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಭಾರತದ ಪರ 80 ಟೆಸ್ಟ್ ಹಾಗೂ 150 ಏಕದಿನ ಪಂದ್ಯವಾಡಿರುವ ರವಿ ಶಾಸ್ತ್ರಿ ನಿವೃತ್ತಿಯ ನಂತರ 2014ರಿಂದ 16ರ ವರೆಗೆ ಭಾರತದ ನಿರ್ದೇಶಕರಾಗಿ, ನಂತರ 2021ರ ವರೆಗೆ ಮುಖ್ಯ ಕೋಚ್ ಆಗಿ ಕೆಲಸ ಮಾಡಿದ್ದಾರೆ. ಇನ್ನು, 2023ರಲ್ಲಿ ಗಿಲ್ ಅಭೂತಪೂರ್ವ ಪ್ರದರ್ಶನ ನೀಡಿದ್ದು, 5 ಶತಕ ಬಾರಿಸಿದ್ದಾರೆ.
)
)
;Resize=(128,128))
;Resize=(128,128))
;Resize=(128,128))
;Resize=(128,128))