ಮಹಿಳಾ ಟಿ 20 ವಿಶ್ವಕಪ್‌ ವೇಳಾಪಟ್ಟಿ ಪ್ರಕಟ : ಭಾರತ vs ಪಾಕ್‌ ಪಂದ್ಯಕ್ಕೆ ಅ.6ರಂದು ದುಬೈ ಆತಿಥ್ಯ

| Published : Aug 27 2024, 01:37 AM IST / Updated: Aug 27 2024, 04:12 AM IST

ಸಾರಾಂಶ

‘ಬಿ’ ಗುಂಪಿನಲ್ಲಿರುವ ಭಾರತ ಅ.4ರಂದು ನ್ಯೂಜಿಲೆಂಡ್‌, ಅ.9ಕ್ಕೆ ಶ್ರೀಲಂಕಾ, ಅ.13ಕ್ಕೆ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ. ಅ.17 ಹಾಗೂ 18ಕ್ಕೆ ಸೆಮಿಫೈನಲ್‌, ಅ.20ರಂದು ಫೈನಲ್‌ ಪಂದ್ಯ ನಿಗದಿಯಾಗಿದೆ.

ದುಬೈ: ಬಾಂಗ್ಲಾದೇಶದಿಂದ ಯುಎಇಗೆ ಸ್ಥಳಾಂತರಗೊಂಡಿದ್ದ ಈ ಬಾರಿಯ ಮಹಿಳಾ ಟಿ20 ವಿಶ್ವಕಪ್‌ನ ಪಂದ್ಯಗಳ ಪರಿಷ್ಕೃತ ವೇಳಾಪಟ್ಟಿಯನ್ನು ಸೋಮವಾರ ಐಸಿಸಿ ಪ್ರಕಟಿಸಿದೆ. ಅಕ್ಟೋಬರ್‌ 6ರಂದು ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ದುಬೈ ಕ್ರೀಡಾಂಗಣ ಆತಿಥ್ಯ ವಹಿಸಲಿದೆ.ಟೂರ್ನಿ ಅ.3ರಂದು ಆರಂಭಗೊಳ್ಳಲಿದ್ದು, ಒಟ್ಟು 23 ಪಂದ್ಯಗಳು ನಡೆಯಲಿವೆ.

ಎಲ್ಲಾ ಪಂದ್ಯಗಳಿಗೂ ದುಬೈ ಹಾಗೂ ಶಾರ್ಜಾ ಕ್ರೀಡಾಂಗಣ ಆತಿಥ್ಯ ವಹಿಸಲಿವೆ. ಭಾರತ ‘ಎ’ ಗುಂಪಿನಲ್ಲಿ ಪಾಕ್‌, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ಹಾಗೂ ಶ್ರೀಲಂಕಾ ಜೊತೆ ಸ್ಥಾನ ಗಿಟ್ಟಿಸಿಕೊಂಡಿವೆ. ‘ಬಿ’ ಗುಂಪಿನಲ್ಲಿ ದ.ಆಫ್ರಿಕಾ, ಬಾಂಗ್ಲಾದೇಶ, ಇಂಗ್ಲೆಂಡ್‌, ವೆಸ್ಟ್‌ಇಂಡೀಸ್‌, ಸ್ಕಾಟ್ಲೆಂಡ್‌ ತಂಡಗಳಿವೆ. ಭಾರತ ಅ.4ರಂದು ನ್ಯೂಜಿಲೆಂಡ್‌, ಅ.9ಕ್ಕೆ ಶ್ರೀಲಂಕಾ, ಅ.13ಕ್ಕೆ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿದೆ. ಅ.17 ಹಾಗೂ 18ಕ್ಕೆ ಸೆಮಿಫೈನಲ್‌, ಅ.20ರಂದು ಫೈನಲ್‌ ಪಂದ್ಯ ನಿಗದಿಯಾಗಿದೆ.

ಡುರಾಂಡ್‌ ಕಪ್‌: ಇಂದು ಬಿಎಫ್‌ಸಿ-ಬಗಾನ್‌ ಸೆಮಿ

ಕೋಲ್ಕತಾ: ಏಷ್ಯಾದ ಅತ್ಯಂತ ಹಳೆದ ಫುಟ್ಬಾಲ್‌ ಟೂರ್ನಿಯಾಗಿರುವ ಪ್ರತಿಷ್ಠಿತ ಡುರಾಂಡ್‌ ಕಪ್‌ನ ಸೆಮಿಫೈನಲ್‌ನಲ್ಲಿ ಮಂಗಳವಾರ ಮಾಜಿ ಚಾಂಪಿಯನ್‌ ಬೆಂಗಳೂರು ಎಫ್‌ಸಿ ಹಾಗೂ ಹಾಲಿ ಚಾಂಪಿಯನ್‌ ಮೋಹನ್‌ ಬಗಾನ್‌ ತಂಡಗಳು ಸೆಣಸಾಡಲಿವೆ. 

ಇತ್ತಂಡಗಳೂ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿವೆ. ಸುನಿಲ್‌ ಚೆಟ್ರಿ ನಾಯಕತ್ವದ ಬಿಎಫ್‌ಸಿ 4 ಪಂದ್ಯಗಳಲ್ಲಿ 11 ಗೋಲು ಬಾರಿಸಿ, ಕೇವಲ 2 ಗೋಲು ಬಿಟ್ಟುಕೊಟ್ಟಿದ್ದರೆ, ಮೋಹನ್‌ ಬಗಾನ್‌ 10 ಗೋಲು ದಾಖಲಿಸಿ, 3 ಗೋಲನ್ನು ಬಿಟ್ಟುಕೊಟ್ಟಿದೆ. ಬೆಂಗಳೂರು 2022ರ ಬಳಿಕ ಮತ್ತೆ ಫೈನಲ್‌ಗೇರುವ ಕಾತರದಲ್ಲಿದ್ದರೆ, 17 ಬಾರಿ ಚಾಂಪಿಯನ್‌ ಮೋಹನ್‌ ಬಗಾನ್‌ ದಾಖಲೆಯ 30ನೇ ಬಾರಿ ಪ್ರಶಸ್ತಿ ಸುತ್ತಿಗೇರಲು ಕಾಯುತ್ತಿದೆ.ಪಂದ್ಯ: ಸಂಜೆ 5.30ಕ್ಕೆ, ನೇರಪ್ರಸಾರ: ಸೋನಿ ಸ್ಪೋರ್ಟ್ಸ್‌, ಸೋನಿ ಲೈವ್‌