ಟಿ20 ರ್‍ಯಾಂಕಿಂಗ್‌: ಟೀಂ ಇಂಡಿಯಾ ನಂ.1 ಸ್ಥಾನದಲ್ಲಿ ಭದ್ರ

| Published : May 30 2024, 12:49 AM IST / Updated: May 30 2024, 04:47 AM IST

ಸಾರಾಂಶ

ಆಸ್ಟ್ರೇಲಿಯಾ 2ನೇ ಸ್ಥಾನದಲ್ಲೆ ಮುಂದುವರಿದಿದ್ದು, ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ 3ನೇ ಸ್ಥಾನದಲ್ಲಿದೆ. 2 ಬಾರಿ ಚಾಂಪಿಯನ್‌ ವೆಸ್ಟ್‌ಇಂಡೀಸ್‌ 4ನೇ ಸ್ಥಾನಕ್ಕೇರಿದೆ.

ದುಬೈ: ಟಿ20 ವಿಶ್ವಕಪ್‌ಗೂ ಮುನ್ನ ಐಸಿಸಿ ಟಿ20 ರ್‍ಯಾಂಕಿಂಗ್‌ನಲ್ಲಿ ಭಾರತ ನಂ.1 ಕಾಯ್ದುಕೊಂಡಿದೆ. ಬುಧವಾರ ಪ್ರಕಟಗೊಂಡ ನೂತನ ರ್‍ಯಾಂಕಿಂಗ್‌ ಪಟ್ಟಿಯಲ್ಲಿ ಚೊಚ್ಚಲ ಆವೃತ್ತಿಯ ಟಿ20 ವಿಶ್ವಕಪ್‌ ಚಾಂಪಿಯನ್‌ ಭಾರತ 264 ಅಂಕಗಳನ್ನು ಹೊಂದಿದೆ. ಆಸ್ಟ್ರೇಲಿಯಾ 2ನೇ ಸ್ಥಾನದಲ್ಲೆ ಮುಂದುವರಿದಿದ್ದು, ಹಾಲಿ ಚಾಂಪಿಯನ್‌ ಇಂಗ್ಲೆಂಡ್‌ 3ನೇ ಸ್ಥಾನದಲ್ಲಿದೆ. 

2 ಬಾರಿ ಚಾಂಪಿಯನ್‌ ವೆಸ್ಟ್‌ಇಂಡೀಸ್‌ 4ನೇ ಸ್ಥಾನಕ್ಕೇರಿದ್ದು, ನ್ಯೂಜಿಲೆಂಡ್‌, ಪಾಕಿಸ್ತಾನ, ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ತಂಡಗಳು ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ. ಇನ್ನು, ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ಸೂರ್ಯಕುಮಾರ್‌ ಯಾದವ್‌ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ.

ಚಾಲೆಂಜ್‌ ಕಪ್‌: ಭಾರತ ಮಹಿಳಾ ವಾಲಿಬಾಲ್‌ ತಂಡಕ್ಕೆ ಐದನೇ ಸ್ಥಾನ

ಮಾನಿಲಾ(ಫಿಲಿಪ್ಪೀನ್ಸ್‌): ಇಲ್ಲಿ ಬುಧವಾರ ಕೊನೆಗೊಂಡ ಎವಿಸಿ ಮಹಿಳಾ ಚಾಲೆಂಜ್‌ ಕಪ್‌ ವಾಲಿಬಾಲ್‌ ಟೂರ್ನಿಯಲ್ಲಿ ಭಾರತ ಮಹಿಳಾ ತಂಡ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಮೇ 22ರಿಂದ ಶುರುವಾದ ಕೂಟದ ಕೊನೆ ದಿನವಾದ ಬುಧವಾರ ಭಾರತ ತಂಡ ಇರಾನ್‌ ವಿರುದ್ಧ 3-0 ಅಂತರದಲ್ಲಿ ಜಯಭೇರಿ ಬಾರಿಸಿತು. ನಾಯಕಿ ಜಿನಿ, ಬ್ಲಾಕರ್‌ ಸೂರ್ಯ, ಅನುಶ್ರೀ ಹಾಗೂ ಶಿಲ್ಪಾ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. 2022ರಲ್ಲಿ ಭಾರತ ಕಂಚಿನ ಪದಕ ಗೆದ್ದಿತ್ತು.