ಕೊನೆಗೂ ಎಚ್ಚೆತ್ತ ಪಿಸಿಬಿ : ಕರಾಚಿ ಕ್ರೀಡಾಂಗಣದಲ್ಲಿ ಹಾರಾಡಿತು ಭಾರತದ ತ್ರಿವರ್ಣ ಧ್ವಜ

| N/A | Published : Feb 20 2025, 12:50 AM IST / Updated: Feb 20 2025, 04:10 AM IST

ಸಾರಾಂಶ

ಬುಧವಾರ ಪಾಕಿಸ್ತಾನ-ನ್ಯೂಜಿಲೆಂಡ್‌ ಪಂದ್ಯದ ವೇಳೆ ಕರಾಚಿ ಮೈದಾನದಲ್ಲಿ ಭಾರತದ ಧ್ವಜವನ್ನು ಇತರ ರಾಷ್ಟ್ರಗಳ ಧ್ವಜದ ಜೊತೆಗೇ ಹಾರಿಸಲಾಗಿದೆ.

ಕರಾಚಿ: ವಿವಾದದ ಬಳಿಕ ಎಚ್ಚೆತ್ತುಕೊಂಡಿರುವ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) ಚಾಂಪಿಯನ್ಸ್‌ ಟ್ರೋಫಿ ಉದ್ಘಾಟನಾ ಪಂದ್ಯದ ವೇಳೆ ಕರಾಚಿ ಕ್ರೀಡಾಂಗಣದಲ್ಲಿ ಭಾರತದ ಧ್ವಜವನ್ನು ಹಾರಿಸಿದೆ. ಇತ್ತೀಚೆಗೆ, ಚಾಂಪಿಯನ್ಸ್‌ ಟ್ರೋಫಿಯಲ್ಲಿ ಭಾಗವಹಿಸುವ ಎಲ್ಲಾ ತಂಡಗಳ ರಾಷ್ಟ್ರೀಯ ಧ್ವಜವನ್ನು ಕರಾಚಿ ಹಾಗೂ ಲಾಹೋರ್‌ ಕ್ರೀಡಾಂಗಣದಲ್ಲಿ ಅಳವಡಿಸಲಾಗಿತ್ತು. ಆದರೆ ಎರಡೂ ಕ್ರೀಡಾಂಗಣಗಲ್ಲಿ ಭಾರತದ ಧ್ವಜ ಇರಲಿಲ್ಲ. ಇದು ವಿವಾದಕ್ಕೆ ಕಾರಣವಾಗಿತ್ತು. ಆದರೆ ಬುಧವಾರ ಪಾಕಿಸ್ತಾನ-ನ್ಯೂಜಿಲೆಂಡ್‌ ಪಂದ್ಯದ ವೇಳೆ ಕರಾಚಿ ಮೈದಾನದಲ್ಲಿ ಭಾರತದ ಧ್ವಜವನ್ನು ಇತರ ರಾಷ್ಟ್ರಗಳ ಧ್ವಜದ ಜೊತೆಗೇ ಹಾರಿಸಲಾಗಿದೆ.

ಟೂರ್ನಿಗೆ ಪಾಕಲ್ಲಿ ಖಾಲಿ ಕ್ರೀಡಾಂಗಣದ ಸ್ವಾಗತ

ಪಾಕಿಸ್ತಾನದಲ್ಲಿ ಬರೋಬ್ಬರಿ 29 ವರ್ಷಗಳ ಬಳಿಕ ಐಸಿಸಿ ಟೂರ್ನಿ ನಡೆಯುತ್ತಿದೆ. ಅಲ್ಲದೆ, ಟೂರ್ನಿಗಾಗಿಯೇ ಪಿಸಿಬಿ ನೂರಾರು ಕೋಟಿ ಹಣ ಸುರಿದು ಕ್ರೀಡಾಂಗಣಗಳನ್ನು ನವೀಕರಣಗೊಳಿಸಿದೆ. ಆದರೆ ಬುಧವಾರ ಪಂದ್ಯಕ್ಕೆ ನಿರೀಕ್ಷಿತ ಜನ ಸೇರಲಿಲ್ಲ. ಕ್ರೀಡಾಂಗಣದ ಹಲವು ಸ್ಟ್ಯಾಂಡ್‌ಗಳು ಖಾಲಿಯಾಗಿದ್ದವು. ‘ಭಾರತದಲ್ಲಿ ಮಹಿಳಾ ಐಪಿಎಲ್‌ಗೆ ಸಾವಿರಾರು ಜನ ಸೇರುತ್ತಾರೆ, ಪಾಕಿಸ್ತಾನದಲ್ಲಿ ಐಸಿಸಿ ಟೂರ್ನಿಗೂ ಜನ ಇಲ್ಲ’ ಎಂದು ಸಾಮಾಜಿಕ ತಾಣಗಳಲ್ಲಿ ಭಾರೀ ಟ್ರೋಲ್‌ ಆಗಿದೆ.