ಇಂಡಿಯಾ ಓಪನ್‌: ಪ್ರಣಯ್‌ ಹೋರಾಟ ಅಂತ್ಯ

| Published : Jan 21 2024, 01:34 AM IST

ಸಾರಾಂಶ

ಇಂಡಿಯಾ ಓಪನ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಟೂರ್ನಿಯ ಪುರುಷರ ಸೆಮಿ ಫೈನಲ್‌ನಲ್ಲಿ ಭಾರತದ ತಾರಾ ಟೆನಿಸಿಗ ಎಚ್‌.ಎಸ್‌.ಪ್ರಣಯ್‌ ಸೋಲು ಅನುಭವಿಸಿದ್ದಾರೆ.

ನವದೆಹಲಿ: ಇಂಡಿಯಾ ಓಪನ್‌ ಸೂಪರ್‌ 750 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ತಾರಾ ಟೆನಿಸಿಗ ಎಚ್‌.ಎಸ್‌.ಪ್ರಣಯ್‌ ಅಭಿಯಾನ ಕೊನೆಗೊಂಡಿದೆ.ವಿಶ್ವ ರ್‍ಯಾಂಕಿಂಗ್‌ನಲ್ಲಿ 9ನೇ ಸ್ಥಾನದಲ್ಲಿರುವ ಪ್ರಣಯ್‌, ಶನಿವಾರ ನಡೆದ ಪುರುಷರ ಸಿಂಗಲ್ಸ್‌ ಸೆಮಿಫೈನಲ್‌ನಲ್ಲಿ ಚೀನಾದ ಶಿಯು ಖಿ ವಿರುದ್ಧ 21-15, 21-5 ಗೇಮ್‌ಗಳಲ್ಲಿ ಸೋಲನುಭವಿಸಿದರು. ಟೂರ್ನಿಯುದ್ದಕ್ಕೂ ಅತ್ಯುತ್ತಮ ಆಟ ಪ್ರದರ್ಶಿಸಿದ್ದ ಪ್ರಣಯ್‌ ಪ್ರಶಸ್ತಿ ಗೆಲ್ಲುವ ಫೇವರಿಟ್‌ ಎನಿಸಿಕೊಂಡಿದ್ದರು. ಆದರೆ ಸೆಮೀಸ್‌ನಲ್ಲಿ ವಿಶ್ವ ನಂ.2 ಶಿಯು ನೀಡಿದ ಸವಾಲು ಎದುರಿಸಿ ಪ್ರಣಯ್‌ಗೆ ಗೆಲ್ಲಲಾಗಲಿಲ್ಲ. ಐಪಿಎಲ್‌ ಸ್ಥಳಾಂತರ ಬಗ್ಗೆ

ನಿರ್ಧಾರವಾಗಿಲ್ಲ: ಶುಕ್ಲಾ

ನವದೆಹಲಿ: ಮುಂಬರುವ ಐಪಿಎಲ್‌ ಎಲ್ಲಿ ನಡೆಸಬೇಕು ಎಂಬುದರ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್‌ ಶುಕ್ಲಾ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮವೊಂದಕ್ಕೆ ಮಾಹಿತಿ ನೀಡಿರುವ ಅವರು, ಐಪಿಎಲ್‌ ಭಾರತದಲ್ಲೋ ಅಥವಾ ಸ್ಥಳಾಂತರಗೊಳ್ಳಲಿದೆಯೋ ಎಂಬುದು ಸರ್ಕಾರದೊಂದಿನ ಚರ್ಚೆ ನಂತರ ಗೊತ್ತಾಗಲಿದೆ. ಈಗ ಮಾತುಕತೆ ನಡೆಯುತ್ತಿದೆ ಎಂದಿದ್ದಾರೆ. ಇನ್ನು, ಈ ಬಾರಿ ಡಬ್ಲ್ಯುಪಿಎಲ್‌ಗೆ ಬೆಂಗಳೂರು ಮತ್ತು ಡೆಲ್ಲಿ ನಗರಗಳು ಆತಿಥ್ಯ ವಹಿಸಲಿವೆ ಎಂದು ಸ್ಪಷ್ಟಪಡಿಸಿದ್ದಾರೆ.